ಕರ್ನಾಟಕ

karnataka

ETV Bharat / international

ಇರಾನ್‌ನ ಬಜಾರ್‌ನಲ್ಲಿ ದುಷ್ಕರ್ಮಿಗಳಿಂದ ಗುಂಡಿನ ದಾಳಿ: 5 ಜನ ಸಾವು

ಬಂದೂಕುಧಾರಿಗಳು ಗುಂಡಿನ ಮಳೆಗರೆದಿದ್ದು ಐದು ಜನ ಮೃತಪಟ್ಟಿದ್ದಾರೆ. ಈ ಘಟನೆ ಇರಾನ್‌ನ ಇಝೆಹ್‌ನ ಬಜಾರ್‌ನಲ್ಲಿ ಬುಧವಾರ ನಡೆದಿದೆ.

By

Published : Nov 17, 2022, 8:02 AM IST

ಗುಂಡಿನ ದಾಳಿ
ಗುಂಡಿನ ದಾಳಿ

ದುಬೈ:ನೈಋತ್ಯ ಇರಾನ್‌ನ ಇಝೆಹ್‌ನ ಬಜಾರ್‌ನಲ್ಲಿ ಬುಧವಾರ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಕನಿಷ್ಠ ಐವರು ಮೃತಪಟ್ಟಿದ್ದಾರೆ. ಭದ್ರತಾ ಸಿಬ್ಬಂದಿ ಸೇರಿದಂತೆ 10 ಜನರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ದಾಳಿಗೆ ಕಾರಣವೇನು?: ಕಳೆದ ಎರಡು ತಿಂಗಳುಗಳಿಂದ ಇರಾನ್​ನಲ್ಲಿ ನಡೆಯುತ್ತಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಗೂ ಇದಕ್ಕೂ ಸಂಬಂಧವಿದೆಯೇ ಎಂಬುದು ಸ್ಪಷ್ಟವಾಗಿಲ್ಲ

ಇದನ್ನೂ ಓದಿ:ಇರಾನ್‌ನ ಹಿಜಾಬ್ ವಿರೋಧಿ ಪ್ರತಿಭಟನೆಗೆ ಕೋಯಿಕ್ಕೋಡ್​ನಲ್ಲಿ ಸಾತ್​..

ಹಲವಾರು ಪ್ರತಿಭಟನಾಕಾರರು ಬುಧವಾರ ತಡರಾತ್ರಿ ಇಝೆಹ್​ನ ವಿವಿಧ ಭಾಗಗಳಲ್ಲಿ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಪೊಲೀಸರ ಮೇಲೆ ಕಲ್ಲುಗಳನ್ನೂ ಎಸೆದಿದ್ದಾರೆ. ಪೊಲೀಸರು ಗುಂಪು ಚದುರಿಸಲು ಅಶ್ರುವಾಯು ಪ್ರಯೋಗಿಸಿದ್ದಾರೆ ಎಂದು ತಿಳಿದುಬಂದಿದೆ.

ABOUT THE AUTHOR

...view details