ಕರ್ನಾಟಕ

karnataka

ETV Bharat / international

ಯುರೋಪ್‌ನಲ್ಲಿ ನೆತ್ತಿ ಸುಡ್ತಿದೆ ಬಿಸಿಲು; ಕೆಲವೆಡೆ 40 ಡಿಗ್ರಿ ಸೆಲ್ಸಿಯಸ್ ದಾಖಲು​​, ಬಸವಳಿದ ಜನ - ಸ್ವೆಲ್ಟರ್ಡ್ ಪೋಲೆಂಡ್‌ನ ಅಧಿಕಾರಿಗಳು

ಯುರೋಪಿನಾದ್ಯಂತ ಬಿಸಿಲು ನೆತ್ತಿ ಸುಡುತ್ತಿದೆ. ತಾಪಮಾನ ದಿನ ದಿನಕ್ಕೆ ಏರಿಕೆಯಾಗುತ್ತಿದೆ.

people of Europe are suffering from the heat of the sun
ಬಿಸಿಲಿನ ಹೊಡೆತಕ್ಕೆ ಬಸವಳಿದ ಯುರೋಪ ಜನ

By

Published : Jul 16, 2023, 9:07 AM IST

ರೋಮ್ (ಇಟಲಿ) : ಯುರೋಪಿನಾದ್ಯಂತ ಏರುತ್ತಿರುವ ಬಿಸಿಲಿನ ತಾಪಕ್ಕೆ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಶನಿವಾರ 40 ಡಿಗ್ರಿ ಸೆಲ್ಸಿಯಸ್ (104 ಡಿಗ್ರಿ ಫ್ಯಾರನ್‌ಹೀಟ್) ತಾಪಮಾನ ದಾಖಲಾಗಿದ್ದು, ಮುಂದಿನ ವಾರ ಇನ್ನೂ ಏರಿಕೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅಥೆನ್ಸ್‌ನ ಪ್ರಾಚೀನ ಕಾಲದ ಆಕ್ರೊಪೊಲಿಸ್​​ ಸ್ಮಾರಕವನ್ನು ಎರಡನೇ ದಿನವೂ ಮುಚ್ಚಲಾಗಿದೆ.

ಮೆಡಿಟರೇನಿಯನ್ ಪ್ರದೇಶದ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಬಿಸಿಲ ಝಳ ತೀವ್ರವಾಗಿದೆ. ಮಕ್ಕಳು, ವಯಸ್ಕರು ಹೆಚ್ಚು ಆರೋಗ್ಯ ಸಂಬಂಧಿ ಅಪಾಯ ಎದುರಿಸುತ್ತಿದ್ದಾರೆ. ಶಾಖದ ಅಲೆಯಿಂದ ಪಾರಾಗಲು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.

ಇಟಲಿಯ ಹದಿನೈದು ನಗರಗಳಲ್ಲಿ ಸೂರ್ಯನ ಪ್ರಕೋಪ ಹೆಚ್ಚುತ್ತಿದೆ. ಶನಿವಾರ ಇಟಾಲಿಯನ್​ ದ್ವೀಪದಲ್ಲಿ ತಾಪಮಾನ 30 ಸೆಲ್ಸಿಯಸ್ ಡಿಗ್ರಿವರೆಗೆ ಮಾತ್ರ ಇತ್ತು. ಆದರೆ ಇತರೆ ನಗರಗಳಾದ ಸಾರ್ಡಿನಿಯಾ, ಸಿಸಿಲಿ ಮತ್ತು ಪುಗ್ಲಿಯಾದಲ್ಲಿ 38 ಸೆಲ್ಸಿಯಸ್ (100.4 ಎಫ್) ಮತ್ತು 40 ಸೆಲ್ಸಿಯಸ್‌ಗೆ (104 ಎಫ್‌) ತಲುಪಿತು. ಗ್ರೀಸ್‌ನ ರಾಜಧಾನಿ ರೋಮ್‌ನಲ್ಲಿ​ ತಾಪಮಾನವು 41 ಡಿಗ್ರಿ ಸೆಲ್ಸಿಯಸ್​ (105.8 ಎಫ್) ತಲುಪಬಹುದು ಎಂದು ಮುನ್ಸೂಚನೆ ಕೊಡಲಾಗಿದೆ.

ಬಿಸಿಲ ತಾಪಮಾನ ಹೆಚ್ಚಳವನ್ನರಿತ ಅಧಿಕಾರಿಗಳು ಶುಕ್ರವಾರದಂತೆ ಶನಿವಾರವೂ ಪ್ರಸಿದ್ಧ ಆಕ್ರೊಪೊಲಿಸ್ ಸ್ಮಾರಕವನ್ನು ಮಧ್ಯಾಹ್ನದಿಂದ ಸಂಜೆ 5.30 ರವರೆಗೆ ಮುಚ್ಚಲು ನಿರ್ಧರಿಸಿದರು. ಸ್ಪೇನ್‌ನ ಕ್ಯಾನರಿ ದ್ವೀಪಗಳಲ್ಲಿ ತಾಪಮಾನದ ಬಿಸಿ ಅಷ್ಟೇನೂ ತಟ್ಟಿಲ್ಲ. ಆದರೆ ಲಾ ಪಾಲ್ಮಾ ದ್ವೀಪದಲ್ಲಿ ಕಾಳ್ಗಿಚ್ಚಿನಿಂದ ಸುಮಾರು 500 ಜನರನ್ನು ಸಂರಕ್ಷಣೆಗಾಗಿ ಸ್ಥಳಾಂತರ ಮಾಡಲಾಗಿದೆ. ಕಾಲಕಾಲಕ್ಕೆ ಬದಲಾವಣೆ ಆಗುತ್ತಿರುವ ಬಿಸಿ ತಾಪಮಾನದಿಂದ ಸ್ಥಳಾಂತರ ಮಾಡುವ ಜನರ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಟರ್ಕಿಯ ದಕ್ಷಿಣ ಮತ್ತು ನೈಋತ್ಯದ ಕರಾವಳಿ ನಗರಗಳು ಗರಿಷ್ಠ 30 ಸೆಲ್ಸಿಯಸ್ (ಸುಮಾರು 97-102 ಎಫ್) ಮತ್ತು ಕಡಿಮೆ 40 ಸೆಲ್ಸಿಯಸ್‌ (104-109 ಎಫ್‌) ತಲುಪಿವೆ. ಅಂಟಲ್ಯದಲ್ಲಿ ಗರಿಷ್ಠ 44 ಸೆಲ್ಸಿಯಸ್ (111.2 F) ತಾಪಮಾನ ದಾಖಲಾಗಿದೆ. ದೇಶದ ವಾಯುವ್ಯ ನಗರಗಳಾದ ಎಡಿರ್ನೆ, ಕಿರ್ಕ್ಲಾರೆಲಿ ಮತ್ತು ಟೆಕಿರ್‌ಡಾಗ್‌ನಲ್ಲಿ ಬಿಸಿ ತಾಪಮಾನದ ಪರಿಣಾಮ ಕಳೆದೆರಡು ದಿನಗಳಲ್ಲಿ 48 ಜನರಲ್ಲಿ ಆರೋಗ್ಯ ಏರುಪೇರಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ಟರ್ಕಿಯ ಅತಿದೊಡ್ಡ ನಗರ ಇಸ್ತಾನ್‌ಬುಲ್‌ನಲ್ಲಿ ಬಿಸಿಲ ತಾಪಮಾನ ಏರಿಕೆಯಾಗುತ್ತಿದ್ದು ಓಮರ್ಲಿ ಅಣೆಕಟ್ಟಿನ ನೀರಿನ ಸಂಗ್ರಹ ಮಟ್ಟವೂ ಕುಸಿಯುತ್ತಿದೆ. ಪೋಲೆಂಡ್‌ನ ಅಧಿಕಾರಿಗಳು ವಿಶೇಷವಾಗಿ ವಯಸ್ಸಾದ ವಯಸ್ಕರಿಗೆ ಮನೆಯೊಳಗೆ ಅಥವಾ ನೆರಳಿನಲ್ಲಿ ಇರುವಂತೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂಓದಿ:Tomato price: 1 ಕೆಜಿ ಟೊಮೆಟೊಗೆ ₹250: ಕೇಂದ್ರ ಸರ್ಕಾರದಿಂದ ಈ ನಗರಗಳಲ್ಲಿ ₹90ಗೆ ಮಾರಾಟ

ABOUT THE AUTHOR

...view details