ಕರ್ನಾಟಕ

karnataka

ETV Bharat / international

ಅಮೆರಿಕದ ಫಿಲಡೆಲ್ಫಿಯಾದಲ್ಲಿ ಗುಂಡಿನ ದಾಳಿ; ಕೇರಳ ಮೂಲದ ವಿದ್ಯಾರ್ಥಿ ಹತ್ಯೆ - Student Jude Chacko

ಅಮೆರಿಕದಲ್ಲಿ ಮತ್ತೆ ದುಷ್ಕರ್ಮಿಗಳ ಗುಂಡಿನ ದಾಳಿಗೆ ಭಾರತೀಯ ಮೂಲದ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ.

ಅಮೆರಿಕಾ ಶೂಟೌಟ್​
ಅಮೆರಿಕಾ ಶೂಟೌಟ್​

By

Published : May 30, 2023, 9:29 AM IST

Updated : May 30, 2023, 10:08 AM IST

ಫಿಲಡೆಲ್ಫಿಯಾ (ಅಮೆರಿಕ):ಅಮೆರಿಕದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣಗಳಿಗೆ ಕಡಿವಾಣ ಬೀಳುತ್ತಿಲ್ಲ. ಇತ್ತೀಚೆಗೆ ತೆಲಂಗಾಣದ ಐಶ್ವರ್ಯ ಎಂಬ ಸಾಫ್ಟ್‌ವೇರ್ ಎಂಜಿನಿಯರ್‌ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದರು. ಈ ಘಟನೆಯ ಬೆನ್ನಲ್ಲೇ ಇದೀಗ ಮತ್ತೊಂದು ದಾಳಿ ನಡೆದಿದ್ದು, ಭಾರತೀಯ ಮೂಲದ ವಿದ್ಯಾರ್ಥಿ ಹತ್ಯೆಯಾಗಿದ್ದಾರೆ. ಫಿಲಡೆಲ್ಫಿಯಾದಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, 21 ವರ್ಷದ ವಿದ್ಯಾರ್ಥಿ ಜೂಡ್ ಚಾಕೋ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.

ಜೂಡ್ ಚಾಕೋ ಪೋಷಕರು ಕೇರಳದ ಕೊಲ್ಲಂ ಜಿಲ್ಲೆಯಿಂದ ಸುಮಾರು 30 ವರ್ಷಗಳ ಹಿಂದೆ ಅಮೆರಿಕದಲ್ಲಿ ಬಂದು ನೆಲೆಸಿದ್ದರು. ವಿದ್ಯಾರ್ಥಿ ಅರೆಕಾಲಿಕ ಕೆಲಸ ಮಾಡುತ್ತಿದ್ದರು. ದರೋಡೆ ಯತ್ನದ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಇವರ ಮೇಲೆ ಗುಂಡು ಹಾರಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಏಪ್ರಿಲ್ 21, 2023 ರಂದು ಆಂಧ್ರ ಪ್ರದೇಶದ 24 ವರ್ಷದ ವಿದ್ಯಾರ್ಥಿಯನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಸಾಯೇಶ್ ವೀರ ಎಂಬವರು ಓಹಿಯೋದಲ್ಲಿನ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದ ವೇಳೆ ಅಪರಿಚಿತರು ಗುಂಡು ಹಾರಿಸಿದ್ದರು ಎಂದು ಕೊಲಂಬಸ್ ವಿಭಾಗದ ಪೊಲೀಸರು ತಿಳಿಸಿದ್ದರು.

ಇದನ್ನೂ ಓದಿ:ಮುಂದುವರಿದ ಸುಡಾನ್​ ಸಂಘರ್ಷ: 866 ಸಾವು, 14 ಲಕ್ಷ ಜನ ಸ್ಥಳಾಂತರ

ಫ್ಲೋರಿಡಾದ ಹಾಲಿವುಡ್ ಬ್ರಾಡ್‌ವಾಕ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ: ಹಾಲಿವುಡ್ ಬ್ರಾಡ್‌ವಾಕ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು, ಅಪ್ರಾಪ್ತರು ಸೇರಿದಂತೆ ಒಟ್ಟು ಒಂಭತ್ತು ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ದಾಳಿಯಲ್ಲಿ ಮೂರು ಮಂದಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಎನ್ ಬ್ರಾಡ್‌ವಾಕ್‌ನ 1200 ಬ್ಲಾಕ್‌ನಲ್ಲಿ ಸೋಮವಾರ ಸಂಜೆ 2 ಗುಂಪಿನ ನಡುವೆ ವಾಗ್ವಾದ ನಡೆದಿದೆ. ಇದೇ ವಾಗ್ವಾದ ಮುಂದೆ ಸಾಮೂಹಿಕವಾಗಿ ಗುಂಡಿನ ಮಳೆ ಹರಿಸಲು ಕಾರಣವಾಗಿದೆ ಎಂದು ಹಾಲಿವುಡ್​ ಅಧಿಕಾರಿಗಳು ಹೇಳಿದ್ದಾರೆ.

ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಇನ್ನೋರ್ವನಿಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ದಾಳಿಯಲ್ಲಿ ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂಬುದರ ಕುರಿತು ಈ ವರೆಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಹಾಲಿವುಡ್ ಮೇಯರ್ ಜೋಶ್ ಲೆವಿ, ದಾಳಿಯ ನಂತರ ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆ ನೀಡಿ ಸಹಾಯ ಮಾಡಿದ್ದಕ್ಕಾಗಿ ಅರೆಕಾಲಿಕ ವೈದ್ಯರು, ದಾದಿಯರು, ಪೊಲೀಸರಿಗೆ ಧ್ಯನ್ಯವಾದ ತಿಳಿಸಿದ್ದಾರೆ. ಘಟನೆಯ ಸಂದರ್ಭದಲ್ಲಿ ಜನರೆಲ್ಲರೂ ಉದ್ರಿಕ್ತವಾಗಿ ಓಡಿ ಹೋಗುವುದು ಲೈವ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ:ಸಿರಿಯಾ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ; 2023 ರಿಂದ 17 ಬಾರಿ ದಾಳಿ

Last Updated : May 30, 2023, 10:08 AM IST

ABOUT THE AUTHOR

...view details