ಇಸ್ಲಾಮಾಬಾದ್(ಪಾಕಿಸ್ತಾನ) :ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಭಾರತದ ವಿದೇಶಾಂಗ ನೀತಿಯನ್ನು ಮತ್ತೊಮ್ಮೆ ಶ್ಲಾಘಿಸಿದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ‘ನವದೆಹಲಿಯ ನಿರ್ಧಾರವು ತನ್ನ ಜನರ ಒಳಿತಿಗಾಗಿದೆ’ ಎಂದು ಹೇಳಿದ್ದಾರೆ. ಲಾಹೋರ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಇಮ್ರಾನ್ ಖಾನ್, ಅಮೆರಿಕಕ್ಕೆ ಆಯಕಟ್ಟಿನ ಪಾಲುದಾರರಾಗಿರುವ ಭಾರತವು ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಅದರ ನಿರ್ಧಾರಗಳು ತಮ್ಮ ಜನರ ಒಳಿತನ್ನು ಆಧರಿಸಿವೆ. ಆದರೆ, ನಮ್ಮ ವಿದೇಶಾಂಗ ನೀತಿ ಇತರ ಜನರ ಸುಧಾರಣೆಗಿವೆ ಎಂದು ಹೇಳಿದರು.
ಮಾರ್ಚ್‌ನಲ್ಲಿ ಇಮ್ರಾನ್ ಖಾನ್ ಭಾರತದ ವಿದೇಶಾಂಗ ನೀತಿ ಸ್ವತಂತ್ರವಾಗಿದೆ ಮತ್ತು ಜನರ ಒಳಿತಿಗಾಗಿ ಎಂದು ಒಪ್ಪಿಕೊಂಡಿದ್ದರು. ಖೈಬರ್ ಪಖ್ತುಂಖ್ವಾದ ಮಲಕಂಡ್ ಪ್ರದೇಶದಲ್ಲಿ ಸಾರ್ವಜನಿಕ ರ್‍ಯಾಲಿಯಲ್ಲಿ ಇಮ್ರಾನ್ ಖಾನ್ ಮಾತು ಮುದುವರಿಸಿ, ನಮ್ಮ ನೆರೆಯ ದೇಶವು ಯಾವಾಗಲೂ ಸ್ವತಂತ್ರ ವಿದೇಶಾಂಗ ನೀತಿ ಹೊಂದಿರುವುದರಿಂದ ನಾನು ಪ್ರಶಂಸಿಸುತ್ತೇನೆ.
ಇಂದು ಭಾರತವು ಅವರ (ಅಮೆರಿಕಾ) ಮೈತ್ರಿಯಲ್ಲಿದೆ ಮತ್ತು ಅವರು ಕ್ವಾಡ್ (ಚತುರ್ಭುಜ ಭದ್ರತೆ) ಸದಸ್ಯರಾಗಿದ್ದಾರೆ. ನಿರ್ಬಂಧಗಳ ಹೊರತಾಗಿಯೂ ಅವರು ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. ಏಕೆಂದರೆ, ಅವರ ನೀತಿ ಜನರ ಒಳಿತಿಗಾಗಿದೆ ಎಂದು ಹೇಳಿದರು. ತನ್ನ ರಷ್ಯಾ ಭೇಟಿಯ ಕಾರಣವನ್ನು ಸಮರ್ಥಿಸಿಕೊಂಡ ಇಮ್ರಾನ್ ಖಾನ್, ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಹಣದುಬ್ಬರವನ್ನು ನಿಯಂತ್ರಿಸಲು ಮಾಸ್ಕೋಗೆ ಹೋಗಿದ್ದೇನೆ. ರಷ್ಯಾ ನಮಗೆ ತೈಲವನ್ನು ಶೇ.30ರಷ್ಟು ರಿಯಾಯಿತಿಯಲ್ಲಿ ನೀಡಿದ್ದರಿಂದ ನಾನು ಆ ದೇಶಕ್ಕೆ ಹೋಗಿದ್ದೆ ಎಂದು ಅವರು ಲಾಹೋರ್‌ನಲ್ಲಿ ಹೇಳಿದರು.
ಓದಿ:ಭಾರತವನ್ನು ನೋಡಿ ಸ್ವಾಭಿಮಾನ ಕಲಿಯಬೇಕು: ಪಾಕ್ ಪ್ರಧಾನಿ ಇಮ್ರಾನ್ ಖಾನ್
ನಾನು ಇದೇ ಮೊದಲ ಬಾರಿಗೆ ಅಲ್ಲ, ಪಾಕಿಸ್ತಾನಕ್ಕೆ ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸುವ ಕಾರಣದಿಂದ ಅಧಿಕಾರದಿಂದ ಕೆಳಗಿಳಿದಿದ್ದೇನೆ. ಅದು ಅಂತಾರಾಷ್ಟ್ರೀಯ ಶಕ್ತಿಗಳಿಗೆ ಇಷ್ಟವಾಗಲಿಲ್ಲ. ಕೊರೊನಾದಿಂದ ಪ್ರಪಂಚ ವಿನಾಶದ ಸಮಯದ ಹಾದಿಯಲ್ಲಿದ್ದಾಗ ನಮ್ಮ ದೇಶದ ಆರ್ಥಿಕ ಮಟ್ಟ ಏರುತ್ತಿರುವಾಗ, ರಫ್ತು ಸಾಗಾಟ ಹೆಚ್ಚುತ್ತಿದ್ದಾಗ ಜಾಗತಿಕ ಶಕ್ತಿಗಳು ಸ್ಥಳೀಯ ‘ಮೀರ್ ಜಾಫರ್ಸ್ ಮತ್ತು ಮೀರ್ ಸಾಧಿಕ್‌ಗಳ’ ಜೊತೆಗೆ ಸೇರಿ ನಮ್ಮ ಸರ್ಕಾರವನ್ನು ಕೊನೆಗೊಳಿಸಲು ಷಡ್ಯಂತ್ರ ರೂಪಿಸಿದರು ಎಂದು ಇಮ್ರಾನ್ ಖಾನ್ ಆರೋಪಿಸಿದರು.
ಇಮ್ರಾನ್ ಖಾನ್ ಅವರು ಕೇಬಲ್ ಗೇಟ್ ಸಮಸ್ಯೆ ಬಗ್ಗೆ ಮಾತನಾಡುತ್ತ, ಅಮೆರಿಕದ ಅಧಿಕಾರಿಯೊಬ್ಬರು ತಮ್ಮ ದೇಶದ ರಾಯಭಾರಿಗೆ ಬೆದರಿಕೆ ಹಾಕಿದ್ದಾರೆ. ಅಮೆರಿಕದಲ್ಲಿರುವ ಪಾಕಿಸ್ತಾನದ ರಾಯಭಾರಿಗೆ ದಕ್ಷಿಣ ಏಷ್ಯಾದ ಅಮೆರಿಕದ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲು ಬೆದರಿಕೆ ಹಾಕಿದ್ದಾರೆ. ರಷ್ಯಾಕ್ಕೆ ಹೋಗುವುದು ನನ್ನ ತಪ್ಪೇ ಎಂದು ಹೇಳಿದ್ದರು. ರಷ್ಯಾ ನಮಗೆ 30% ಕಡಿಮೆ ಬೆಲೆಗೆ ತೈಲವನ್ನು ನೀಡುತ್ತಿದೆ.