ಕರ್ನಾಟಕ

karnataka

ETV Bharat / international

ಪತನಗೊಂಡ ಸಿಲಿಕಾನ್ ವ್ಯಾಲಿ ಬ್ಯಾಂಕ್​ ಇಂಗ್ಲೆಂಡ್​ ಶಾಖೆ ಖರೀದಿಸಿದ ಎಚ್‌ಎಸ್‌ಬಿಸಿ

ನವೋದ್ಯಮಗಳಿಗೆ ಸಾಲ ಒದಗಿಸುವ ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್‌ ಶಾಖೆಯನ್ನು ಇಂಗ್ಲೆಂಡ್ ಬ್ಯಾಂಕ್​ ಖರೀದಿ ಮಾಡಿದೆ.

ಸಿಲಿಕಾನ್ ವ್ಯಾಲಿ ಬ್ಯಾಂಕ್
ಸಿಲಿಕಾನ್ ವ್ಯಾಲಿ ಬ್ಯಾಂಕ್

By

Published : Mar 13, 2023, 3:45 PM IST

ಲಂಡನ್:ಸ್ಟಾರ್ಟಪ್​ಗಳಿಗೆ ಹಣ ನೀಡುತ್ತಿದ್ದ ಅಮೆರಿಕದ ಬ್ಯಾಂಕ್​ ದಿವಾಳಿಯಾಗಿದ್ದು, ಅದರ ಇಂಗ್ಲೆಂಡ್​ನಲ್ಲಿನ ಶಾಖೆಯನ್ನು 8.1 ಬಿಲಿಯನ್​ ಡಾಲರ್​ಗೆ ಎಚ್​ಎಸ್​ಬಿಸಿ ಖರೀದಿ ಮಾಡಿದೆ. ಇಂಗ್ಲೆಂಡ್​ ರುಪೀ ಪ್ರಕಾರ 6.7 ಬಿಲಿಯನ್​ ಪೌಂಡ್​ಗೆ ಈ ಡೀಲ್​ ನಡೆದಿದೆ.

ಈ ಬಗ್ಗೆ ಟ್ವೀಟ್​​ ಮಾಡಿರುವ ಬ್ರಿಟನ್​ ಸಂಸದ ಜೆರೆಮಿ ಹಂಟ್, ಸಿಲಿಕಾನ್​ ವ್ಯಾಲಿ ಬ್ಯಾಂಕ್​ನ ಘಟಕವನ್ನು ಇಂಗ್ಲೆಂಡ್​ ಬ್ಯಾಂಕ್​ ಖರೀದಿ ಮಾಡಿದೆ. ಬ್ಯಾಂಕ್​ನಲ್ಲಿನ ಹಣ ಭದ್ರವಾಗಿದ್ದು, ಅದನ್ನು ಇಂಗ್ಲೆಂಡ್​ ಬ್ಯಾಂಕ್​ನೊಂದಿಗೆ ವಿಲೀನಗೊಳಿಸಿ ಬ್ಯಾಂಕಿಂಗ್​ ವ್ಯವಹಾರ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಕಳೆದ ವಾರ ದಿವಾಳಿಯಾಗಿದೆ ಎಂದು ಘೋಷಿಸಿಕೊಂಡಿದ್ದ ಕ್ಯಾಲಿಫೋರ್ನಿಯಾ ಮೂಲದ ಎಸ್​ವಿಬಿಯ ಯುಕೆ ಘಟಕದ ಖರೀದಿದಾರರನ್ನು ಹುಡುಕಲು ಬ್ರಿಟಿಷ್ ಅಧಿಕಾರಿಗಳು ಕೆಲಸ ಮಾಡಿದ್ದರು. ಅದರಂತೆ ಇಂಗ್ಲೆಂಡ್​ ಬ್ಯಾಂಕ್​ ಸಿಲಿಕಾನ್​ ವ್ಯಾಲಿಯನ್ನು ಖರೀದಿ ಮಾಡಿದೆ. "ಯಾವುದೇ ತೆರಿಗೆದಾರರ ಬೆಂಬಲವಿಲ್ಲದೇ ಠೇವಣಿಗಳನ್ನು ರಕ್ಷಿಸಲಾಗುತ್ತದೆ. ಸ್ಟಾರ್ಟಪ್​ಗಳ ರಕ್ಷಣೆಗೆ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ನೀಡಿದ ಭರವಸೆಯಂತೆ ಟೆಕ್​ ವಲಯವನ್ನು ರಕ್ಷಣೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಬ್ಯಾಂಕಿಂಗ್​ ವ್ಯವಸ್ಥೆ ಸರಿದಾರಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನವೋದ್ಯಮ ಬ್ಯಾಂಕ್​ ಮುಳುಗಿದ್ದೇಗೆ?:ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ಬಹು ದೊಡ್ಡ ಚಿಲ್ಲರೆ ಬ್ಯಾಂಕಿಂಗ್ ಆದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನ ಕಂಡಿದೆ. ಇದು ಅಮೆರಿಕದಲ್ಲಿ ಮಾತ್ರವಲ್ಲದೇ ಇದರಲ್ಲಿ ಹೂಡಿಕೆ ಮಾಡಿದ ಅದೆಷ್ಟೋ ದೇಶಗಳ ಹೂಡಿಕೆದಾರರು, ಕಂಪನಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಆರ್ಥಿಕ ವಲಯದಲ್ಲಿ ಅಲ್ಲೋಕ ಕಲ್ಲೋಲ ಸೃಷ್ಟಿಸಿದ್ದು, ಅದರ ತೀವ್ರತೆಯನ್ನು ಇನ್ನಷ್ಟೇ ಮೌಲ್ಯಮಾಪನ ಮಾಡಬೇಕಿದೆ. ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಅನಿರೀಕ್ಷಿತ ಪತನ ಭಾರತದ ನವೋದ್ಯಮಗಳ ಮೇಲೂ ಪರಿಣಾಮ ಬೀರಿದೆಯಾ ಎಂಬುದನ್ನು ಇನ್ನಷ್ಟೇ ತಿಳಿದು ಬರಬೇಕಿದೆ.

ನವೋದ್ಯಮಗಳಿಗೆ ಸಾಲ ಒದಗಿಸುವ ಪ್ರಮುಖ ಹಣಕಾಸು ಸಂಸ್ಥೆಯಾದ ಸಿಲಿಕಾನ್ ವ್ಯಾಲಿ ಬ್ಯಾಂಕ್‌ ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿತ್ತು. ಸ್ಟಾರ್ಟಪ್​ಗಳಿಗೆ ಹಣ ನೀಡಿ ಅವುಗಳು ಪ್ರಗತಿ ಸಾಧಿಸುವಂತೆ ನೋಡಿಕೊಂಡಿತ್ತು. ಕಂಪನಿಗಳು ಕೂಡ ಲಾಭದ ಹಣವನ್ನು ಇದೇ ಬ್ಯಾಂಕ್​ನಲ್ಲಿ ಠೇವಣಿ ಮಾಡಿದ್ದವು. ಈ ಹಣವನ್ನು ಬ್ಯಾಂಕ್​ ಬಾಂಡ್​ಗಳಲ್ಲಿ ಹೂಡಿಕೆ ಮಾಡಿತ್ತು. ಅಮೆರಿಕ ಸರ್ಕಾರ ಹಣ ದುಬ್ಬರವನ್ನು ತಡೆಯಲು ಬಡ್ಡಿ ದರವನ್ನು ಏರಿಕೆ ಮಾಡಿತ್ತು. ಇದರಿಂದ ಬಾಂಡ್​ಗಳ ಮೌಲ್ಯ ಕುಸಿತ ಕಂಡಿತ್ತು.

ಬಾಂಡ್​ಗಳ ಮೌಲ್ಯ ಕುಸಿತದಿಂದ ಸಿಲಿಕಾನ್​ ವ್ಯಾಲಿ ಹೂಡಿಕೆ ತೀವ್ರ ಪ್ರಮಾಣದಲ್ಲಿ ನಷ್ಟಕ್ಕೀಡಾಗಿದೆ. ಹೂಡಿಕೆ ಮಾಡಿದ ಹಣಕ್ಕಿಂತಲೂ ಬಾಂಡ್​ಗಳ ಮೌಲ್ಯ ಕಡಿಮೆಯಾಗಿದೆ. ಇದರಿಂದ ಬ್ಯಾಂಕ್​ ದಿವಾಳಿಯಾಗಿದೆ. ಬ್ಯಾಂಕ್​ ಪತನ ಕಂಡಿದ್ದೇ ತಡ ಎಲ್ಲ ಹೂಡಿಕೆದಾರರಲ್ಲಿ ಆತಂಕ ಉಂಟಾಗಿದೆ. ಇದರಿಂದ ಸರ್ಕಾರ ತಕ್ಷಣವೇ ಬ್ಯಾಂಕ್ ಅನ್ನು ಇನ್ನೊಂದು ಬ್ಯಾಂಕ್​ನಲ್ಲಿ ವಿಲೀನಗೊಳಿಸಿ ಹೂಡಿಕೆದಾರರ ರಕ್ಷಣೆಗೆ ಮುಂದಾಗಿದೆ.

ಭಾರತಕ್ಕೆ ಪರಿಣಾಮವಿದೆಯಾ?:ಸಿಲಿಕಾನ್​ ವ್ಯಾಲಿ ಬ್ಯಾಂಕ್​ನಲ್ಲಿ ಭಾರತೀಯ ಮೂಲದ ನವೋದ್ಯಮಗಳು ಹೂಡಿಕೆ ಮಾಡಿವೆಯಾ ಎಂಬುದರ ಬಗ್ಗೆ ಇನ್ನು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಈ ಬಗ್ಗೆ ಸರ್ಕಾರ ಸಭೆ ಕರೆದಿದ್ದು, ಹೂಡಿಕೆದಾರರ ರಕ್ಷಣೆಗೆ ಮುಂದಾಗಿದೆ. ಭಾರತೀಯ ನವೋದ್ಯಮಗಳು ಇಲ್ಲಿ ಹೂಡಿಕೆ ಮಾಡಿದಲ್ಲಿ ಅದನ್ನು ಹೇಗೆ ಪಡೆಯಬೇಕು ಎಂಬುದರ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.

1 ಲಕ್ಷ ಉದ್ಯೋಗ ಕಡಿತ ಭಯ:ನವೋದ್ಯಮಗಳ ಬ್ಯಾಂಕ್​ ಆದ ಸಿಲಿಕಾನ್​ ವ್ಯಾಲಿ ಪತನಗೊಂಡಿದ್ದರಿಂದ ಅದರ ಶಾಖೆಗಳ ಸಿಬ್ಬಂದಿಗಳ ಕಡಿತವಾಗುವ ಸಾಧ್ಯತೆ ಇದೆ. ಇದು ಎಲ್ಲ ದೇಶಗಳಲ್ಲಿ ಶಾಖೆಗಳನ್ನು ಹೊಂದಿದ್ದು ಕನಿಷ್ಟ 10 ಸಿಬ್ಬಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಒಟ್ಟಾರೆ ಬ್ಯಾಂಕ್​ನ 1 ಲಕ್ಷಕ್ಕೂ ಅಧಿಕ ಜನರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಓದಿ:ಅಮೆರಿಕ ಇತಿಹಾಸದಲ್ಲಿ 2ನೇ ಅತಿದೊಡ್ಡ ಬ್ಯಾಂಕ್ ವೈಫಲ್ಯ..' ಸಿಲಿಕಾನ್ ವ್ಯಾಲಿ ಬ್ಯಾಂಕ್' ಮುಚ್ಚಲು ಆದೇಶ

ABOUT THE AUTHOR

...view details