ಲಾಹೋರ್:ಗಂಭೀರ ಸ್ವರೂಪದಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನ ಸೇನೆಯಿಂದ ಬಂಧನಕ್ಕೊಳಗಾಗಿದ್ದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪಾಕ್ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಹಿನ್ನೆಲೆಯಲ್ಲಿ ನಿನ್ನೆ(ಶನಿವಾರ) ಬಿಡುಗಡೆಯಾಗಿದ್ದಾರೆ. ಲಾಹೋರ್‌ನಲ್ಲಿನ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾಕ್ ಸೇನೆಯ ವಿರುದ್ಧ ಆಕ್ರೋಶ ಹೊರಹಾಕಿದರು. ಸೇನೆಯು ರಾಜಕೀಯಕ್ಕೆ ಧುಮುಕುವುದಕ್ಕೆ ನಾಚಿಕೆಪಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ತಮ್ಮ ವಿರುದ್ಧದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್‌ಪಿಆರ್) ಆರೋಪಗಳಿಗೆ ಪ್ರತಿಕ್ರಿಯಿಸಿ "ವಿಶ್ವದಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದಾಗ ಸೇನೆಯ ಮಿಲಿಟರಿ ವಿಭಾಗದ ವಕ್ತಾರರು ಹುಟ್ಟಿರಲಿಲ್ಲ. ನಾನು ಪಾಕಿಸ್ತಾನದ ಧ್ವಜವನ್ನು ವಿಶ್ವಾದ್ಯಂತ ಎತ್ತರದಲ್ಲಿ ಇಟ್ಟುಕೊಂಡಿದ್ದೇನೆ. ಐಎಸ್‌ಪಿಆರ್ ಎಂದಿಗೂ ಇಂತಹ ಹೇಳಿಕೆ ನೀಡಿಲ್ಲ. ನಿಮ್ಮ ಬಗ್ಗೆ ನಿಮಗೆ ನಾಚಿಕೆಯಾಗಬೇಕು. ನೀವು ರಾಜಕೀಯಕ್ಕೆ ಧುಮುಕಿದ್ದೀರಿ. ನೀವು ರಾಜಕೀಯ ಪಕ್ಷವನ್ನು ಏಕೆ ಕಟ್ಟವಾರದು" ಎಂದು ಪ್ರಶ್ನಿಸಿದ್ದರು.
ಐಎಸ್‌ಪಿಆರ್ ಡೈರೆಕ್ಟರ್ ಜನರಲ್ ಮೇಜರ್ ಜನರಲ್ ಅಹ್ಮದ್ ಷರೀಫ್ ಚೌಧರಿ ಅವರು ಖಾನ್ ಅವರನ್ನು "ಕಪಟಿ" ಎಂದು ಕರೆದಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಇಮ್ರಾನ್, "ನನ್ನ ಮಾತನ್ನು ಕೇಳಿ ಮಿಸ್ಟರ್ ಡಿಜಿ ಐಎಸ್‌ಪಿಆರ್, ನಾನು ನನ್ನ ದೇಶವನ್ನು ವಿಶ್ವದಲ್ಲಿ ಪ್ರತಿನಿಧಿಸುವಾಗ ಮತ್ತು ಅದಕ್ಕೆ ಒಳ್ಳೆಯ ಹೆಸರು ಗಳಿಸುವಾಗ ನೀವು ಹುಟ್ಟಿರಲಿಲ್ಲ. ನನ್ನನ್ನು ಕಪಟ ಮತ್ತು ಸೇನೆಯ ವಿರೋಧಿ ಎಂದು ಕರೆದಿದ್ದಕ್ಕಾಗಿ ನೀವು ನಾಚಿಕೆಪಡಬೇಕು" ಎಂದು ಕಿಡಿಕಾರಿದರು.
ಇದನ್ನೂ ಓದಿ:ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅರೆಸ್ಟ್..