ಕರ್ನಾಟಕ

karnataka

ETV Bharat / international

'ಭಾರತಕ್ಕೆ ಹಾನಿಯಾದರೆ ಯಾರನ್ನೂ ಬಿಡೆವು': ಅಮೆರಿಕದಲ್ಲಿ ನಿಂತು ರಾಜನಾಥ್‌ ಸಿಂಗ್ ಎಚ್ಚರಿಕೆ - ಅಮೆರಿಕಕ್ಕೂ ರಾಜನಾಥ್​ ಸೂಕ್ಷ್ಮ ಸಂದೇಶ

ಉಕ್ರೇನ್​ ಮೇಲೆ ಯುದ್ಧ ಸಾರಿದ ರಷ್ಯಾ ವಿಷಯದಲ್ಲಿ ಭಾರತ ತಾಳಿರುವ ನಿಲುವಿನ ವಿಚಾರವಾಗಿ ರಾಜನಾಥ್​ ಸಿಂಗ್ ಪರೋಕ್ಷವಾಗಿ ಅಮೆರಿಕಕ್ಕೂ ರಾಜತಾಂತ್ರಿಕ ಸಂದೇಶ ಕೊಟ್ಟಿದ್ದಾರೆ. ಒಬ್ಬರಿಗೆ ಲಾಭ, ಮತ್ತೊಬ್ಬರಿಗೆ ನಷ್ಟ ಎಂಬ ರಾಜತಾಂತ್ರಿಕತೆಯನ್ನು ಭಾರತ ನಂಬುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಚೀನಾಕ್ಕೆ  ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಕಠಿಣ ಸಂದೇಶ
ಚೀನಾಕ್ಕೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಕಠಿಣ ಸಂದೇಶ

By

Published : Apr 15, 2022, 8:10 PM IST

ವಾಷಿಂಗ್ಟನ್(ಅಮೆರಿಕ): ಅಮೆರಿಕದ ಪ್ರವಾಸದಲ್ಲಿರುವ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅಲ್ಲಿಂದಲೇ ನೆರೆಯ ಚೀನಾಕ್ಕೆ ಕಠಿಣ ಸಂದೇಶ ರವಾನಿಸಿದರು. ಭಾರತಕ್ಕೆ ಏನಾದರೂ ಹಾನಿಯಾದರೆ, ಯಾರನ್ನೂ ಬಿಡುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಪ್ರಬಲ ರಾಷ್ಟ್ರವಾಗಿ ಮುನ್ನಡೆಯುತ್ತಿದೆ ಮತ್ತು ಆರ್ಥಿಕತೆಯಲ್ಲಿ ವಿಶ್ವದ ಅಗ್ರ ಮೂರು ರಾಷ್ಟ್ರಗಳಲ್ಲಿ ಒಂದಾಗುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ಭಾರತೀಯ-ಅಮೆರಿಕನ್ ಸಮುದಾಯ ಉದ್ದೇಶಿಸಿ ಮಾತನಾಡಿದ ಅವರು, ಚೀನಾದ ಗಡಿ ತಗಾದೆಯನ್ನು ಪ್ರಸ್ತಾಪಿಸಿದರು. ಗಡಿಯಲ್ಲಿ ಭಾರತೀಯ ಸೈನಿಕರು ಏನು ಮಾಡುತ್ತಿದ್ದಾರೆ ಮತ್ತು ನಮ್ಮ ಸರ್ಕಾರ ಯಾವ ತೀರ್ಮಾನ ಕೈಗೊಂಡಿದೆ ಎಂಬುವುದನ್ನು ಬಹಿರಂಗವಾಗಿ ಹೇಳುವುದಿಲ್ಲ. ಆದರೆ, ಏನಾದರೂ ಹಾನಿಯಾದರೆ, ಭಾರತ ಯಾರನ್ನೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಅಲ್ಲದೇ, ಭಾರತವು ಒಬ್ಬರಿಗೆ ನಷ್ಟ, ಮತ್ತೊಬ್ಬರಿಗೆ ನಷ್ಟ ಉಂಟುಮಾಡುವ ರಾಜತಾಂತ್ರಿಕತೆಯನ್ನು ನಂಬುವುದಿಲ್ಲ. ಹಾಗೆಂದು ಒಂದು ದೇಶದೊಂದಿಗಿನ ಸಂಬಂಧವು ಮತ್ತೊಂದು ರಾಷ್ಟ್ರಕ್ಕೆ ದುಬಾರಿಯೂ ಆಗಬಾರದು ಎಂದು ಭಾರತ ನಂಬಿದೆ ಎನ್ನುವ ಮೂಲಕ ಅಮೆರಿಕಕ್ಕೂ ಸೂಕ್ಷ್ಮವಾದ ಸಂದೇಶ ಕೊಟ್ಟರು.

ಪ್ರಸ್ತುತ ಭಾರತದ ಸಂಪೂರ್ಣ ಚಿತ್ರಣ ಬದಲಾಗಿದೆ. ಜಗತ್ತಿನಲ್ಲಿ ಭಾರತದ ಗೌರವ ಹೆಚ್ಚಾಗಿದೆ. ಮುಂದಿನ ಕೆಲವು ವರ್ಷಗಳಲ್ಲಿ ವಿಶ್ವದ ಯಾವುದೇ ಶಕ್ತಿ ಕೂಡ ಭಾರತವನ್ನು ವಿಶ್ವದ ಆರ್ಥಿಕತೆಯ ಅಗ್ರಗಣ್ಯ ಮೂರು ರಾಷ್ಟ್ರಗಳಲ್ಲಿ ಭಾರತ ಒಂದಾಗುವುದನ್ನು ತಡೆಯಲು ಸಾಧ್ಯವಿಲ್ಲ. ಜಾಗತಿಕವಾಗಿಯೂ ಜನರು ಈಗ ಭಾರತ ದುರ್ಬಲ ರಾಷ್ಟ್ರವಲ್ಲ ಎಂಬುವುದನ್ನು ಅರಿತುಕೊಂಡಿದ್ದಾರೆ. ಇಂದು ಭಾರತ ಜಗತ್ತನ್ನೇ ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದೆ ಎಂದರು.

ಇದನ್ನೂ ಓದಿ:ಮುಂದಿನ 10 ವರ್ಷಗಳಲ್ಲಿ ಭಾರತ ದಾಖಲೆ ಸಂಖ್ಯೆಯ ವೈದ್ಯರ ಪಡೆಯಲಿದೆ: ಮೋದಿ

ABOUT THE AUTHOR

...view details