ಸ್ಪೋಕೇನ್ (ಅಮೆರಿಕ): ಅಮೆರಿಕದ ಇಡಾಹೊ ವಿಶ್ವವಿದ್ಯಾಲಯದ ಮೂವರು ವಿದ್ಯಾರ್ಥಿನಿಯರು ಸೇರಿ ನಾಲ್ವರು ವಿದ್ಯಾರ್ಥಿಗಳಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಬಾಡಿಗೆ ಮನೆಯಲ್ಲಿ ಮಲಗಿದ್ದಾಗ ಸ್ಥಿತಿಯಲ್ಲಿ ನಾಲ್ವರು ಶವಗಳು ಪತ್ತೆಯಾಗಿದ್ದು, ದೇಹಗಳ ಮೇಲೆ ಅನೇಕ ಇರಿತದ ಗುರುತುಗಳು ಇವೆ ಎಂದು ವರದಿಯಾಗಿದೆ.
ಕೊಲೆಯಾದ ವಿದ್ಯಾರ್ಥಿನಿಯರನ್ನು ಕ್ಸಾನಾ ಕೆರ್ನಾಡಲ್ (20), ಕೈಲೀ ಗೊನ್ಕಾಲ್ವ್ಸ್ (21), ಮ್ಯಾಡಿಸನ್ ಮೊಗೆನ್ (21) ಹಾಗೂ ವಿದ್ಯಾರ್ಥಿ ಎಥಾನ್ ಚಾಪಿನ್ (20) ಎಂದು ಗುರುತಿಸಲಾಗಿದೆ. ಎಲ್ಲ ವಿದ್ಯಾರ್ಥಿನಿಯರು ರೂಮ್ಮೆಂಟ್ಗಳಾಗಿದ್ದರು. ಎದೆ ಭಾಗ ಸೇರಿ ದೇಹದ ಹಲವೆಡೆ ಸಾಕಷ್ಟು ಇರಿಯಲಾಗಿದೆ ಎಂದು ವರದಿಗಳು ತಿಳಿಸಿವೆ.