ಕರ್ನಾಟಕ

karnataka

ETV Bharat / international

ಕೆನಡಾ ಗಡಿಯಲ್ಲಿ ಭಾರತೀಯರು ಸೇರಿ ಎಂಟು ಮಂದಿ ವಲಸಿಗರ ಶವ ಪತ್ತೆ

ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ಗಡಿ ದಾಟಲು ಪ್ರಯತ್ನಿಸುದ್ದ ಭಾರತೀಯ ಕುಟುಂಬವೊಂದು ದೋಣಿ ಮಗುಚಿಬಿದ್ದ ಪರಿಣಾಮ ಮೃತಪಟ್ಟಿರುವ ಘಟನೆ ಕ್ವಿಬೆಕ್‌ನ ಜವುಗು ಪ್ರದೇಶದಲ್ಲಿ ನಡೆದಿದೆ.

Canada border
ಎಂಟು ಮಂದಿ ವಲಸಿಗರ ಶವ ಪತ್ತೆ

By

Published : Apr 1, 2023, 8:59 AM IST

ಟೊರೊಂಟೋ: ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ಹೋಗಲು ಯತ್ನಿಸುತ್ತಿದ್ದಾಗ ಸೇಂಟ್ ಲಾರೆನ್ಸ್ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಎಂಟು ಜನರಲ್ಲಿ ಭಾರತೀಯ ಕುಟುಂಬದ ಸದಸ್ಯರು ಸೇರಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.

ಕ್ವಿಬೆಕ್‌ನ ಜವುಗು ಪ್ರದೇಶದಲ್ಲಿ ದೋಣಿ ಮಗುಚಿದೆ. ಈಗಾಗಲೇ ಪೊಲೀಸರು ಕೆನಡಾದ ಕೋಸ್ಟ್ ಗಾರ್ಡ್‌ ಸಹಕಾರದೊಂದಿಗೆ ವೈಮಾನಿಕ ಶೋಧ ನಡೆಸಿ ಆರು ಮೃತದೇಹಗಳನ್ನು ಗುರುವಾರ ಮಧ್ಯಾಹ್ನ ಹೊರ ತೆಗೆದಿದ್ದಾರೆ. ಕೆನಡಾದ ಸುದ್ದಿವಾಹಿನಿಗಳು ನೀಡಿದ ಮಾಹಿತಿ ಪ್ರಕಾರ, ಶುಕ್ರವಾರ ನಡೆಸಿದ ಶೋಧ ಕಾರ್ಯಚರಣೆಯಲ್ಲಿ ಮತ್ತೆ ಎರಡು ಮೃತದೇಹಗಳು ಪತ್ತೆಯಾಗಿವೆ ಎಂದು ತಿಳಿಸಿವೆ.

ಇದನ್ನೂ ಓದಿ :ಯಮುನಾ ನದಿಯಲ್ಲಿ ಮುಳುಗಿದ ದೋಣಿ.. 11 ಮೃತದೇಹ ಪತ್ತೆ, ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಈ ಕುರಿತು ಶುಕ್ರವಾರ ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ನೀಡಿದ ಅಕ್ವೆಸಾಸ್ನೆ ಮೊಹಾಕನ್​ನ ಡಿಸಿಪಿ ಲೀ-ಆನ್ ಒ'ಬ್ರಿಯನ್, "ಮೃತ ಆರು ವ್ಯಕ್ತಿಗಳು ಎರಡು ಕುಟುಂಬಕ್ಕೆ ಸೇರಿದ್ದವರಾಗಿದ್ದಾರೆ. ಒಂದು ಕುಟುಂಬ ರೊಮೇನಿಯನ್ ಮೂಲದಾಗಿದ್ದು, ಇನ್ನೊಂದು ಕುಟುಂಬ ಭಾರತದವರು ಎಂದು ತಿಳಿದುಬಂದಿದೆ. ನಾಪತ್ತೆಯಾಗಿರುವ ಮಗುವಿನ ಪತ್ತೆಗಾಗಿ ಸ್ಥಳದಲ್ಲಿ ಶೋಧ ಕಾರ್ಯ ಮುಂದುವರಿದಿದೆ" ಎಂದು ತಿಳಿಸಿದರು.

ಇದನ್ನೂ ಓದಿ :ಕಲಬುರಗಿ: ಪ್ರವಾಸಕ್ಕೆ ಬಂದು ನೀರಿನಲ್ಲಿ ಮುಳುಗಿ ಬಾಲಕ ಸಾವು

"ರೊಮೇನಿಯನ್ ಕುಟುಂಬದ ಒಂದು ಶಿಶು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗಾಗಿ, ನಾವು ಶೋಧ ಕಾರ್ಯಚರಣೆ ಮುಂದುವರಿದ್ದೇವೆ. ಮೃತರೆಲ್ಲಾರೂ ಕೆನಡಾದಿಂದ ಯುಎಸ್​ಗೆ ಅಕ್ರಮ ಪ್ರವೇಶ ಮಾಡಲು ಪ್ರಯತ್ನಿಸುತ್ತಿದ್ದಾರೆಂದು ತಿಳಿದುಬಂದಿದೆ. ಸದ್ಯಕ್ಕೆ ಪತ್ತೆಯಾದ ಮೃತದೇಹಗಳಲ್ಲಿ ಒಂದು ಮೂರು ವರ್ಷದೊಳಗಿನ ಮಗು ಕೂಡ ಇದೆ. ಈ ಮಗುವಿನ ಜೊತೆ ಕೆನಡಾದ ಪಾಸ್‌ಪೋರ್ಟ್‌ ಪತ್ತೆಯಾಗಿದ್ದು, ಅವರು ರೊಮೇನಿಯನ್ ಮೂಲದವರಾಗಿದ್ದಾರೆ" ಎಂದರು.

ಇದನ್ನೂ ಓದಿ :ಕೆರೆಯಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾವು: ಪತಿ ಮೇಲೆ ಅನುಮಾನ

"ಈ ಪ್ರದೇಶದಲ್ಲಿ ಕಳ್ಳಸಾಗಣೆ ಜಾಲ ಆಕ್ಟಿವ್ ಆಗಿದೆ ಎನ್ನುವುದಕ್ಕೆ ಈ ಘಟನೆಯೇ ಉದಾಹರಣೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ನದಿ ಭಾಗದಲ್ಲಿ ಸೂಕ್ತ ಕಣ್ಗಾವಲು ಇಡಲಾಗುವುದು.​ ಈಗಾಗಲೇ ಮೃತರನ್ನು ಗುರುತಿಸಲು ಮತ್ತು ಅವರ ಸಂಬಂಧಿಕರಿಗೆ ಮಾಹಿತಿ ನೀಡುವ ಕೆಲಸ ಮಾಡಲಾಗುತ್ತಿದೆ" ಎಂದು ಹೇಳಿದರು.

ಹಿಂದಿನ ಘಟನೆಗಳು :ಕಳೆದ ಜನವರಿ 2022 ರಲ್ಲಿ ಕೆನಡಾ - ಯುಎಸ್ ಗಡಿಯ ಸಮೀಪವಿರುವ ಮ್ಯಾನಿಟೋಬಾದಲ್ಲಿ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಒಂದು ಮಗು ಸೇರಿದಂತೆ ನಾಲ್ಕು ಭಾರತೀಯರ ಶವಗಳು ಪತ್ತೆಯಾಗಿದ್ದವು. ಜೊತೆಗೆ, ಏಪ್ರಿಲ್ 2022 ರಲ್ಲಿ ಅಕ್ವೆಸಾಸ್ನೆ ಮೊಹಾವ್ಕ್ ಪ್ರಾಂತ್ಯದ ಮೂಲಕ ಸಾಗುವ ಸೇಂಟ್ ರೆಗಿಸ್ ನದಿಯಲ್ಲಿ ಮುಳುಗುತ್ತಿದ್ದ ದೋಣಿಯಿಂದ ಆರು ಮಂದಿ ಭಾರತೀಯ ಪ್ರಜೆಗಳನ್ನು ರಕ್ಷಿಸಲಾಗಿತ್ತು.

ಇದನ್ನೂ ಓದಿ :ಕೆರೆಯಲ್ಲಿ ಹುಲಿ ಕಳೇಬರ ಪತ್ತೆ: ಮೊದಲೇ ಸೆರೆ ಹಿಡಿಯದಿದ್ದಕ್ಕೆ ಜನರ ಆಕ್ರೋಶ

ABOUT THE AUTHOR

...view details