ವಾಷಿಂಗ್ಟನ್(ಅಮೆರಿಕ): ಜೂನ್ 22 ರಂದು ಅಮೆರಿಕಾದಲ್ಲಿ ಕಾಂಗ್ರೆಸ್‌ನ ಐತಿಹಾಸಿಕ ಜಂಟಿ ಭಾಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತೀಯ-ಅಮೆರಿಕನ್ ಕಾಂಗ್ರೆಸಿಗ ಶ್ರೀ ಥಾನೇದಾರ್ ಅವರು ಕರೆದೊಯ್ಯಲಿದ್ದಾರೆ. ಶ್ರೀ ಥಾನೇದಾರ್ ಮಿಚಿಗನ್‌ನ 13 ನೇ ಕಾಂಗ್ರೆಸನಲ್ ಡಿಸ್ಟ್ರಿಕ್ಟ್ ಅನ್ನು ಮೊದಲ ಬಾರಿಗೆ ಪ್ರತಿನಿಧಿಸುತ್ತಿದ್ದಾರೆ. ಕನ್ನಡಿಗ ಅಮೆರಿಕನ್ ಥಾನೇದಾರ್ ಅವರನ್ನು ಅಧ್ಯಕ್ಷ ಜೋ ಬೈಡನ್ ಅದೇ ದಿನ ಪ್ರಧಾನಿ ಮೋದಿ ಅವರ ಗೌರವಾರ್ಥ ಆಯೋಜಿಸಿದ ವೈಟ್ ಹೌಸ್ ಸ್ಟೇಟ್ ಡಿನ್ನರ್‌ಗೆ ಆಹ್ವಾನಿಸಿದ್ದಾರೆ.
ಮೋದಿ ಗುಣಗಾನ, ಬೆಳಗಾವಿಯ ಬಾಲ್ಯದ ನೆನಪು ಮಾಡಿಕೊಂಡ ಥಾನೇದಾರ್:ಈ ಬಗ್ಗೆ ಮಾತನಾಡಿರುವ ಥಾನೇದಾರ್, " ಭಾರತದ ಪ್ರಧಾನಿ ಮೋದಿಯವರ ಐತಿಹಾಸಿಕ ಭಾಷಣಕ್ಕೆ, ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನಕ್ಕೆ ಬರಲು ಸಾಧ್ಯವಾಗಿದ್ದು ನನಗೆ ದೊಡ್ಡ ಗೌರವವಾಗಿದೆ ಎಂದು ಅವರು ಸಂತಸ ವ್ಯಕ್ಯಪಡಿಸಿದ್ದಾರೆ. ಥಾನೇದಾರ್ ಅವರು ಕರ್ನಾಟಕದ ಬೆಳಗಾವಿಯಲ್ಲಿ ಜನಿಸಿ, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದಾರೆ. ಕರ್ನಾಟಕದ ಬೆಳಗಾವಿಯಲ್ಲಿ ಕಳೆದ ಬಾಲ್ಯವನ್ನು ಅವರು ಇದೇ ವೇಳೆ ನೆನಪಿಸಿಕೊಂಡಿದ್ದಾರೆ. ಮುಂಬೈನಲ್ಲಿ ಉನ್ನತ ಶಿಕ್ಷಣ ಪೂರೈಸಿದ ಅವರು ಅಮೆರಿಕಕ್ಕೆ ವಲಸೆ ಹೋಗಿದ್ದರು. ಅದಕ್ಕೂ ಮೊದಲು ಅವರು 24 ವರ್ಷಗಳ ಕಾಲ ಕರ್ನಾಟಕದ ಮಣ್ಣಿನಲ್ಲಿ ಬದುಕು ಸಾಗಿಸಿದ್ದಾರೆ.
ಅಮೆರಿಕಾ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಎರಡನೇ ಬಾರಿಗೆ ಮಾತನಾಡುವ ಮೊಟ್ಟ ಮೊದಲ ಭಾರತದ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಲಿದ್ದಾರೆ. ಪ್ರಧಾನಮಂತ್ರಿಯವರು ಈ ಹಿಂದೆ 2016 ರಲ್ಲಿ ಅಮೆರಿಕ ಕಾಂಗ್ರೆಸ್ನ್ನು ಉದ್ದೇಶಿಸಿ ಮಾತನಾಡಿದ್ದರು.
ಇದನ್ನೂ ಓದಿ:ಪ್ರಧಾನಿ ಮೋದಿ ಆಗಮನದ ಎದುರು ನೋಡುತ್ತಿರುವ ಅಮೆರಿಕ.. ಭರದಿಂದ ಸಾಗಿದ ಯೋಗ ದಿನಾಚರಣೆ ಸಿದ್ಧತೆಗಳು