ಹೈದರಾಬಾದ್: ಇಂಡೋನೇಷ್ಯಾದ ವ್ಯಕ್ತಿಯೊಬ್ಬರು 88ನೇ ಮದುವೆಯಾಗಲು ಸಜ್ಜಾಗಿದ್ದಾರೆ. ಹೌದು, ಇದನ್ನು ನಂಬಿದರೆ ನಂಬಿ ಅಥವಾ ಬಿಡಿ. ಆದರೆ, ವಿಚಿತ್ರ ಅನಿಸಿದರೂ ನಿಜ. ಇಂಡೋನೇಷ್ಯಾದ ಪಶ್ಚಿಮ ಜಾವಾದ ಮಜಲೆಂಗ್ಕಾದ 61 ವರ್ಷದ ಕಾನ್ ಎಂಬ ಹೆಸರಿನ ವ್ಯಕ್ತಿಯೇ 88ನೇ ವಿವಾಹವಾಗಲು ಮುಂದಾಗಿದ್ದಾರೆ. ಇಷ್ಟು ಮದುವೆಗಳಾಗಿರುವ ಕಾರಣಕ್ಕಾಗಿಯೇ ಈತನನ್ನು ಪ್ಲೇಬಾಯ್ ಕಿಂಗ್ ಎಂದೇ ಕರೆಯಲಾಗುತ್ತದೆ.
ಮತ್ತೊಂದು ಅಚ್ಚರಿ ಎಂದರೆ ಸದ್ಯ ಕಾನ್ ಮದುವೆ ಆಗುತ್ತಿರುವ ನವವಧು ಆತನ ಮಾಜಿ ಪತ್ನಿಯೇ. ರೈತನಾದ ಈ ಕಾನ್ ತನ್ನ 14ನೇ ವಯಸ್ಸಿನಲ್ಲೇ ಮೊದಲ ಮದುವೆಯಾಗಿದ್ದರು. ಈತನ ಮೊದಲ ಪತ್ನಿ ಈತನಗಿಂತ ಎರಡು ವರ್ಷ ದೊಡ್ಡವಳು ಆಗಿದ್ದರು. ಆದರೆ, ಮದುವೆಯಾದ ಎರಡು ವರ್ಷದಲ್ಲಿ ಆಕೆ ವಿಚ್ಛೇದನ ಕೇಳಿದ್ದರಿಂದ ಇಬ್ಬರು ದೂರವಾಗಿದ್ದೇವೆ ಎಂದು ಕಾನ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಆಕೆ ವಯಸ್ಸು 26.. ಮದುವೆ 6... 7ನೇ ಮದುವೆಯಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದ ಗಂಡ!