ಕರ್ನಾಟಕ

karnataka

ETV Bharat / international

PM Modi France Tour: ಪ್ರಧಾನಿ ನರೇಂದ್ರ ಮೋದಿಗೆ ಫ್ರಾನ್ಸ್​ನ ಅತ್ಯುನ್ನತ ಗೌರವ - ಕೈಲಿಯನ್ ಎಂಬಪ್ಪೆ

ಎರಡು ದಿನಗಳ ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫ್ರಾನ್ಸ್​ನ ಅತ್ಯುನ್ನತ ಪುರಸ್ಕಾರ ಪ್ರದಾನಿಸಿ ಗೌರವಿಸಲಾಯಿತು.

Prime Minister Modi with France president
Prime Minister Modi with France president

By

Published : Jul 14, 2023, 8:16 AM IST

Updated : Jul 14, 2023, 9:48 AM IST

ಪ್ಯಾರಿಸ್ (ಫ್ರಾನ್ಸ್): ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫ್ರಾನ್ಸ್​ನ ಅತ್ಯುನ್ನತ ಗೌರವವಾದ 'ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್' ಪುರಸ್ಕಾರವನ್ನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಪ್ರದಾನಿಸಿ ಗೌರವಿಸಿದರು. ಈ ಮೂಲಕ ಫ್ರಾನ್ಸ್​ನ ಅತ್ಯುನ್ನತ ಗೌರವ ಸ್ವೀಕರಿಸಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾದರು. ಎರಡು ದಿನಗಳ ಪ್ಯಾರಿಸ್​ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡರು. ಬಳಿಕ ಎಲಿಸೀ ಅರಮನೆಯಲ್ಲಿ ಆಯೋಜಿಸಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರಿಗೆ ಫ್ರಾನ್ಸ್ ಅತ್ಯುನ್ನತ ಪುರಸ್ಕಾರ ನೀಡಲಾಯಿತು.

ಏನಿದು 'ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್'?: 'ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್' ಫ್ರಾನ್ಸ್​ನ ಅತ್ಯುತ್ತಮ ಗೌರ ಪ್ರಶಸ್ತಿಯಾಗಿದೆ. ಫ್ರಾನ್ಸ್ ಸರ್ಕಾರ​ ಭಾರತದ ಪ್ರಧಾನಿಗೆ ನೀಡುವ ಮೂಲಕ ಗೌರವ ಸಮರ್ಪಣೆ ಮಾಡಿದೆ. ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ಅರಿಂದಮ್ ಬಾಗ್ಚಿ ಅವರು ಎಲಿಸೀ ಅರಮನೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ಫೋಟೋಗಳನ್ನು ಟ್ವೀಟ್​ ಮಾಡುವ ಮೂಲಕ ತಿಳಿಸಿದ್ದಾರೆ.

'ಫ್ರಾನ್ಸ್‌ನ ಅತ್ಯುನ್ನತ ಪುರಸ್ಕಾರದ ಮೂಲಕ ಗೌರವ ನೀಡಿದ್ದಕ್ಕಾಗಿ ಭಾರತದ ಜನರ ಪರವಾಗಿ ಅಧ್ಯಕ್ಷ ಮ್ಯಾಕ್ರನ್ ಅವರಿಗೆ ಮೋದಿ ಧನ್ಯವಾದ ಸಲ್ಲಿಸಿದರು ಎಂದು ಎಂಇಎ ವಕ್ತಾರರು ತಿಳಿಸಿದ್ದಾರೆ. ಇದಕ್ಕೂ ಮುನ್ನ ಫ್ರೆಂಚ್ ಅಧ್ಯಕ್ಷ ಮತ್ತು ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರನ್ ಅವರು ಎಲಿಸೀ ಅರಮನೆಯಲ್ಲಿ ಮೋದಿ ಅವರಿಗೆ ಖಾಸಗಿ ಔತಣಕೂಟವನ್ನು ಏರ್ಪಡಿಸಿದ್ದರು.

ಬಳಿಕ ಗುರುವಾರ ಸಂಜೆ, ಮೋದಿ ಇಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಫ್ರಾನ್ಸ್‌ನಲ್ಲಿ ಯುಪಿಐ ಬಳಕೆ ಕುರಿತ ಒಪ್ಪಂದವನ್ನು ಘೋಷಿಸಿದರು. ಅಲ್ಲದೆ ಲಾ ಸೀನ್ ಮ್ಯೂಸಿಕೇಲ್‌ನಲ್ಲಿ ಉತ್ಸಾಹಭರಿತ ಪ್ರೇಕ್ಷಕರನ್ನುದ್ದೇಶಿಸಿ ಸುಮಾರು ಒಂದು ಗಂಟೆಯ ಸುದೀರ್ಘ ಭಾಷಣ ಮಾಡಿ, ಭಾರತದ ವೇಗದ ಅಭಿವೃದ್ಧಿ ಬಗ್ಗೆ ವಿವರಿಸಿದರು ಎಂದು ವಿದೇಶಾಂಗ ವಕ್ತಾರರು ಮಾಹಿತಿ ನೀಡಿದ್ದಾರೆ.

ಕೈಲಿಯನ್ ಎಂಬಪ್ಪೆ ಫ್ರಾನ್ಸ್‌ಗಿಂತ ಭಾರತದಲ್ಲಿ ಹೆಚ್ಚು ಪ್ರಖ್ಯಾತ-ಮೋದಿ:ಪ್ರಧಾನಿ ಮೋದಿ ಅವರು ಫುಟ್ಬಾಲ್ ಆಟಗಾರ ಕೈಲಿಯನ್ ಎಂಬಪ್ಪೆ ಕುರಿತು ಪ್ರಸ್ತಾಪ ಮಾಡಿದರು. "ಫ್ರೆಂಚ್ ಫುಟ್ಬಾಲ್ ಆಟಗಾರ ಕೈಲಿಯನ್ ಎಂಬಪ್ಪೆ ಭಾರತದ ಯುವಜನರಲ್ಲಿ ಸೂಪರ್‌ಹಿಟ್ ಆಗಿದ್ದಾರೆ. ಬಹುಶಃ ಫ್ರಾನ್ಸ್‌ಗಿಂತ ಭಾರತದಲ್ಲಿ ಹೆಚ್ಚಿನ ಜನರಿಗೆ ಪರಿಚಿತರಾಗಿದ್ದಾರೆ"ಎಂದು ತಮ್ಮ ಭಾಷಣದ ನಡುವೆ ಹೇಳಿದ್ದಾರೆ. ಕೈಲಿಯನ್ ಎಂಬಪ್ಪೆ ಫ್ರಾನ್ಸ್ ರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕ. ಫ್ರೆಂಚ್ ಲೀಗ್ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಅತ್ಯಂತ ಜನಪ್ರಿಯ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ವಿಶ್ವಕಪ್ 2022 ರ ಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಅವರು ಹ್ಯಾಟ್ರಿಕ್​ ಗೋಲ್​ ಗಳಿಸುವ ಮೂಲಕ ಮತ್ತಷ್ಟು ಜನಪ್ರಿಯರಾಗಿದ್ದರು.

ಗುರುವಾರ ಪ್ಯಾರಿಸ್​ ತಲುಪಿರುವ ಮೋದಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದ್ದು, ಶುಕ್ರವಾರದಂದು ಫ್ರೆಂಚ್ ರಾಷ್ಟ್ರೀಯ ದಿನಾಚರಣೆಯಲ್ಲಿ ಗೌರವ ಅತಿಥಿಯಾಗಿ ಮ್ಯಾಕ್ರನ್ ಜೊತೆ ಭಾಗವಹಿಸಲಿದ್ದಾರೆ.

ಇದನ್ನೂ ಓದಿ:Watch.. ಪ್ಯಾರಿಸ್​ಗೆ ಬಂದಿಳಿದ ಪ್ರಧಾನಿ ಮೋದಿ: ವಿಮಾನ ನಿಲ್ದಾಣಕ್ಕೆ ಬಂದು ಸ್ವಾಗತಿಸಿದ ಫ್ರಾನ್ಸ್ ಪಿಎಂ..

Last Updated : Jul 14, 2023, 9:48 AM IST

ABOUT THE AUTHOR

...view details