ಕರ್ನಾಟಕ

karnataka

ETV Bharat / international

ಪ್ರಧಾನಿ ನಿರ್ದೇಶನದ ಮೇಲೆ ನನ್ನ ಹತ್ಯೆ ಯತ್ನ: ಇಮ್ರಾನ್​ ಖಾನ್​ ಆರೋಪ - ಇಮ್ರಾನ್ ಖಾನ್

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಆಂತರಿಕ ಇಲಾಖೆ ಸಚಿವ ರಾಣಾ ಸನಾವುಲ್ಲಾ, ಐಎಸ್​ಐ ಮುಖ್ಯಸ್ಥ ಮೇಜರ್ ಜನರಲ್ ಫೈಸಲ್ ಅವರ ನಿರ್ದೇಶನದ ಮೇರೆಗೆ ತನ್ನ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್​​ ಖಾನ್​ ಆರೋಪಿಸಿದ್ದಾರೆ.

imran-khan-blames-pakistan-pm
ಇಮ್ರಾನ್​ ಖಾನ್​ ಆರೋಪ

By

Published : Nov 3, 2022, 11:04 PM IST

ಇಸ್ಲಾಮಾಬಾದ್:ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಆಂತರಿಕ ಇಲಾಖೆ ಸಚಿವ ರಾಣಾ ಸನಾವುಲ್ಲಾ, ಐಎಸ್​ಐ ಮುಖ್ಯಸ್ಥ ಮೇಜರ್ ಜನರಲ್ ಫೈಸಲ್ ಅವರ ನಿರ್ದೇಶನದ ಮೇರೆಗೆ ತನ್ನ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್​​ ಖಾನ್​ ಆರೋಪಿಸಿದ್ದಾರೆ.

ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಅವರು ಹೇಳಿಕೆ ನೀಡಿದ್ದು, ದೇಶದ ಮೂವರು ಉನ್ನತ ವ್ಯಕ್ತಿಗಳೇ ತನ್ನನ್ನು ಮುಗಿಸಲು ಈ ಸಂಚು ರೂಪಿಸಿದ್ದಾರೆ. ಪ್ರಧಾನಿ, ಸಚಿವ ಮತ್ತು ಐಎಸ್​ಐ ಮುಖ್ಯಸ್ಥರು ನನ್ನ ಹತ್ಯೆ ಯತ್ನಕ್ಕೆ ಕಾರಣರು ಎಂದು ಆರೋಪಿಸಿ, ಘಟನೆ ಬಳಿಕ ಅವರು ನಾಟಕೀಯವಾಗಿ ಖೇದ ವ್ಯಕ್ತಪಡಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸದ್ಯಕ್ಕೆ ಇಮ್ರಾನ್ ಖಾನ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ, ಪ್ರಧಾನಮಂತ್ರಿ ರಾಜೀನಾಮೆ ನೀಡಬೇಕು ಎಂದು ಇಮ್ರಾನ್​ ಖಾನ್​ ಪಕ್ಷ ಒತ್ತಾಯಿಸಿದೆ.

ಓದಿ:ಭಾರತ ಹೊಗಳಿದ್ದ ಪಾಕ್​ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಮೇಲೆ ಗುಂಡಿನ ದಾಳಿ

ABOUT THE AUTHOR

...view details