ಕರ್ನಾಟಕ

karnataka

ETV Bharat / international

ದರೋಡೆಕೋರರಿಂದ ಮಾಲೀಕನ ರಕ್ಷಿಸಿದ ಬೆಕ್ಕು.. ಹೇಗೆ ಗೊತ್ತಾ? - ಮಿಸ್ಸಿಸ್ಸಿಪ್ಪಿಯಲ್ಲಿ ಬೆಕ್ಕಿನ ಸಾಹಸ

ಅಮೆರಿಕದ ಮಿಸ್ಸಿಸ್ಸಿಪ್ಪಿಯಲ್ಲಿ ಬೆಕ್ಕೊಂದು ಮನೆಗೆ ನುಗ್ಗಿದ್ದ ದರೋಡೆಕೋರರಿಂದ ತನ್ನ ಮಾಲೀಕನನ್ನು ರಕ್ಷಿಸಿದೆ.

guard-cat
Etv Bharatದರೋಡೆಕೋರರಿಂದ ಮಾಲೀಕನ ರಕ್ಷಿಸಿದ ಬೆಕ್ಕು

By

Published : Aug 3, 2022, 12:32 PM IST

ಬೆಲ್ಡೆನ್ (ಮಿಸ್ಸಿಸ್ಸಿಪ್ಪಿ):ನಾಯಿ, ಬೆಕ್ಕು ಮೃದು ಸ್ವಭಾವದ್ದೇ ಆದರೂ ಮಾಲೀಕರ ತೊಂದರೆ ಉಂಟಾದಾಗ ಅವುಗಳ ವರ್ತನೆಯೇ ಬದಲಾಗುತ್ತದೆ. ಅವು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ನಮ್ಮನ್ನು ರಕ್ಷಣೆ ಮಾಡುತ್ತವೆ. ಅಮೆರಿಕದ ಮಿಸ್ಸಿಸ್ಸಿಪ್ಪಿಯಲ್ಲಿ ಮನೆಯೊಂದರಲ್ಲಿ ನಡೆಯಬಹುದಾದ ದರೋಡೆಯನ್ನು ಬೆಕ್ಕೊಂದು ತಪ್ಪಿಸಿದೆ. ಈ ಬಗ್ಗೆ ಅದರ ಮಾಲೀಕರೇ ಮಾಹಿತಿ ನೀಡಿದ್ದಾರೆ.

ಏನಾಯ್ತು?:ಇಬ್ಬರು ದರೋಡೆಕೋರರು ರಾತ್ರಿ 2 ಗಂಟೆಯ ವೇಳೆ ಮನೆಗೆ ಕನ್ನ ಹಾಕಲು ಯತ್ನಿಸಿದ್ದಾರೆ. ಈ ವೇಳೆ, ಇದನ್ನರಿತ ಬ್ಯಾಂಡಿಟ್​ ಎಂಬ ಹೆಸರಿನ ಬೆಕ್ಕು ಮನೆಯಲ್ಲಿ ಕಿರುಚಲು ಶುರು ಮಾಡಿದೆ. ಅಲ್ಲದೇ ಅಡುಗೆ ಮನೆಯಲ್ಲಿ ನೆಗೆದಾಡಿ, ಬಳಿಕ ಶಯನಗೃಹದಲ್ಲೆಲ್ಲ ಓಡಾಡಿದೆ. ಬಳಿಕ ಅದು ದರೋಡೆಕೋರರ ಮೇಲೆ ದಾಳಿ ಮಾಡಿ ತನ್ನ ಉಗುರಿನಿಂದ ಪರಿಚಿದೆ.

ಬೆಕ್ಕಿನ ಚೀರಾಟದಿಂದ ಎಚ್ಚರಗೊಂಡ ಮಾಲೀಕ ಎವರೆಟ್​, ಬೆಕ್ಕು ಈ ರೀತಿ ಏಕೆ ವರ್ತಿಸುತ್ತಿದೆ ಎಂಬುದನ್ನು ತಿಳಿಯಲು ಎದ್ದು ಬಂದು ಪರಿಶೀಲಿಸಿದ್ದಾರೆ. ದರೋಡೆಕೋರರು ಹಿತ್ತಲ ಬಾಗಿಲನ್ನು ಮುರಿಯುತ್ತಿರುವುದನ್ನು ನೋಡಿದ್ದಾರೆ. ಇದರಲ್ಲಿ ಓರ್ವ ಕೈಯಲ್ಲಿ ಗನ್ ಹಿಡಿದಿದ್ದ. ಇದರಿಂದ ತಕ್ಷಣ ಎಚ್ಚೆತ್ತ ಎವರೆಟ್​ ತನ್ನಲ್ಲಿದ್ದ ಗನ್​ ಅನ್ನು ತಂದು ಬೆದರಿಸಿದ್ದಾನೆ. ದರೋಡೆಕೋರರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಸೂಕ್ಷ್ಮಮತಿಯ ಬೆಕ್ಕು ಆಗಬಹುದಾದ ಅನಾಹುತವನ್ನು ಗುರುತಿಸಿ ತಪ್ಪಿಸಿದ್ದನ್ನು ಮಾಲೀಕರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.

ಓದಿ:ಇದು ವೆಜಿಟೇರಿಯನ್ ಮಾಂಸ.. ಬಣ್ಣ, ರುಚಿ ಎಲ್ಲ ಸೇಮ್..!!

ABOUT THE AUTHOR

...view details