ಕರ್ನಾಟಕ

karnataka

ETV Bharat / international

ಪಶ್ಚಿಮ ಆಫ್ರಿಕಾದ ಸೆನೆಗಲ್​ನಲ್ಲಿ ಭೀಕರ ರಸ್ತೆ ಅಪಘಾತ; 40 ಮಂದಿ ಸಾವು - ಸೆಂಟ್ರಲ್​ ಸೆನೆಗಲ್​ನಲ್ಲಿ ಎರಡು ಬಸ್​ಗಳ ನಡುವೆ

ಬಸ್​ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಇತ್ತೀಚಿನ ದಿನಗಳಲ್ಲಿ ಸೆನೆಗಲ್‌ನಲ್ಲಿ ಸಂಭವಿಸಿದ ಅತಿದೊಡ್ಡ ರಸ್ತೆ ದುರಂತ ಇದೆಂದು ಹೇಳಲಾಗಿದೆ.

ಪಶ್ಚಿಮ ಆಫ್ರಿಕಾದ ಸೆನೆಗಲ್​ನಲ್ಲಿ ಭಾರೀ ಅಪಘಾತ; 40 ಮಂದಿ ಸಾವು
heavy-accident-in-senegal-west-africa-40-people-died

By

Published : Jan 9, 2023, 11:37 AM IST

ಸೆನೆಗಲ್​ (ಪಶ್ಚಿಮ ಆಫ್ರಿಕಾ): ಇಲ್ಲಿನ ಸೆಂಟ್ರಲ್​ ಸೆನೆಗಲ್​ನಲ್ಲಿ ಎರಡು ಬಸ್​ಗಳ ನಡುವೆ ಸಂಭವಿಸಿದ ರಸ್ತೆ​​ ಅಪಘಾತದಲ್ಲಿ 40 ಮಂದಿ ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭಾನುವಾರ ಈ ಘಟನೆ ನಡೆದಿದೆ. ಅಪಘಾತ ಕುರಿತು ದೇಶದ ಅಧ್ಯಕ್ಷ ಮಾಕೆ ಸಾಲ್​​ ಟ್ವೀಟ್​ ಮಾಡಿದ್ದು, ಕ್ಯಾಫೆರಿನ್​ ಪ್ರದೇಶದ ಗ್ನಿವಿ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ 3.30ಕ್ಕೆ ಅಪಘಾತ ನಡೆದಿದೆ ಎಂದು ತಿಳಿಸಿದ್ದಾರೆ.

ಮೂರು ದಿನ ಶೋಕಾಚರಣೆ: ಈ ಅನಾಹುತ ಘಟಿಸಿದ ಹಿನ್ನೆಲೆಯಲ್ಲಿ ಮೂರು ದಿನ ಶೋಕಾಚಾರಣೆಯನ್ನು ಅವರು ಘೋಷಿಸಿದ್ದು, ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಹಾರಿಸಲು ಸೂಚನೆ ನೀಡಿದ್ದಾರೆ. ಇದೇ ವೇಳೆ, ಅವರು ರಸ್ತೆ ಸುರಕ್ಷತಾ ಕ್ರಮಗಳ ಕುರಿತು ಚರ್ಚಿಸಲು ಅಂತರ ಸಚಿವಾಲಯ ಮಂಡಳಿ ಸಭೆ ನಡೆಸುವುದಾಗಿ ಹೇಳಿದ್ದಾರೆ. ರಾಷ್ಟ್ರೀಯ ರಸ್ತೆ ಸಂಖ್ಯೆ 1ರಲ್ಲಿ ಬಸ್ ಟೈರ್ ಪಂಕ್ಚರ್ ಆಗಿದ್ದು ಎದುರಿನಿಂದ ಬಂದ ಮತ್ತೊಂದು ಬಸ್​​ಗೆ ಮುಖಾಮುಖಿ ಡಿಕ್ಕಿಯಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಚೀಕ್ ಡಿಯೆಂಗ್ ತಿಳಿಸಿದ್ದಾರೆ.

ಹದಗೆಟ್ಟ ರಸ್ತೆ, ಚಾಲಕರ ಬೇಜವಾಬ್ದಾರಿ ಕಾರಣ: ಸಾಮಾಜಿಕ ಜಾಲತಾಣದಲ್ಲಿ ಈ ಬಸ್​ ಅಪಘಾತದ ದೃಶ್ಯಗಳು ಕಂಡುಬಂದಿವೆ. ಕೆಟ್ಟ ರಸ್ತೆಗಳು, ವಾಹನ ಚಾಲಕರು ನಿಯಮಗಳನ್ನು ಪಾಲಿಸದೇ ಇರುವುದರಿಂದ ಪಶ್ಚಿಮ ಆಫ್ರಿಕಾದಲ್ಲಿ ಈ ರೀತಿಯ ಅಪಘಾತಗಳು ಸಾಮಾನ್ಯವಾಗಿವೆ ಎಂದು ಸ್ಥಳೀಯರು ಹೇಳಿದ್ದಾರೆ. 2017ರಲ್ಲಿ ನಡೆದ ಎರಡು ಬಸ್​ಗಳ ನಡುವಿನ ಅಪಘಾತದಲ್ಲಿ 25 ಮಂದಿ ಸಾವನ್ನಪ್ಪಿದ್ದರು. ಮುಸ್ಲಿಂ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಬಸ್​ ಅಪಘಾತವಾಗಿತ್ತು.

ಇದನ್ನೂ ಓದಿ: ರಷ್ಯಾದಿಂದ ಪ್ರತೀಕಾರದ ಕ್ಷಿಪಣಿ ದಾಳಿ: 600ಕ್ಕೂ ಹೆಚ್ಚು ಉಕ್ರೇನ್ ಸೈನಿಕರ ಸಾವು

ABOUT THE AUTHOR

...view details