ಕರ್ನಾಟಕ

karnataka

ETV Bharat / international

ಲಂಡನ್​ನಿಂದಲೇ ಹಮಾಸ್​ ಮುನ್ನಡೆಸುತ್ತಿದ್ದಾನೆ 'ಮಾಸ್ಟರ್​ಮೈಂಡ್​' ಸವಾಲ್ಹಾ! - ಪ್ಯಾಲೆಸ್ಟೈನ್ ಆಡಳಿತದ ಪ್ರದೇಶವಾದ ಗಾಜಾದಿಂದ

ಹಮಾಸ್​ನ ಪ್ರಮುಖ ನಾಯಕ ಸವಾಲ್ಹಾ ಕಳೆದ ಹಲವಾರು ವರ್ಷಗಳಿಂದ ಲಂಡನ್​ನಲ್ಲಿ ಇದ್ದುಕೊಂಡು ಉಗ್ರಗಾಮಿ ಸಂಘಟನೆಯನ್ನು ಮುನ್ನಡೆಸುತ್ತಿದ್ದಾನೆ ಎಂದು ವರದಿಯಾಗಿದೆ.

Hamas leader called a 'mastermind' lives in London, is UK national
Hamas leader called a 'mastermind' lives in London, is UK national

By ETV Bharat Karnataka Team

Published : Oct 22, 2023, 7:50 PM IST

ಲಂಡನ್:ಪ್ಯಾಲೆಸ್ಟೈನ್ ಉಗ್ರಗಾಮಿ ಸಂಘಟನೆಯ ಪ್ರಮುಖ ನಾಯಕ ಮುಹಮ್ಮದ್ ಖಾಸಿಮ್ ಸವಾಲ್ಹಾ ಲಂಡನ್​ನಲ್ಲಿ ನೆಲೆಸಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳೀಯ ಬರ್ನೆಟ್​ ಕೌನ್ಸಿಲ್​ನಿಂದ ಖರೀದಿಸಲಾದ ಫ್ಲ್ಯಾಟ್​ನಲ್ಲಿ ಆತ ನೆಲೆಸಿದ್ದಾನೆ ಎಂದು ದಿ ಸಂಡೇ ಟೈಮ್ಸ್‌ನಲ್ಲಿ ಪ್ರಕಟವಾದ ಮುಖಪುಟದ ಅಂಕಣದಲ್ಲಿ ಬಹಿರಂಗಪಡಿಸಲಾಗಿದೆ.

62 ವರ್ಷದ ಸವಾಲ್ಹಾ 1990ರ ದಶಕದಲ್ಲಿ ಪ್ಯಾಲೆಸ್ಟೈನ್ ಆಡಳಿತದ ಪ್ರದೇಶವಾದ ಗಾಜಾದಿಂದ ಬ್ರಿಟನ್​ಗೆ ಪಲಾಯನ ಮಾಡಿದ್ದ. ನಂತರ ಆತ ಬ್ರಿಟಿಷ್ ಪೌರತ್ವವನ್ನು ಪಡೆದಿದ್ದಾನೆ. ಬಹುಶಃ 2000 ರ ದಶಕದ ಆರಂಭದಲ್ಲಿ ಆತನಿಗೆ ಬ್ರಿಟಿಷ್ ಪಾಸ್​ಪೋರ್ಟ್ ನೀಡಲಾಗಿದೆ. ಈತನನ್ನು ಹಮಾಸ್​ನ ಮಾಸ್ಟರ್​ಮೈಂಡ್​ ಎಂದೂ ಕರೆಯಲಾಗುತ್ತದೆ.

ಇಸ್ರೇಲ್​ನಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಲು ಅಕ್ರಮವಾಗಿ ಹಣಕಾಸು ಒದಗಿಸುತ್ತಿದ್ದಾನೆ ಎಂದು 2004 ರಲ್ಲಿ ಯುನೈಟೆಡ್ ಸ್ಟೇಟ್ಸ್ ಜಸ್ಟೀಸ್ ಡಿಪಾರ್ಟ್​ಮೆಂಟ್​ ಈತನ ವಿರುದ್ಧ ಪ್ರಕರಣ ದಾಖಲಿಸಿತ್ತು. ಲಂಡನ್​ಗೆ ಬಂದ ನಂತರವೂ ಸವಾಲ್ಹಾ ಹಮಾಸ್​ಗಾಗಿ ಕೆಲಸ ಮಾಡುವುದನ್ನು ಮುಂದುವರಿಸಿದ್ದಾನೆ ಎಂದು ಆರೋಪಪಟ್ಟಿಯಲ್ಲಿ ಆರೋಪಿಸಲಾಗಿದೆ.

ಹಮಾಸ್‌ನ ರಾಜಕೀಯ ಮತ್ತು ಮಿಲಿಟರಿ ಕಾರ್ಯತಂತ್ರದ ಬಹುಭಾಗವನ್ನು ಈತನೇ ಮಾಸ್ಟರ್ ಮೈಂಡ್ ಮಾಡಿದ್ದ ಎಂದು 2006ರಲ್ಲಿ ಬಿಬಿಸಿಯಲ್ಲಿ ಬಿತ್ತರಗೊಂಡ ಕಾರ್ಯಕ್ರಮವೊಂದರಲ್ಲಿ ಹೇಳಲಾಗಿದೆ. ಬ್ರಿಟನ್​ನ ಆಂತರಿಕ ಗುಪ್ತಚರ ಸಂಸ್ಥೆಯಾದ ಎಂಐ 5 ಗೆ ಸವಾಲ್ಹಾ ಬಗ್ಗೆ ತಿಳಿದಿದ್ದರೂ ಅವರು ಸವಾಲ್ಹಾಗೆ ಯುಕೆಯಲ್ಲಿ ಮುಕ್ತವಾಗಿ ಕಾರ್ಯನಿರ್ವಹಿಸಲು ಬಿಟ್ಟಿದ್ದಾರೆ ಎಂದು ಅದು ಆರೋಪಿಸಿದೆ.

2009 ರಲ್ಲಿ, ಸವಾಲ್ಹಾ ಝಿಯೋನಿಸ್ಟ್ ಯಹೂದಿಗಳನ್ನು ಸೋಲಿಸಿದ್ದಕ್ಕಾಗಿ ಅಲ್ಲಾಹನನ್ನು ಶ್ಲಾಘಿಸುವ ಘೋಷಣೆಗೆ ಸಹಿ ಹಾಕಿದ್ದ. ಇಸ್ರೇಲಿ ಅಧಿಕಾರಿಗಳು ಈತನನ್ನು ಹಮಾಸ್​ಗೆ ಸೇರಿದವನು ಎಂದು ಗುರುತಿಸಿದ್ದು, ಇಸ್ರೇಲ್​ಗೆ ಬಂದರೆ ಬಂಧಿಸಬಹುದು. ಆದರೆ ಆತ ಇಸ್ರೇಲ್​ಗೆ ಬರುವ ಸಾಧ್ಯತೆಯೇ ಇಲ್ಲ. ಸವಾಲ್ಹಾ 2013 ಮತ್ತು 2017ರ ನಡುವೆ ಹಮಾಸ್ ಪಾಲಿಟ್ ಬ್ಯೂರೋ ಸದಸ್ಯನಾಗಿದ್ದ ಎಂದು ಹೇಳಲಾಗಿದೆ.

ಸವಾಲ್ಹಾ 2017ರಲ್ಲಿ ಹಮಾಸ್​ನ ರಷ್ಯಾ ನಿಯೋಗದೊಂದಿಗೆ ಕೆಲಸ ಮಾಡಲು ಆರಂಭಿಸಿದಾಗ ಆತ ಹಮಾಸ್​ನೊಂದಿಗೆ ತನ್ನ ಸಂಬಂಧ ಮುಂದುವರಿಸಿದ್ದ ಎಂಬುದು ಗೊತ್ತಾಗಿತ್ತು ಎಂದು ಸಂಡೇ ಟೈಮ್ಸ್​ ವರದಿ ಹೇಳಿದೆ. ರಷ್ಯಾದ ಮುಸ್ಲಿಂ ಸಂಘಟನೆಯಾದ ಕೌನ್ಸಿಲ್ ಆಫ್ ಮುಫ್ತಿಸ್ ಈತನನ್ನು ಹಮಾಸ್​ನ ವಿದೇಶಾಂಗ ವಿಭಾಗದ ಮುಖ್ಯಸ್ಥನೆಂದು ತನ್ನ ವೆಬ್​ಸೈಟ್​ನಲ್ಲಿ ಬರೆದುಕೊಂಡಿದೆ. ಅಲ್ಲದೆ ರಷ್ಯಾದ ಉಪ ವಿದೇಶಾಂಗ ಮಂತ್ರಿ ಮಿಖೈಲ್ ಬೊಡ್ಗಾನೊವ್ ಅವರೊಂದಿಗೆ ಈತ ಕಾಣಿಸಿಕೊಂಡಿರುವ ಚಿತ್ರವೊಂದನ್ನು ಅದು ವೆಬ್​ಸೈಟ್​ನಲ್ಲಿ ಹಾಕಿಕೊಂಡಿದೆ.

ಇದನ್ನೂ ಓದಿ: ಭಾರತದೊಂದಿಗಿನ ಗಡಿಯಲ್ಲಿ ಮೂಲಸೌಕರ್ಯ ಹೆಚ್ಚಿಸಿಕೊಂಡ ಚೀನಾ: ಪೆಂಟಗನ್ ವರದಿ

ABOUT THE AUTHOR

...view details