ನ್ಯೂಯಾರ್ಕ್:ನ್ಯೂಯಾರ್ಕ್‌ನಲ್ಲಿ ಭಾರತ ಮೂಲದ ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ನಡೆದ ದಾಳಿಯನ್ನು ಟೀಕಿಸಿದ್ದಕ್ಕಾಗಿ ಹ್ಯಾರಿ ಪಾಟರ್ ಸರಣಿಯ ಪ್ರಸಿದ್ಧ ಲೇಖಕಿ ಜೆ ಕೆ ರೌಲಿಂಗ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಟ್ವೀಟ್ನಲ್ಲಿ ಬಂದ ಬೆದರಿಕೆ ಸಂದೇಶದ ಸ್ಕ್ರೀನ್ಶಾಟ್ ಅನ್ನು ಅವರು ಹಂಚಿಕೊಂಡಿದ್ದಾರೆ.
ರೌಲಿಂಗ್ ಅವರು, ಲೇಖಕ ರಶ್ದಿ ಅವರನ್ನು ಚಾಕುವಿನಿಂದ ಇರಿದ ಆರೋಪಿಯ ಚಿತ್ರವನ್ನು ಟ್ವೀಟ್ ಮಾಡಿ ಭಯೋತ್ಪಾದನೆ, ರಕ್ತಪಾತವನ್ನು ಬೆಳೆಸಲಾಗದು. ರಶ್ದಿ ಮೇಲಾದ ದಾಳಿ ನೋವಿನ ಸಂಗತಿ ಎಂದು ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮೀರ್ ಅಸಿಫ್ ಅಜಿಜ್ ಹೆಸರಿನ ಟ್ವಿಟರ್ ಬಳಕೆದಾರ, ಚಿಂತಿಸಬೇಡಿ ಮುಂದಿನ ಸರದಿ ನಿಮ್ಮದೇ ಎಂದಿದ್ದಾನೆ.