ಕರ್ನಾಟಕ

karnataka

ETV Bharat / international

ಸೌದಿ ಅರೇಬಿಯಾದಲ್ಲಿ ಹೆಚ್ಚಿದ ಬಿಸಿಲಿನ ಪ್ರಕೋಪ; ಹಜ್​ ಯಾತ್ರಿಕರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ - ಹಜ್​ ಯಾತ್ರೆಯ ವೇಳೆ

ಬಿಸಿಲ ತಾಪ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಯಾತ್ರಿಕರು ಕೊಡೆಯ ಆಸರೆ ಮತ್ತು ಹೆಚ್ಚು ನೀರು ಕುಡಿಯುವಂತೆ ಸೌದಿ ಸರ್ಕಾರ ಸಲಹೆ ನೀಡಿದೆ.

increased-hot-flashes-hajj-pilgrims-advised-to-take-precautions
increased-hot-flashes-hajj-pilgrims-advised-to-take-precautions

By

Published : Jun 30, 2023, 6:08 PM IST

ಬೆಂಗಳೂರು: ಚಾಂದ್ರಮಾನ ಕ್ಯಾಲೆಂಡರ್​ ಹಿನ್ನೆಲೆಯಲ್ಲಿ ಮುಸ್ಲಿಮರು ಪವಿತ್ರ ಹಜ್​ ಯಾತ್ರೆ ನಡೆಸುತ್ತಿದ್ದಾರೆ. ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಸೌದಿ ಅರೇಬಿಯಾ ಸರ್ಕಾರದ ಆರೋಗ್ಯ ಸಚಿವಾಲಯ, ಹಜ್​ ಯಾತ್ರೆಯಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಿದ್ದು, ಶಾಖದ ಅಲೆಗೆ ಹೀಟ್​​ ಸ್ಟ್ರೋಕ್​ನಂತಹ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸಲಹೆ ನೀಡಿದೆ.

ಈ ಬಾರಿ 1,721 ಮಂದಿ ಶಾಖದ ಹೊಡೆತಕ್ಕೆ ತುತ್ತಾಗಿದ್ದು, ಬಳಲಿದವರಿಗೆ ಮೆಕ್ಕಾ ಮತ್ತು ಹೋಲಿ ಸೈಟ್​ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸೌದಿ ಗೆಜೆಟ್​ ಪತ್ರಿಕೆ ವರದಿ ಮಾಡಿದೆ. ಹಜ್​ ಯಾತ್ರೆ ಕೈಗೊಳ್ಳುವ ಮುನ್ನವೇ ಸೌದಿ ಸರ್ಕಾರ, ಇಲ್ಲಿ ಬಿಸಿಲ ತಾಪ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸುತ್ತದೆ. ಈ ಮಾರ್ಗಸೂಚಿಗಳನ್ನು ನಿರ್ಲಕ್ಷ್ಯಿಸಿದ ಪರಿಣಾಮ ಇಷ್ಟು ಪ್ರಮಾಣದಲ್ಲಿ ಯಾತ್ರಾರ್ಥಿಗಳು ಶಾಖದ ಹೊಡೆತಕ್ಕೆ ತುತ್ತಾಗಿದ್ದಾರೆ. ಇಲ್ಲಿನ ಬಿಸಿಲು ನಿರೀಕ್ಷೆಗೆ ಮೀರಿದ ಮಟ್ಟದಲ್ಲಿದ್ದು ದಿನವಿಡೀ ಕೊಡೆಯ ರಕ್ಷಣೆ ಪಡೆಯುವಂತೆ ಮತ್ತು ನೀರು ಸೇರಿದಂತೆ ಪಾನೀಯಗಳ ಸೇವನೆಯ ದೇಹದ ನಿರ್ಜಲೀಕರಣಕ್ಕೆ ಒಳಗಾಗದಂತೆ ಸೂಚಿಸಲಾಗಿದೆ.

ಯಾತ್ರೆಯ ವೇಳೆಯಲ್ಲಿ ಶಾಖದ ಹೊಡೆತ ಮತ್ತು ಹೀಟ್​​ ಸ್ಟ್ರೋಕ್​ ಅಪಾಯದಿಂದ ತಪ್ಪಿಸಿಕೊಳ್ಳಲು ಯಾತ್ರಾರ್ಥಿಗಳು ಪ್ರಮುಖ ಮುನ್ನೆಚ್ಚರಿಕೆ ವಹಿಸಬೇಕು. ಅನಾವಶ್ಯಕವಾಗಿ ಹೆಚ್ಚಿನ ಚಲನಶೀಲತೆ ನಡೆಸಬಾರದು. ಒಂದೇ ಸ್ಥಳದಲ್ಲಿ ದೀರ್ಘಕಾಲ ನಿಲ್ಲದಂತೆಯೂ ಆರೋಗ್ಯ ಸಚಿವಾಲಯ ತಿಳಿಸಿದೆ. ಮೆಕ್ಕಾದಲ್ಲಿ ಗುರುವಾರ 45 ಡಿಗ್ರಿ ಸೆಲ್ಸಿಯಸ್​​ ತಾಪಮಾನ ದಾಖಲಾಗಿದೆ. ಮಿನಾದ ಹೋಲಿ ಸೈಟ್​​ನಲ್ಲಿ 44 ಡಿಗ್ರಿ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಿಸಿಲಿನಿಂದ ಸಾವನ್ನಪ್ಪಿದವರ ಸಂಖ್ಯೆಯನ್ನು ಸಚಿವಾಲಯ ತಿಳಿಸಿಲ್ಲ. ತೀವ್ರ ತಾಪಮಾನದಿಂದ ಅನೇಕ ಯಾತ್ರಾರ್ಥಿಗಳು ಕುಸಿದು ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ಬಿಸಿಲಿನ ಪ್ರಖರತೆ ಇಲ್ಲಿ ಯಾವ ಮಟ್ಟದಲ್ಲಿದೆ ಎಂದರೆ ಯಾತ್ರಾರ್ಥಿಗಳು ಬೆಳಗಿನ ಪ್ರಾರ್ಥನೆ ಮುಗಿಸಿದ ಬಳಿಕ ಬಿಸಿಲಿಗೆ ಸಂಪೂರ್ಣವಾಗಿ ಕಣ್ಣು ತೆರೆಯುವುದೂ ಕೂಡ ಕಷ್ಟವಾಗುತ್ತಿದೆ.

ಜೂನ್​ 26ರಿಂದ ಜುಲೈ 1ರವರೆಗೆ ಹಜ್​ ಯಾತ್ರೆ ನಡೆಯುತ್ತಿದೆ. 2 ಮಿಲಿಯನ್‌ಗೂ ಹೆಚ್ಚು​ ಯಾತ್ರಾರ್ಥಿಗಳು ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ: Explained: ಹಜ್ ಯಾತ್ರೆ ಮಹತ್ವವೇನು? ಇತಿಹಾಸ ಏನು ಹೇಳುತ್ತೆ?

ABOUT THE AUTHOR

...view details