ಕರ್ನಾಟಕ

karnataka

ETV Bharat / international

ಅಮೆರಿಕದಲ್ಲಿ 64 ಲಕ್ಷಕ್ಕೂ ಹೆಚ್ಚು ಅಕ್ರಮ ವಲಸಿಗರು: ಭಾರತೀಯರೆಷ್ಟು ಗೊತ್ತೇ? - United States

ಭಾರತ ಮೂಲದ ಸುಮಾರು 7,25,000 ಅಕ್ರಮ ವಲಸಿಗರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ- ಪ್ಯೂ ಸಂಶೋಧನಾ ಕೇಂದ್ರದ ಅಧ್ಯಯನ ವರದಿ

Pew Research Centre
ಅಮೆರಿಕದಲ್ಲಿ ಮೂರನೇ ಅತಿ ದೊಡ್ಡ ಭಾರತೀಯ ಅಕ್ರಮ ವಲಸಿಗರು: ಪ್ಯೂ ವರದಿಯಿಂದ ಮಾಹಿತಿ ಬಹಿರಂಗ

By PTI

Published : Nov 23, 2023, 9:48 AM IST

ವಾಷಿಂಗ್ಟನ್: ಅಮೆರಿಕ​ದಲ್ಲಿ ಭಾರತವು ಮೂರನೇ ಅತಿ ದೊಡ್ಡ ಅಕ್ರಮ ವಲಸಿಗ ಜನಸಂಖ್ಯೆ ಹೊಂದಿದೆ. ಪ್ಯೂ ಸಂಶೋಧನಾ ಕೇಂದ್ರದ ಇತ್ತೀಚಿನ ಅಧ್ಯಯನದಿಂದ ಈ ಮಾಹಿತಿ ಬಹಿರಂಗವಾಗಿದೆ. 7,25,000ಕ್ಕೂ ಹೆಚ್ಚು ಭಾರತೀಯರು ಪ್ರಸ್ತುತ ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂದು ವಾಷಿಂಗ್ಟನ್ ಮೂಲದ ಚಿಂತಕರ ಚಾವಡಿ ನಡೆಸಿದ ಅಧ್ಯಯನ ತಿಳಿಸಿದೆ.

2017ರಿಂದ 2021ರವರೆಗೆ ನೆರೆಯ ಮೆಕ್ಸಿಕೋದಿಂದ ಅತಿ ಹೆಚ್ಚು ಅಕ್ರಮ ವಲಸಿಗರು ಅಮೆರಿಕದಲ್ಲಿ ನೆಲೆ ಕಂಡುಕೊಂಡಿದ್ದಾರೆ. 2017ರಿಂದ ಎಲ್ ಸಾಲ್ವಡಾರ್ ಮತ್ತು ಭಾರತದಿಂದ ಅಕ್ರಮವಾಗಿ ವಲಸೆ ಬರುವವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಳವಾಗಿದೆ. 2007ರಲ್ಲಿ ಬಂದಿರುವ ವಲಸಿಗರ ಸಂಖ್ಯೆ 12.2 ಮಿಲಿಯನ್​ ತಲುಪಿತ್ತು. 2021ರಲ್ಲಿ ಅಮೆರಿಕದಲ್ಲಿ ಅಕ್ರಮ ವಲಸಿಗರ ಒಟ್ಟು ಜನಸಂಖ್ಯೆ 10.5 ಮಿಲಿಯನ್ ತಲುಪಿದೆ ಎಂದು ಅಧ್ಯಯನ ಹೇಳಿದೆ.

ವಿಶ್ವದ ಪ್ರತಿಯೊಂದು ಪ್ರದೇಶದಿಂದಲೂ ಅಮೆರಿಕಕ್ಕೆ ಬರುವ ಅಕ್ರಮ ವಲಸಿಗರ ಸಂಖ್ಯೆ ಏರುಗತಿಯಲ್ಲಿ ಸಾಗಿದೆ. ಮಧ್ಯ ಅಮೆರಿಕ, ಕೆರಿಬಿಯನ್ ದೇಶಗಳು, ದಕ್ಷಿಣ ಅಮೆರಿಕ, ಏಷ್ಯಾ, ಯುರೋಪ್ ಮತ್ತು ಸಬ್​- ಸಹಾರನ್ ಆಫ್ರಿಕಾದಿಂದ ಜನರು ಇಲ್ಲಿಗೆ ಬಂದಿದ್ದಾರೆ ಎಂದು ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.

ಪ್ಯೂ ಅಧ್ಯಯನದ ಪ್ರಕಾರ, ಕ್ಯಾಲಿಫೋರ್ನಿಯಾ (1.9 ಮಿಲಿಯನ್), ಟೆಕ್ಸಾಸ್ (1.6 ಮಿಲಿಯನ್), ಫ್ಲೋರಿಡಾ (900,000), ನ್ಯೂಯಾರ್ಕ್ (600,000), ನ್ಯೂಜೆರ್ಸಿ (450,000) ಮತ್ತು ಇಲಿನಾಯ್ಸ್‌ (400,000), ಗ್ವಾಟೆಮಾಲಾ (700,000) ಮತ್ತು ಹೊಂಡುರಾಸ್ (525,000) ರಾಜ್ಯ ಅತಿ ಹೆಚ್ಚು ಅಕ್ರಮ ವಲಸಿಗರನ್ನು ಹೊಂದಿದೆ. ಫ್ಲೋರಿಡಾ ಮತ್ತು ವಾಷಿಂಗ್ಟನ್​ನಲ್ಲಿ ಅಕ್ರಮ ವಲಸಿಗರ ಜನಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಉಳಿದೆಲ್ಲ ರಾಜ್ಯಗಳಲ್ಲಿ ವಲಸಿಗರ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಪ್ಯೂ ರಿಸರ್ಚ್ ಸೆಂಟರ್‌ನ ಅಂದಾಜಿನಂತೆ, ಅಮೆರಿಕದ ಗ್ವಾಟೆಮಾಲಾ ಮತ್ತು ಹೊಂಡುರಾಸ್​ನಲ್ಲಿ ಅನಧಿಕೃತ ವಲಸೆ ಜನಸಂಖ್ಯೆ 10.5 ಮಿಲಿಯನ್‌ಗೆ 2021ರಲ್ಲಿ ಏರಿದೆ. 2017-2021ರ ಅವಧಿಯಲ್ಲಿ ಅಮೆರಿಕದಲ್ಲಿ ಕಾನೂನುಬದ್ಧ ವಲಸಿಗರ ಜನಸಂಖ್ಯೆ 8 ಮಿಲಿಯನ್‌ಗಿಂತಲೂ ಹೆಚ್ಚಿದೆ. ಒಟ್ಟಾರೆಯಾಗಿ, 2021ರಲ್ಲಿ ಶೇ.14.1ರಷ್ಟು ವಿದೇಶಿ ಮೂಲದ ಜನಸಂಖ್ಯೆಯು ಹಿಂದಿನ ಐದು ವರ್ಷಗಳಿಗಿಂತ ಸ್ವಲ್ಪ ಹೆಚ್ಚಾಗಿದೆ. 2021ರಲ್ಲಿ ಕನಿಷ್ಠ ಶೇ 4.6ರಷ್ಟು ಅಮೆರಿಕದಲ್ಲಿರುವ ಉದ್ಯೋಗಿಗಳು ಅಕ್ರಮ ವಲಸಿಗರು ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನೂ ಓದಿ:ಮಸೀದಿಗಳನ್ನು ಮುಚ್ಚಿಸುವ ಕಾರ್ಯಾಚರಣೆ ವಿಸ್ತರಿಸಿದ ಚೀನಾ; ಹ್ಯೂಮನ್ ರೈಟ್ಸ್ ವಾಚ್ ವರದಿ

ABOUT THE AUTHOR

...view details