ಕರ್ನಾಟಕ

karnataka

ETV Bharat / international

ಸಿವಿಲ್​ ವಂಚನೆ ಪ್ರಕರಣ: ಟ್ರಂಪ್​ ವಿರುದ್ಧ ಸಾಕ್ಷ್ಯ ನುಡಿದ ಮೈಕೆಲ್​ ಕೊಹೆನ್​​​ - ಡೊನಾಲ್ಡ್​ ಟ್ರಂಪ್​

ಸಿವಿಲ್​ ವಂಚನೆ ಪ್ರಕರಣ ಸಂಬಂಧ ನ್ಯೂಯಾರ್ಕ್​ ನ್ಯಾಯಾಲಯದಲ್ಲಿ ಡೊನಾಲ್ಡ್​ ಟ್ರಂಪ್​ ಅವರ ವಿಚಾರಣೆ ನಡೆಯುತ್ತಿದೆ.

in-court-faceoff-michael-cohen-testifies-against-trump-in-fraud-trial-trump-shrugs-proven-liar
ಸಿವಿಲ್​ ವಂಚನೆ ಪ್ರಕರಣ : ಟ್ರಂಪ್​ ವಿರುದ್ಧ ಸಾಕ್ಷ್ಯ ನುಡಿದ ಮೈಕೆಲ್​ ಕೊಹೆನ್​​​

By PTI

Published : Oct 25, 2023, 10:57 AM IST

ನ್ಯೂಯಾರ್ಕ್​(ಅಮೆರಿಕ): ಸಿವಿಲ್​ ವಂಚನೆ ಆರೋಪ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಿರುದ್ಧ ವಕೀಲ ಮೈಕೆಲ್​ ಕೊಹೆನ್​ ಸಾಕ್ಷ್ಯ ನುಡಿದಿದ್ದಾರೆ. ಡೊನಾಲ್ಡ್​​ ಟ್ರಂಪ್​ ವಿರುದ್ಧ ತಮ್ಮ ಸಂಸ್ಥೆಯ ಹಣಕಾಸು ವ್ಯವಹಾರದ ಮೌಲ್ಯವನ್ನು ಹೆಚ್ಚುವರಿಯಾಗಿ ತೋರಿಸುವ ಮೂಲಕ ನೂರಾರು ಮಿಲಿಯನ್​ ಡಾಲರ್ ಸಾಲ ಪಡೆದು ವಂಚನೆ ಮಾಡಿರುವ ಆರೋಪ ಇದೆ. ಈ ಸಂಬಂಧ ನ್ಯೂಯಾರ್ಕ್ ನ್ಯಾಯಾಲಯವು ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ವಿಚಾರಣೆ ನಡೆಸುತ್ತಿದೆ.

ನ್ಯಾಯಾಲಯದಲ್ಲಿ ಮೈಕೆಲ್​ ಕೊಹೆನ್​ ಅವರು, ಡೊನಾಲ್ಡ್​ ಟ್ರಂಪ್​ ಅವರ ಆಸ್ತಿಯನ್ನು ಹೆಚ್ಚುವರಿಯಾಗಿ ತೋರಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ. ಟ್ರಂಪ್​ ಅವರು ನನ್ನನ್ನು ಸರಣಿ ವಂಚಕ ಎಂದು ಬಿಂಬಿಸಲು ಯತ್ನಿಸಿದರು ಎಂದು ಹೇಳಿದ್ದಾರೆ. ಇನ್ನು, ಟ್ರಂಪ್​ ಬ್ಯಾಂಕ್​ಗೆ ತೆರಿಗೆ ವಂಚನೆ ಮಾಡಿರುವುದನ್ನು ಕೊಹೆನ್​ ಬಹಿರಂಗಪಡಿಸಿದ್ದಾರೆ. ಮೈಕೆಲ್​ ಕೊಹೆನ್​ ಅವರು ದಶಕಗಳ ಕಾಲ ಟ್ರಂಪ್​ ಬಳಿ ವಿಶ್ವಾಸಯುತ ವಕೀಲರಾಗಿ ಕಾರ್ಯನಿರ್ವಹಿಸಿದ್ದರು.

ವಂಚನೆ ಪ್ರಕರಣದಲ್ಲಿ ಕೊಹೆನ್​ ಅವರೂ ಪ್ರಮುಖ ಆರೋಪಿಯಾಗಿದ್ದು, ಟ್ರಂಪ್​ ಜೊತೆ ಸೇರಿ ಕೊಹೆನ್​ ಕೂಡ ಬ್ಯಾಂಕ್​ ಸೇರಿದಂತೆ ವಿಮೆದಾರರಿಗೆ ಹಾಗೂ ಇತರರಿಗೆ ಸಂಪತ್ತನ್ನು ಹೆಚ್ಚು ಇರುವುದಾಗಿ ತೋರಿಸಿ ವಂಚಿಸಿದ್ದಾರೆ ಎಂದು ನ್ಯೂಯಾರ್ಕ್​ ಅಟಾರ್ನಿ ಜನರಲ್​ ಲೆಟಿಟಿಯಾ ಜೇಮ್ಸ್​ ಹೇಳಿದ್ದಾರೆ. ಈ ವೇಳೆ ಕೊಹೆನ್​, ಟ್ರಂಪ್​ ಅವರು ತಾವು ಚುನಾಯಿತರಾಗಿ ಆಯ್ಕೆಯಾದ ಆಧಾರದ ಮೇಲೆ ವ್ಯವಹಾರವನ್ನು ಹೆಚ್ಚಳ ಇರುವಂತೆ ತೋರಿಸಲು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಟ್ರಂಪ್​ ಅವರ ಹಣಕಾಸು ಸಲಹೆಗಾರ ಅಲೆನ್​ ಮಿಸೆಲ್​ ಬರ್ಗ್​ ಅವರು ಆಸ್ತಿಯನ್ನು ಹೆಚ್ಚಳ ಮಾಡಲು ವಿವಿಧ ತಂತ್ರಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್​, ಕೊಹೆನ್​ ಅವರ ಆರೋಪಗಳನ್ನು ತಳ್ಳಿ ಹಾಕಿದರು. ಕೊಹೆನ್​ ಸುಳ್ಳು ಹೇಳುತ್ತಿದ್ದಾರೆ. ಆತ ಮಹಾನ್ ಸುಳ್ಳುಗಾರ. ಅಲ್ಲದೇ ಕೊಹೆನ್​ನ ಸಾಕ್ಷ್ಯಗಳು ಸರಿಯಿಲ್ಲ ಎಂದು ಹೇಳಿದರು. ಆದರೆ ಪ್ರತಿಯಾಗಿ ಟ್ರಂಪ್​, ಆಸ್ತಿಯನ್ನು ಹೆಚ್ಚಳ ತೋರಿಸುವಂತೆ ಹಣಕಾಸು ಸಲಹೆಗಾರರು ಮತ್ತು ನನಗೆ ಸೂಚಿಸಿದ್ದರು ಎಂದು ಕೊಹೆನ್ ನ್ಯಾಯಾಲಯದಲ್ಲಿ​ ತಿಳಿಸಿದರು.

ಇದೀಗ ಕೊಹೆನ್​ ಅವರು ಪ್ರಕರಣ ಸಂಬಂಧ ತಪ್ಪೊಪ್ಪಿಗೆ ನೀಡಿದ್ದಾರೆ. ಸಾಲವನ್ನು ಪಡೆಯಲು ತೆರಿಗೆ ವಂಚನೆ , ಸುಳ್ಳು ಮಾಹಿತಿ ನೀಡಿರುವುದಾಗಿ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾರೆ. ಈ ವೇಳೆ ಟ್ರಂಪ್​ ಪರ ವಕೀಲ ಕ್ರಿಸ್ಟೋಫರ್​ ಕಿಸೆ, ಕೊಹೆನ್​ ಸರಣಿ ಸುಳ್ಳುಗಾರ. ಈತ ನ್ಯಾಯಾಂಗದ ಎದುರು ಸರಣಿ ಸುಳ್ಳುಗಳನ್ನು ಹೇಳುತ್ತಿದ್ದಾನೆ ಎಂದು ಹೇಳಿದರು.

ವಾದ ಪ್ರತಿವಾದಗಳನ್ನು ಆಲಿಸಿದ ಬಳಿಕ ನ್ಯಾಯಾಧೀಶ ಅರ್ಥೂರ್​ ಎಂಗೋರೊನ್, ವಿಚಾರಣೆಯು ವಂಚನೆ , ವಿಮೆ ವಂಚನೆ ಹಾಗೂ ಸುಳ್ಳು ದಾಖಲಾತಿ ನೀಡಿರುವುದನ್ನು ಹೊಂದಿದೆ. ಟ್ರಂಪ್​ ಮತ್ತು ಅವರ ಸಂಸ್ಥೆ ಈಗಾಗಲೇ ವಂಚನೆ ಮಾಡಿದೆ ಎಂದು ಹೇಳಿದರು.ಇದಕ್ಕೆ ಪ್ರತಿಯಾಗಿ ಟ್ರಂಪ್​, ನನ್ನ ಆಸ್ತಿಗಳನ್ನು ವಾಸ್ತವವಾಗಿ ಕಡಿಮೆ ಮೌಲ್ಯೀಕರಣ ಮಾಡಲಾಗಿದೆ. ಇದು ನನ್ನ ವಿರುದ್ಧ ಪಿತೂರಿಯ ಭಾಗ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಇದನ್ನೂ ಓದಿ :ಭಾರತೀಯ ಅಮೆರಿಕನ್​ ವಿಜ್ಞಾನಿಗಳಿಗೆ ಅಮೆರಿಕದ ರಾಷ್ಟ್ರೀಯ ಗೌರವ: ಸುರೇಶ್​, ಅಶೋಕ್​ ಗಾಡ್ಗಿಲ್​ಗೆ ಬೈಡನ್​ ರಿಂದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ

ABOUT THE AUTHOR

...view details