ವಿಶ್ವಸಂಸ್ಥೆ:ಕೊರೊನಾ ಬಳಿಕ ವಿಶ್ವದಲ್ಲಿ ನಗರವಾಸಿಗಳ ಸಂಖ್ಯೆ ಏರುಗತಿಯಲ್ಲಿ ಸಾಗಿದೆ. ಭಾರತದಲ್ಲಿ 2035 ರ ವೇಳೆಗೆ ನಗರವಾಸಿಗಳ ಸಂಖ್ಯೆ 675 ಮಿಲಿಯನ್ ದಾಟಲಿದೆ. ಚೀನಾಕ್ಕಿಂತ 1 ಬಿಲಿಯನ್ ಹಿಂದಿರಲಿದೆ ಎಂದು ವರದಿಯೊಂದು ತಿಳಿಸಿದೆ.
ಕೊರೊನಾ ಅಬ್ಬರಿಸಿದ ಕಾರಣ ನಗರದಿಂದ ವಲಸೆ ಹೋಗಿದ್ದ ಜನರು ಇದೀಗ ಮತ್ತೆ ವಾಪಸ್ ನಗರಗಳಿಗೆ ಎಡತಾಕುತ್ತಿದ್ದಾರೆ. ಹೀಗಾಗಿ ನಗರವಾಸಿಗಳ ಸಂಖ್ಯೆ ಮತ್ತೆ ದಿಢೀರ್ ಏರಿಕೆಯಾಗಿದೆ. 2050 ರ ವೇಳೆಗೆ ಈ ಸಂಖ್ಯೆ 2.2 ಬಿಲಿಯನ್ ದಾಟಲಿದೆ ಎಂದು ವಿಶ್ವಸಂಸ್ಥೆಯ ಹ್ಯಾಬಿಟಾಟ್‌ನ ವಿಶ್ವ ನಗರಗಳ ವರದಿಯಲ್ಲಿ ಹೇಳಲಾಗಿದೆ. ನಗರೀಕರಣವು ಕೊರೊನಾ ಸಾಂಕ್ರಾಮಿಕದಿಂದ ತಾತ್ಕಾಲಿಕವಾಗಿ ವಿಳಂಬ ಹಾದಿಯಲ್ಲಿದೆ ಎಂದೂ ವರದಿ ಹೇಳಿದೆ.
ಜಾಗತಿಕವಾಗಿ ನಗರಗಲ್ಲಿ ವಾಸಿಸುವ ಜನಸಂಖ್ಯೆಯು 2050 ರ ವೇಳೆಗೆ ಇನ್ನೂ 2.2 ಶತಕೋಟಿ ಬೆಳೆಯಲಿದೆ. ಭಾರತದ ನಗರ ಜನಸಂಖ್ಯೆಯು 2035 ರ ವೇಳೆಗೆ 675 ಮಿಲಿಯನ್ ಆಗಲಿದೆ ಎಂದು ವರದಿ ಅಂದಾಜಿಸಿದೆ. 2020 ರಲ್ಲಿ ಈ ಸಂಖ್ಯೆ 483 ಮಿಲಿಯನ್ ಇದ್ದರೆ, 2025 ರಲ್ಲಿ 542 ಮಿಲಿಯನ್ ಹೆಚ್ಚಲಿದೆ. ಇದು ಜನಸಂಖ್ಯೆಯ ಶೇ.43.2 ರಷ್ಟಾಗಲಿದೆ ಎಂದು ಅದು ಹೇಳಿದೆ.
2035 ರಲ್ಲಿ ಚೀನಾದ ನಗರ ಜನಸಂಖ್ಯೆಯು 1.05 ಬಿಲಿಯನ್ ದಾಟಲಿದೆ ಎಂದು ಅಂದಾಜಿಸಿರುವ ವರದಿ, ಏಷ್ಯಾದ ನಗರ ಜನಸಂಖ್ಯೆಯು 2035 ರಲ್ಲಿ 2.99 ಬಿಲಿಯನ್ ಮೀರಿದರೆ, ದಕ್ಷಿಣ ಏಷ್ಯಾದಲ್ಲಿ 987 ಮಿಲಿಯನ್ ಹೆಚ್ಚಲಿದೆ. ಚೀನಾ ಮತ್ತು ಭಾರತದಂತಹ ದೊಡ್ಡ ಆರ್ಥಿಕತೆ ರಾಷ್ಟ್ರಗಳೇ ವಿಶ್ವದ ಇಡೀ ಜನಸಂಖ್ಯೆಯಲ್ಲಿ ಹೆಚ್ಚಿನ ಪಾಲು ಹೊಂದಿವೆ. ಈ ದೇಶಗಳ ಅಭಿವೃದ್ಧಿ ಪಥಗಳು ಜಾಗತಿಕವಾಗಿ ಹೆಚ್ಚು ಪ್ರಭಾವ ಬೀರಿವೆ ಎಂದು ವರದಿ ಹೇಳಿದೆ.
ಇದನ್ನೂ ಓದಿ:ಕಾಂಗೋದಲ್ಲಿ ಮಹಿಳೆ ಅಪಹರಿಸಿ ಅತ್ಯಾಚಾರ ಮಾಡಿ, ಮಾನವನ ಮಾಂಸ ತಿನ್ನಿಸಿದ ಉಗ್ರರು!