ಇಸ್ಲಾಮಾಬಾದ್:ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇದೀಗ ಹೊಸ ವಿವಾದಕ್ಕೆ ಸಿಲುಕಿದ್ದಾರೆ. ಮಹಿಳೆಯೊಂದಿಗೆ ಇಮ್ರಾನ್ ಖಾನ್ ನಡೆಸಿದ್ದಾರೆ ಎಂದು ಹೇಳಲಾದ ಸೆಕ್ಸ್ ಸಂಭಾಷಣೆಯ ಆಡಿಯೋ ಸೋರಿಕೆಯಾಗಿದ್ದು, ಪಾಕಿಸ್ತಾನ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಆದರೆ, ಈ ಆರೋಪವನ್ನು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷ ಅಲ್ಲಗಳೆದಿದೆ.
ಇಮ್ರಾನ್ ಖಾನ್ ಎಂದು ಪರಿಚಯಿಸಿಕೊಂಡು ನಡೆಯುವ 'ಸೆಕ್ಸ್ ಟಾಕ್'ನಲ್ಲಿ ಮಹಿಳೆಯ ಜೊತೆಗೆ ಆಕ್ಷೇಪಾರ್ಹ ಪದಗಳನ್ನು ಬಳಸಲಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದೆ. ಎರಡು ಭಾಗಗಳಿರುವ ಆಡಿಯೋವನ್ನು ಪಾಕಿಸ್ತಾನಿ ಪತ್ರಕರ್ತ ಸೈಯದ್ ಅಲಿ ಹೈದರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.
ಆಡಿಯೋ ಕ್ಲಿಪ್‌ನಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಎಂದು ಹೇಳಲಾದ ವ್ಯಕ್ತಿ ಮಹಿಳೆಯೊಂದಿಗೆ ಕೆಟ್ಟ ಭಾಷೆಯಲ್ಲಿ ಮಾತನಾಡುತ್ತಿರುವುದು ಕೇಳಿಬರುತ್ತಿದೆ. ಆಡಿಯೋದಲ್ಲಿರುವ ಧ್ವನಿ ಇಮ್ರಾನ್ ಖಾನ್ರದ್ದೇ ಎಂಬ ಆರೋಪ ಕೇಳಿಬಂದಿದೆ. ವೈರಲ್ ಆಗಿರುವ ಎರಡು ಆಡಿಯೋ ಕ್ಲಿಪ್‌ಗಳಲ್ಲಿ ಒಂದು ಹಳೆಯದು ಎನ್ನಲಾಗಿದೆ.
ಇತ್ತೀಚಿನದು ಎಂದು ಹೇಳಲಾದ ಎರಡನೇ ಕ್ಲಿಪ್‌ನಲ್ಲಿ ಇಮ್ರಾನ್ ಖಾನ್ ಮಹಿಳೆಯನ್ನು ತನ್ನ ಬಳಿಗೆ ಬರಲು ಆಹ್ವಾನಿಸುತ್ತಾನೆ. ಆದರೆ, ಆಕೆ ನಿರಾಕರಿಸುತ್ತಾಳೆ. ಈ ವೇಳೆ ಇಮ್ರಾನ್ ಒತ್ತಾಯ ಮಾಡುತ್ತಿರುವುದು ಆಡಿಯೋದಲ್ಲಿದೆ. ಇದರ ವಿರುದ್ಧ ಇತರೆ ಪಕ್ಷಗಳು ಮುಗಿಬಿದ್ದಿದ್ದರೆ, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷ ಅಪವಾದವನ್ನು ನಿರಾಕರಿಸಿದೆ.
ಓದಿ:ಸೇನಾ ಮುಖ್ಯಸ್ಥರೇ ಪಿಟಿಐ ಸರ್ಕಾರ ಪತನಕ್ಕೆ ಕಾರಣ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಆರೋಪ