ಕರ್ನಾಟಕ

karnataka

ETV Bharat / international

ಬ್ರಿಟನ್‌ ಹೊಸ ಸಂಪುಟದಲ್ಲಿ ಭಾರತೀಯ ಮೂಲದ ಸುಯೆಲ್ಲಾ ಬ್ರಾವರ್​ಮನ್​​ ಗೃಹ ಕಾರ್ಯದರ್ಶಿ - ಈಟಿವಿ ಭಾರತ ಕರ್ನಾಟಕ

ಬ್ರಿಟನ್​​ನಲ್ಲಿ ಹೊಸ ಪ್ರಧಾನಿ ಲಿಜ್ ಟ್ರಸ್ ಆಳ್ವಿಕೆ ಶುರುವಾಗಿದ್ದು, ಅವರ ಸಚಿವ ಸಂಪುಟದಲ್ಲಿ ಗೃಹ ಕಾರ್ಯದರ್ಶಿಯಾಗಿ ಭಾರತೀಯ ಮೂಲದ ಸಂಸದೆ ಆಯ್ಕೆಯಾಗಿದ್ದಾರೆ.

barrister Suella Braverman
barrister Suella Braverman

By

Published : Sep 7, 2022, 8:06 AM IST

ಲಂಡನ್​​​​(ಯುಕೆ): ಬ್ರಿಟನ್ ನೂತನ ಪ್ರಧಾನಿಯಾಗಿ ಕನ್ಸರ್ವೇಟಿವ್ ಪಕ್ಷದ ನಾಯಕಿ ಲಿಜ್​ ಟ್ರಸ್​​ ನೇಮಕಗೊಂಡಿದ್ದಾರೆ. ಭಾರತೀಯ ಮೂಲದ ಬ್ಯಾರಿಸ್ಟರ್ ಸುಯೆಲ್ಲಾ ಬ್ರಾವರ್‌ಮನ್ ಅವರನ್ನು ಯುಕೆಯ ಹೊಸ ಗೃಹ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಈ ಹಿಂದೆ ಬೋರಿಸ್ ಜಾನ್ಸನ್ ನೇತೃತ್ವದ ಸರ್ಕಾರದಲ್ಲಿ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿರುವ 42 ವರ್ಷದ ಸುಯೆಲ್ಲಾ ಬ್ರಾವರ್‌ಮನ್​ ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಲಿಜ್​​ ಟ್ರಸ್​ ಪ್ರಕಟಣೆ ಹೊರಡಿಸಿದ್ದಾರೆ. ಈ ಮೂಲಕ ಲಿಜ್​​ ಮುಂದಿನ ಪ್ರಧಾನಿ ಹುದ್ದೆಯ ಅಭ್ಯರ್ಥಿಯೂ ಸಹ ಆಗಿದ್ದಾರೆ.

ಇಬ್ಬರು ಮಕ್ಕಳ ತಾಯಿಯಾಗಿರುವ ಇವರ ತಾಯಿ ಉಮಾ ತಮಿಳುನಾಡು ಹಾಗೂ ತಂದೆ ಕ್ರಿಸ್ಟ್ ಫರ್ನಾಂಡಿಸ್​​ ಗೋವಾ ಮೂಲದವರು. ಈ ಹಿಂದೆ ಅವರ ತಾಯಿ ಮಾರಿಷಸ್​​ನಿಂದ ಹಾಗೂ ತಂದೆ ಕಿನ್ಯಾದಿಂದ ಯುಕೆಗೆ ವಲಸೆ ಬಂದಿದ್ದರು.

ಇದನ್ನೂ ಓದಿ:ಹೊಸ ಪ್ರಧಾನಿ ಲಿಜ್ ಟ್ರಸ್​ಗೆ ಬ್ರಿಟನ್​ ರಾಣಿಯಿಂದ ಅಧಿಕಾರ ಹಸ್ತಾಂತರ

ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಕಾನೂನು ಪದವಿ ಪಡೆದುಕೊಂಡಿರುವ ಸುಯೆಲ್ಲಾ 2018 ರಲ್ಲಿ ರೇಲ್ ಬ್ರಾವರ್‌ಮನ್​ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಕಳೆದ ವರ್ಷ ಎರಡನೇ ಮಗುವಿಗೆ ಜನ್ಮ ನೀಡಲು ಕ್ಯಾಬಿನೆಟ್​​ನಿಂದ ದೂರು ಉಳಿದಿದ್ದ ವೇಳೆ ಇಂಗ್ಲೆಂಡ್ ಸರ್ಕಾರ ಕೆಲವೊಂದು ಕಾನೂನು ಬದಲಾವಣೆ ಮಾಡಿತ್ತು. ಬ್ರಾವರ್​ಮನ್​​ ಬೌದ್ಧ ಧರ್ಮದ ಅನುಯಾಯಿ ಆಗಿದ್ದಾರೆ. ಲಂಡನ್​​​ನಲ್ಲಿ ಇರುವ ಬೌದ್ಧ ಕೇಂದ್ರಕ್ಕೆ ನಿಯಮಿತವಾಗಿ ಹಾಜರಾಗುತ್ತಿರುತ್ತಾರೆ.

ಯುಕೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಹಾಗೂ ಮಾಜಿ ಚಾನ್ಸೆಲರ್, ಹಣಕಾಸು ಸಚಿವ ರಿಷಿ ಸುನಕ್ ನಡುವೆ ಪ್ರಧಾನಿ ಹುದ್ದೆಗೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಈ ರೇಸ್​​ನಲ್ಲಿ ಲಿಜ್ ಟ್ರಸ್ 81,326 ಮತ ಹಾಗೂ ರಿಷಿ ಸುನಕ್ 60,399 ಮತ ಪಡೆದುಕೊಂಡಿದ್ದರು.

ABOUT THE AUTHOR

...view details