ಜಾಗತಿಕ ಆರ್ಥಿಕತೆಯ ಮೂರನೇ ಒಂದು ಭಾಗ ಆರ್ಥಿಕ ಹಿಂಜರಿತ ಎದುರಿಸಲಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಕಷ್ಟಕರವಾಗಿರಲಿದೆ. ಅಮೆರಿಕ, ಯುರೋಪ್ ಮತ್ತು ಚೀನಾ ತಮ್ಮ ಆರ್ಥಿಕತೆಯಲ್ಲಿ ಕುಸಿತ ಕಾಣಲಿದೆ ಎಂದು ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವ್ ಎಚ್ಚರಿಸಿದ್ದಾರೆ.
ಜನವರಿ 1ರಂದು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 10 ತಿಂಗಳಾದರೂ ರಷ್ಯಾ- ಉಕ್ರೇನ್ ಯುದ್ದ ಅಂತ್ಯ ಕಾಣುವ ಲಕ್ಷಣ ತೋರುತ್ತಿಲ್ಲ. ಇದರ ಹೊರತಾಗಿ ಹಣದುಬ್ಬರ ಏರಿಕೆ, ಬಡ್ಡಿದರ ಹೆಚ್ಚಳ ಮತ್ತು ಚೀನಾದಲ್ಲಿ ಕೋವಿಡ್ ಉಲ್ಬಣಗೊಳ್ಳುತ್ತಿದೆ ಎಂದರು.
ಜಗತ್ತಿನ ಮೂರನೇ ಒಂದು ಭಾಗದ ಆರ್ಥಿಕ ಹಿಂಜರಿತ ಅನುಭವಿಸಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 2023 ಕಷ್ಟಕರವಾಗಿರಲಿದೆ. ಕಾರಣ ಅಮೆರಿಕ, ಇಯು ಮತ್ತು ಚೀನಾದಲ್ಲಿ ಕುಸಿತ ಕಾಣಲಿದೆ. ಆರ್ಥಿಕ ಹಿಂಜರಿತ ಹೊಂದಿಲ್ಲದ ದೇಶದಲ್ಲೂ ಲಕ್ಷಾಂತರ ಜನರು ಆರ್ಥಿಕ ಹಿಂಜರಿತ ಅನುಭವಿಸಲಿದ್ದಾರೆ ಎಂದು ಅವರು ವಿವರಿಸಿದರು.