ಜೆರುಸಲೇಮ್:ಹಮಾಸ್ ಮತ್ತು ಇಸ್ರೇಲ್ ನಡುವಿನ ಅಪಾಯಕಾರಿ ಯುದ್ಧ ಮುಂದುವರೆದಿದೆ. ಈ ನಡುವೆಯೇ ಹಮಾಸ್ ಹೋರಾಟಗಾರರು, ಅಣಕು ದಾಳಿಯ ಅಭ್ಯಾಸ ನಡೆಸಿದ್ದಾರೆ. ಈ ತಾಲೀಮಿನ ವೇಳೆ, ಇಸ್ರೇಲ್ ಮೇಲೆ ಕ್ರೂರ ದಾಳಿ ನಡೆಸುವ ಮುಸ್ಸೂಚನೆ ಕೊಟ್ಟಿದ್ದಾರೆ.
ಶರವೇಗದಲ್ಲಿ ನುಗ್ಗಿ ಹೊಡೆಯುವ ದೃಶ್ಯಗಳು:ಸೆಪ್ಟೆಂಬರ್ 12 ರಂದು ಹಮಾಸ್ ಸಾಮಾಜಿಕ ಜಾಲತಾಣದಲ್ಲಿ ಎರಡು ನಿಮಿಷಗಳ ಪ್ರಚಾರದ ವಿಡಿಯೋ ಪೋಸ್ಟ್ ಮಾಡದೆ. ಹೋರಾಟಗಾರರು ಸ್ಫೋಟಕಗಳನ್ನು ಬಳಸಿ ಗಡಿ ಗೇಟ್‌ನ ಪ್ರತಿಕೃತಿಯ ಮೂಲಕ ಸ್ಫೋಟಿಸಿದರು. ಎದುರಾಳಿ ಪ್ರದೇಶಗಳಲ್ಲಿ ಶರವೇಗದಲ್ಲಿ ನುಗ್ಗಿ ಹೊಡೆಯುವ ದೃಶ್ಯಗಳು ಈ ವಿಡಿಯೋದಲ್ಲಿದೆ. ಜೊತೆಗೆ ಇಸ್ರೇಲ್‌ನ ಜನವಸತಿ ಪ್ರದೇಶಗಳ ಮೇಲೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಹಾರಿಸುವ ಕುರಿತಂತೆ ತಾಲೀಮು ನಡೆಸಿದರು.
ಇಸ್ಲಾಮಿಕ್ ಉಗ್ರಗಾಮಿ ಗುಂಪಿನ ಲೈವ್ ಫೈರ್ ವ್ಯಾಯಾಮ ಎಂದು ಕರೆಯಲ್ಪಡುವ ಆಪರೇಷನ್ ವೇಳೆಯಲ್ಲಿ, ದೇಹದ ರಕ್ಷಾಕವಚ ಧರಿಸಿದ್ದ ಉಗ್ರಗಾಮಿಗಳು, ತ್ವರಿತವಾಗಿ ಕಾರ್ಯಾಚರಣೆಗಳನ್ನು ನಡೆಸುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಇದರಲ್ಲಿ ಗೋಡೆಯ ಕಾಂಕ್ರೀಟ್ ಟವರ್‌ಗಳು, ಸಂವಹನ ಆಂಟೆನಾ ನಾಶವೂ ಸೇರಿದೆ. ಹಮಾಸ್ಗೆ ಇಸ್ರೇಲ್ ತೀವ್ರ ಪ್ರತಿದಾಳಿ ನಡೆಸುತ್ತಿದೆ. ಇದರ ನಡುವೆಯೇ ಹಮಾಸ್ ತನ್ನ ಸಾಮರ್ಥ್ಯ ತೋರಿಸುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದೆ. ಈ ಗುಂಪು ಮಾರಣಾಂತಿಕ ದಾಳಿಗೆ ತನ್ನ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.
ಐಡಿಎಫ್ ಇಸ್ರೇಲಿ ಸೇನೆಯಿಂದ ಲೈವ್ ದೃಶ್ಯಗಳನ್ನು ಬಿಡುಗಡೆ: 250 ಒತ್ತೆಯಾಳುಗಳ ರಕ್ಷಣೆ: ಉಭಯ ದೇಶಗಳ ಸೇನೆಗಳು ಬಾಂಬ್‌ಗಳ ಮಳೆಗರೆಯುತ್ತಿವೆ. ಅದೇ ಸಮಯದಲ್ಲಿ ಇಸ್ರೇಲಿ ಸೇನೆಯು ಅಕ್ಟೋಬರ್ 7 ರಂದು ಹಮಾಸ್ ಭಯೋತ್ಪಾದಕರ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಯ ದೃಶ್ಯಗಳನ್ನು ಬಿಡುಗಡೆ ಮಾಡಿದೆ. ಈ ದೃಶ್ಯಾವಳಿಯಲ್ಲಿ, ಇಸ್ರೇಲಿ ಸೇನೆಯ ಸೈನಿಕರು ಒಂದು ಸ್ಥಳದಲ್ಲಿ ಒತ್ತೆಯಾಳುಗಳನ್ನು ಹೇಗೆ ರಕ್ಷಿಸುತ್ತಿದ್ದಾರೆ ಎಂಬುದನ್ನು ದೃಶ್ಯಾವಳಿಗಳಲ್ಲಿ ನೋಡಬಹುದಾಗಿದೆ.