ಕರ್ನಾಟಕ

karnataka

ETV Bharat / international

ಜಪಾನ್​​ನಲ್ಲಿ ನಮೋ; ಇಂಡೋ - ಪೆಸಿಫಿಕ್ ಪ್ರದೇಶಕ್ಕೆ ಭಾರತ ಬದ್ಧ ಎಂದ ಪ್ರಧಾನಿ

ಕ್ವಾಡ್ ಶೃಂಗಸಭೆಯಲ್ಲಿ ಭಾಗಿಯಾಗಲು ಜಪಾನ್​ಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ, ಐಪಿಇಎಫ್​​​ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದರು. ಈ ವೇಳೆ, ಇಂಡೋ-ಪೆಸಿಫಿಕ್​​ ಪ್ರದೇಶಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಕೆಲಸ ಮಾಡಲು ತಾವು ಸಿದ್ಧ ಇರುವುದಾಗಿ ತಿಳಿಸಿದರು.

PM Modi in Japan
PM Modi in Japan

By

Published : May 23, 2022, 6:33 PM IST

ಟೋಕಿಯೋ(ಜಪಾನ್​):ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಟೋಕಿಯೋದಲ್ಲಿ ಆಯೋಜನೆಗೊಂಡಿದ್ದ ಇಂಡೋ - ಪೆಸಿಫಿಕ್​​ ಎಕನಾಮಿಕ್​​ ಫ್ರೇಮ್​​ವರ್ಕ್​ ಫಾರ್​ ಪ್ರಾಸ್ಪೆರಿಟಿ(IPEF)ನಲ್ಲಿ ಭಾಗಿಯಾಗಿ ಮಾತನಾಡಿದರು. ಈ ವೇಳೆ, ಭಾರತ ಸ್ವತಂತ್ರ, ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್​ ಪ್ರದೇಶಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಕೆಲಸ ಮಾಡ್ತಿದೆ ಎಂದರು. ಶಾಂತಿ, ಸಮೃದ್ಧಿ ಗುರಿ ಸಾಧಿಸುವ ಉದ್ದೇಶದಿಂದ ಪಾಲುದಾರರ ನಡುವೆ ಉತ್ತಮ ಸಂಬಂಧ ಹೊಂದುವುದಾಗಿ ಹೇಳಿಕೊಂಡಿದ್ದಾರೆ.

ಇಂಡೋ - ಪೆಸಿಫಿಕ್​ ಪ್ರದೇಶದಲ್ಲಿ ಆರ್ಥಿಕ ಸವಾಲು ಎದುರಿಸಲು ಸೃಜನಶೀಲ ಪರಿಹಾರ ಕಂಡು ಹಿಡಿಯುವ ಅಗತ್ಯತೆ ಬಗ್ಗೆ ಒತ್ತಿ ಹೇಳಿದ ನಮೋ, ನಾವು ಸ್ವತಂತ್ರ, ಮುಕ್ತ ಮತ್ತು ಅಂತರ್ಗತ ಇಂಡೋ - ಪೆಸಿಫಿಕ್ ಪ್ರದೇಶಕ್ಕೆ ಬದ್ಧವಾಗಿದ್ದು, ಬೆಳವಣಿಗೆ, ಶಾಂತಿ ಮತ್ತು ಸಮೃದ್ಧಿಗೆ ಪಾಲುದಾರರ ನಡುವೆ ಆಳವಾದ ಆರ್ಥಿಕ ಒಪ್ಪಂದ ಹೊಂದಲಿದ್ದೇವೆ ಎಂದರು. ಇಂಡೋ-ಪೆಸಿಫಿಕ್​​ ಎಕನಾಮಿಕ್​​ ಫ್ರೇಮ್​​ವರ್ಕ್​ ಫಾರ್​ ಪ್ರಾಸ್ಪೆರಿಟಿ ಅಡಿ ಪಾಲುದಾರ ರಾಷ್ಟ್ರಗಳೊಂದಿಗೆ ಭಾರತ ಸಹಕಾರದೊಂದಿಗೆ ಕೆಲಸ ಮಾಡಲು ಉತ್ಸುಕವಾಗಿದೆ ಎಂದರು.

ಇದನ್ನೂ ಓದಿ:ಮೋದಿ, ಮೋದಿ; ಜೈ ಶ್ರೀರಾಮ್​... ಟೋಕಿಯೋದಲ್ಲಿ ಪ್ರಧಾನಿಗೆ ಅದ್ಧೂರಿ ಸ್ವಾಗತ

ಈ ಕಾರ್ಯಕ್ರಮದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್​, ಜಪಾನ್ ಪ್ರಧಾನಿ ಕಿಶಿದಾ ಫ್ಯೂಮಿಯೋ ಉಪಸ್ಥಿತರಿದ್ದರು. ಇದರ ಜೊತೆಗೆ ಐಪಿಇಎಫ್​​ ಪಾಲುದಾರ ರಾಷ್ಟ್ರಗಳಾದ ಆಸ್ಟ್ರೇಲಿಯಾ, ಬ್ರೂನಿ, ಇಂಡೋನೇಷ್ಯಾ, ರಿಪಬ್ಲಿಕ್ ಆಫ್ ಕೊರಿಯಾ, ಮಲೇಷ್ಯಾ, ನ್ಯೂಜಿಲ್ಯಾಂಡ್, ಫಿಲಿಪೈನ್ಸ್, ಸಿಂಗಾಪುರ, ಥೈಲ್ಯಾಂಡ್ ಮತ್ತು ವಿಯೆಟ್ನಾಂದ ಅನೇಕ ಅಧಿಕಾರಿಗಳು, ನಾಯಕರು ಹಾಜರಾಗಿದ್ದರು.

ಅನಿವಾಸಿ ಭಾರತೀಯರನ್ನುದ್ದೇಶಿಸಿ ನಮೋ ಮಾತು:ಕ್ವಾಡ್​ ನಾಯಕರ ಶೃಂಗಸಭೆಯಲ್ಲಿ ಭಾಗಿಯಾಗಲು ಜಪಾನ್​ಗೆ ತೆರಳಿರುವ ನಮೋ, ಇಂದು ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದರು. ಭಾರತ - ಜಪಾನ್​ ನಡುವಿನ ಸಂಬಂಧದ ಬಗ್ಗೆ ಹಾಡಿಹೊಗಳಿದ ನಮೋ, ಸ್ವಾಮಿ ವಿವೇಕಾನಂದರು ಚಿಕಾಗೋಗೆ ತೆರಳುವ ಮೊದಲು ಜಪಾನ್​ಗೆ ಭೇಟಿ ನೀಡಿದ್ದರು. ಜೀವನದಲ್ಲಿ ಒಮ್ಮೆಯಾದರೂ ಜಪಾನ್​ಗೆ ಭೇಟಿ ನೀಡಬೇಕೆಂದು ಅವರು ಹೇಳಿದ್ದರು ಎಂದರು.

ಭಾರತದ ಅಭಿವೃದ್ಧಿಯ ಹಾದಿಯಲ್ಲಿ ಜಪಾನ್ ಪಾಲು ಬಹಳ ಮಹತ್ವದ್ದಾಗಿದೆ ಎಂದ ನಮೋ, ನಾನು ಜಪಾನ್​ಗೆ ಬಂದಾಗಲೆಲ್ಲ ಇಲ್ಲಿನ ಜನರಿಂದ ಅಪಾರ ಪ್ರೀತಿ ಸಿಗುತ್ತದೆ. ಭಾರತದ ಅನೇಕರು ಜಪಾನ್​​ನಲ್ಲಿ ಉಳಿದುಕೊಂಡು, ಇಲ್ಲಿನ ಸಂಸ್ಕೃತಿ ಅಳವಡಿಸಿಕೊಂಡಿದ್ದೀರಿ. ಆದರೂ, ಭಾರತದ ಸಂಸ್ಕೃತಿ ಮತ್ತು ಭಾಷೆ ಬಗ್ಗೆ ಅಪಾರ ಪ್ರೀತಿ ಹೊಂದಿರುವುದು ಹೆಮ್ಮೆಯ ವಿಚಾರ ಎಂದರು.

ABOUT THE AUTHOR

...view details