ನವದೆಹಲಿ:ಕೆಲ ದಿನಗಳ ಹಿಂದೆ ಸ್ಪೈಸ್ಜೆಟ್ ಏರ್ಲೈನ್ಸ್ ವಿಮಾನ ತಾಂತ್ರಿಕ ದೋಷ ಉಂಟಾಗಿ ಪಾಕಿಸ್ತಾನದ ಕರಾಚಿಯಲ್ಲಿ ಇಳಿದಿತ್ತು. ಇದೀಗ ಇಂಡಿಗೋ ವಿಮಾನವೂ ಕೂಡ ದೋಷದಿಂದಾದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಕಂಡಿದೆ. ಇದು ವಿಮಾನಗಳ ಸುರಕ್ಷಿತ ಹಾರಾಟದ ಮೇಲೆಯೇ ಕರಿಛಾಯೆ ಉಂಟು ಮಾಡಿದೆ.
ಇಂಡಿಗೋದ 6ಇ 1406 ವಿಮಾನ ಶಾರ್ಜಾದಿಂದ ಹೈದರಾಬಾದ್ಗೆ ಬರಬೇಕಿತ್ತು. ಈ ವೇಳೆ ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾಗಿದ್ದನ್ನು ಪೈಲಟ್ ಪತ್ತೆ ಮಾಡಿದ್ದಾರೆ. ಬಳಿಕ ಅಧಿಕಾರಿಗಳಿಗೆ ಮಾಹಿತಿ ನೀಡಿ ತುರ್ತು ಭೂಸ್ಪರ್ಶಕ್ಕೆ ಕೋರಿದ್ದಾರೆ. ಅದರಂತೆ ವಿಮಾನವನ್ನು ತಕ್ಷಣವೇ ಪಾಕಿಸ್ತಾನದ ಕರಾಚಿಯಲ್ಲಿ ಇಳಿಸಲು ಸೂಚಿಸಲಾಗಿದೆ.