ವಾಷಿಂಗ್ಟನ್: ಪಾಕಿಸ್ತಾನದ ಹೊಸ ಸರ್ಕಾರವು ಜನಾಂಗೀಯ ಮತ್ತು ಧಾರ್ಮಿಕ ಸಂಘರ್ಷಗಳನ್ನು ಶಮನಗೊಳಿಸುವಲ್ಲಿ ರಚನಾತ್ಮಕ ಪಾತ್ರವನ್ನು ವಹಿಸಬೇಕು ಎಂದು ಪ್ರಜಾಪ್ರಭುತ್ವವಾದಿಗಳು, ಬುದ್ಧಿಜೀವಿಗಳು, ರಾಜಕಾರಣಿಗಳು, ಪತ್ರಕರ್ತರು ಮತ್ತು ಕಾರ್ಯಕರ್ತರ ಗುಂಪು ಒತ್ತಾಯಿಸಿದೆ. ಭಾರತ ಮತ್ತು ಇತರ ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯಕ್ಕಾಗಿ ಶ್ರಮಿಸಬೇಕು ಎಂದು ಇವರೆಲ್ಲ ಒತ್ತಾಯಿಸಿದ್ದಾರೆ.
ಭಯೋತ್ಪಾದನೆ ವಿರುದ್ಧ ಮತ್ತು ಮಾನವ ಹಕ್ಕುಗಳ (SAATH) ವಿರುದ್ಧ ದಕ್ಷಿಣ ಏಷ್ಯನ್ನರು ಆಯೋಜಿಸಿದ್ದ ವರ್ಚುಯಲ್ ಸಮ್ಮೇಳನದಲ್ಲಿ ಈ ಒತ್ತಾಯ ಕೇಳಿ ಬಂದಿದೆ. ಪ್ರಧಾನಿ ಸ್ಥಾನದಿಂದ ಇಮ್ರಾನ್ ಖಾನ್ ನಿರ್ಗಮಿಸಿದ ನಂತರ ರಚಿಸಲಾದ ಹೊಸ ಸರ್ಕಾರವು ತಕ್ಷಣವೇ ಬಲೂಚ್ ರಾಷ್ಟ್ರೀಯವಾದಿಗಳೊಂದಿಗೆ ಮಾತುಕತೆ ನಡೆಸುವಂತೆ ಹಾಗೂ ಆ ಭಾಗದಲ್ಲಿನ ಹಿಂಸಾಚಾರಕ್ಕೆ ಅಂತ್ಯ ಹಾಡುವಂತೆ ಕರೆ ನೀಡಿದೆ. ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬೇಕು ಎಂದು ಪ್ರಜಾಪ್ರಭುತ್ವ ಪರ ವಾದಿಗಳು ಪಾಕ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನೆರೆಯ ರಾಷ್ಟ್ರಗಳೊಂದಿಗೆ ಸೌಹಾರ್ಧ ಸಂಬಂಧ ಬಲಪಡಿಸಲು ಕರೆ:ನೆರೆಯ ರಾಷ್ಟ್ರಗಳು, ವಿಶೇಷವಾಗಿ ಭಾರತ ಮತ್ತು ಅಫ್ಘಾನಿಸ್ತಾನದೊಂದಿಗಿನ ಸಂಬಂಧವನ್ನು ಸುಧಾರಿಸಬೇಕು ಎಂದು ಸಮ್ಮೇಳನದಲ್ಲಿ ಭಾಗವಹಿಸಿದವರು ಆಗ್ರಹಿಸಿದ್ದಾರೆ. SAATH ಸಹ ಸಂಸ್ಥಾಪಕ ಮತ್ತು ಅಮೆರಿಕದಲ್ಲಿನ ಪಾಕಿಸ್ತಾನದ ಮಾಜಿ ರಾಯಭಾರಿ ಹುಸೇನ್ ಹಕ್ಕಾನಿ, ರಾಜಕೀಯದ ಮಿಲಿಟರೀಕರಣ ಮತ್ತು ರಾಜಕೀಯ ಉದ್ದೇಶಗಳಿಗಾಗಿ ಧರ್ಮವನ್ನು ಬಳಸುವುದನ್ನು ಕೊನೆಗೊಳಿಸಬೇಕಿದೆ. ಇದಾಗದ ಹೊರತು ಪಾಕಿಸ್ತಾನವು ತನ್ನ ಪ್ರಸ್ತುತ ಅವ್ಯವಸ್ಥೆಯಿಂದ ಹೊರಬರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.