ಕರ್ನಾಟಕ

karnataka

ETV Bharat / international

ಪಾಶ್ಚಿಮಾತ್ಯದ ಎಚ್ಚರಿಕೆ ತಿರಸ್ಕರಿಸಿದ ಹೌತಿ ಉಗ್ರರು; ಇಸ್ರೇಲ್​ ಯುದ್ದ ನಿಲ್ಲುವವರೆಗೆ ನಡೆಯಲಿದೆ ದಾಳಿ - ಕೆಂಪು ಸಮುದ್ರದಲ್ಲಿ ಹೌತಿ

ಹಮಾಸ್​ ನಿಯಂತ್ರಿತ ಪ್ರದೇಶಗಳ ಮೇಲೆ ದಾಳಿ ನಿಲ್ಲಿಸುವವರೆಗೆ ಇಸ್ರೇಲ್​​ಗೆ​ ಸಂಬಂಧಿತ ವಾಣಿಜ್ಯ ಹಡಗಿನ ಮೇಲೆ ಶಸ್ತ್ರಸಜ್ಜಿತ ದಾಳಿಯನ್ನು ಮುಂದುವರೆಸುವುದಾಗಿ ಹೌತಿ ನಾಯಕ ಒತ್ತಿ ಹೇಳಿದ್ದಾರೆ.

Houthi militia rejected Western nations warning
Houthi militia rejected Western nations warning

By ETV Bharat Karnataka Team

Published : Jan 5, 2024, 12:06 PM IST

ಹೈದ್ರಾಬಾದ್​​: ಕೆಂಪು ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಿಲ್ಲಿಸುವಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ನೀಡಿದ ಎಚ್ಚರಿಕೆಯನ್ನು ಇರಾನ್​ ಬೆಂಬಲಿತ ಹೌತಿ ಉಗ್ರರು ತಿರಸ್ಕರಿಸಿದ್ದಾರೆ. ಅಲ್ಲದೇ ಗಾಜಾ ಮೇಲಿನ ಯುದ್ದ ನಿಲ್ಲಿಸುವವರೆಗೆ ಇಸ್ರೇಲ್​ ಸಂಬಂಧಿತ ಹಡುಗಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಾಗಿ ತಿಳಿಸಿದ್ದಅರೆ.

ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಹೌತಿ ವಕ್ತಾರ ಧೈಫಲ್ಲಾಹ್ ಅಲ್ ಶಮಿ, ಇಸ್ರೇಲ್​​ನ ಅಪರಾಧಗಳನ್ನು ಮುಚ್ಚಿಡುವ ಮತ್ತು ನೈತಿಕ ವೈಫಲ್ಯದ ಪ್ರಯತ್ನ ಇದಾಗಿದೆ. ಈ ಮೂಲಕ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ಇಸ್ರೇಲ್​ ಪ್ಯಾಲೇಸ್ತಿನಿಯರ ಮೇಲೆ ನಡೆಸುತ್ತಿರುವ ನರಮೇಧವನ್ನು ಬೆಂಬಲಿಸುತ್ತಿದೆ ಎಂದು ಕಿಡಿಕಾರಿದ್ದಾರೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹಮಾಸ್​ ನಿಯಂತ್ರಿತ ಪ್ರದೇಶಗಳ ಮೇಲೆ ದಾಳಿ ನಿಲ್ಲಿಸುವವರೆಗೆ ಇಸ್ರೇಲ್​​ಗೆ​ ಸಂಬಂಧಿತ ವಾಣಿಜ್ಯ ಹಡಗಿನ ಮೇಲೆ ಶಸ್ತ್ರಸಜ್ಜಿತ ದಾಳಿಯನ್ನು ಮುಂದುವರೆಸುವುದಾಗಿ ಹೌತಿ ನಾಯಕ ಒತ್ತಿ ಹೇಳಿದ್ದಾರೆ.

2023ರಲ್ಲಿ ನವೆಂಬರ್​​ನಲ್ಲಿ​ ಹೌತಿ ಉಗ್ರರು, ಕೆಂಪು ಸಮುದ್ರದಲ್ಲಿ ಸಂಚರಿಸುವ ಇಸ್ರೇಲ್​ ಸಂಬಂಧಿತ 20ಕ್ಕೂ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಗೆ ಅವರು ಹೌತಿ ಉಗ್ರರು, ಕ್ಷಿಪಣಿ, ಡ್ರೋನ್​, ಫಾಸ್ಟ್​ ಬೋಟ್​​ ಮತ್ತು ಹೆಲಿಕ್ಯಾಪ್ಟರ್​​ಗಳ ಮೇಲೆ ದಾಳಿ ನಡೆಸುತ್ತಿದೆ.

ಈ ದಾಳಿಯಿಂದಾಗಿ ಸಮುದ್ರದ ಸಂಚರಿಸುವ ನೌಕೆಗಳ ಭದ್ರತೆಗೆ ಧಕ್ಕೆ ಬಂದಿದ್ದು, ಇದು ಹಲವು ದೇಶಗಳಿಗೆ ಹೆಚ್ಚಿನ ವೆಚ್ಚಕ್ಕೆ ಕಾರಣವಾಗುತ್ತಿದೆ. ಈ ಹಿನ್ನಲೆ ಬುಧವಾರ 12 ಪಾಶ್ಚಿಮಾತ್ಯ ರಾಷ್ಟ್ರಗಳು ಹೌತಿ ಉಗ್ರರಿಗೆ ಕೆಂಪು ಸಮುದ್ರದ ಮೇಲೆ ದಾಳಿ ನಡೆಸದಂತೆ ಎಚ್ಚರಿಕೆಯನ್ನು ನೀಡಿದ್ದರು. ಈ ದಾಳಿಗಳು ಅಪರಾಧ, ಸಹಿಸಲಾಗದ ಮತ್ತು ಅಸ್ಥಿರಗೊಳಿಸುವ ಯತ್ನವಾಗಿದೆ.

ಜಾಗತಿಕ ವ್ಯಾಪಾರದ ಸುಮಾರು ಶೇ 15 ಪ್ರತಿಶತ ವಹಿವಾಟುಗಳು ಈ ಕೆಂಪು ಸಮುದ್ರದ ಜಲಮಾರ್ಗದ ಮೂಲಕ ನಡೆಯುತ್ತದೆ. ಪಾಶ್ಚಿಮಾತ್ಯದಿಂದ ಪೂರ್ವ ದೇಶಗಳಿಗೆ ಸಂಪರ್ಕಿಸುವ ಸುಲಭ ಮತ್ತು ಕಡಿಮೆ ವೆಚ್ಚದಾಯಕ ನಿರ್ಣಾಯಕ ಮಾರ್ಗ ಇದಾಗಿದೆ. ಇದೀಗ ಹೌತಿ ಉಗ್ರರ ದಾಳಿಯಿಂದಾಗಿ ಇದು ನಾವಿಕರ ಸ್ವಾತಂತ್ರ್ಯಕ್ಕೆ ಬೆದರಿಕೆ ಒಡ್ಡುತ್ತಿವೆ ಈ ಹಿನ್ನಲೆ ತಕ್ಷಣಕ್ಕೆ ಈ ದಾಳಿ ನಿಲ್ಲಿಸುವಂತೆ ಪಾಶ್ಚಿಮಾತ್ಯ ದೇಶಗಳು ತಿಳಿಸಿದೆ. ಆದರೆ, ಹೌತಿಗಳು ಮಾತ್ರ ಇಸ್ರೇಲ್​ ಯುದ್ಧ ನಿಲ್ಲಿಸುವವರೆಗೆ ಈ ದಾಳಿಯು ಮುಂದುವರೆಯಲಿದೆ ಎಂದಿದೆ. (ಐಎಎನ್​ಎಸ್​)

ಇದನ್ನೂ ಓದಿ: ಕೆಂಪು ಸಮುದ್ರದಲ್ಲಿನ ದಾಳಿ ನಿಲ್ಲಿಸುವಂತೆ ಹೌತಿಗಳಿಗೆ ಪಾಶ್ಚಿಮಾತ್ಯ ರಾಷ್ಟ್ರಗಳ ಎಚ್ಚರಿಕೆ

ABOUT THE AUTHOR

...view details