ವಾಷಿಂಗ್ಟನ್:ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಡಿಜಿಟಲ್ ಇಂಡಿಯಾ ಫಲ ನೀಡಿದೆ. ಕಳೆದ 2 ವರ್ಷಗಳಿಂದ ಭಾರತ ಡಿಜಿಲೀಕರಣದಲ್ಲಿ ಮುಂಚೂಣಿಯಲ್ಲಿದೆ. ಇದರ ಬಳಕೆಯಿಂದ ಕೆಲ ಆಡಳಿತಾತ್ಮಕ ಸಮಸ್ಯೆಗಳೂ ಕೂಡ ನಿವಾರಣೆಯಾಗಿವೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಹೇಳಿದೆ.
ಕೋವಿಡ್ ಬಳಿಕ ಡಿಜಿಟಲೀಕರಣ ಜಗತ್ತಿನಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಅದರಲ್ಲೂ ಭಾರತದಲ್ಲಿ ಇದರ ಬಳಕೆ ಹೆಚ್ಚಿದೆ. 2 ವರ್ಷಗಳಿಂದ ದೇಶ ಮುಂಚೂಣಿಯಲ್ಲಿದೆ. ಡಿಜಿಟಲ್ ಸೌಕರ್ಯ ಒದಗಿಸಿರುವುದರಿಂದ ಆಡಳಿದಲ್ಲಿನ ದೋಷಗಳೂ ಮುಕ್ತಿ ಕಂಡಿವೆ ಎಂದು ಐಎಂಎಫ್‌ನ ಏಷ್ಯಾ ಪೆಸಿಫಿಕ್ ವಿಭಾಗದ ಉಪನಿರ್ದೇಶಕ ಅನ್ನೆರ್ ಮೇರಿ ಗುಲ್ಡೆ ವೋಲ್ಫ್ ಹೇಳಿದ್ದಾರೆ.