ಕರ್ನಾಟಕ

karnataka

ETV Bharat / international

ಒಂಬತ್ತೇ ನಿಮಿಷದಲ್ಲಿ ಚಿನ್ನದ ನಾಣ್ಯ ಕದ್ದು ಸಿನಿಮೀಯ ರೀತಿ ಪರಾರಿ...! - ಪೋಲಿಸರು ಕಳ್ಳರ ಬೇಟೆಗಾಗಿ ಹುಡುಕಾಟ

ದಕ್ಷಿಣ ಜರ್ಮನಿಯ ವಸ್ತುಸಂಗ್ರಹಾಲಯಕ್ಕೆ ನುಗ್ಗಿ ಒಂಬತ್ತು ನಿಮಿಷದಲ್ಲಿ ಯಾವುದೇ ಕುರುಹುಗಳನ್ನು ನೀಡದೇ ನೂರಾರು ಪುರಾತನ ಚಿನ್ನದ ನಾಣ್ಯಗಳನ್ನು ಕದ್ದು ಪರಾರಿಯಾದ ಘಟನೆ ನಡೆದಿದೆ.

Gone in 9 minutes: How Celtic gold heist unfolded in Germany
ಒಂಬತ್ತೆ ನಿಮಿಷದಲ್ಲಿ ಚಿನ್ನದ ನಾಣ್ಯ ಕದ್ದು ಪರಾರಿ....

By

Published : Nov 24, 2022, 10:06 PM IST

ಬರ್ಲಿನ್​(ಜರ್ಮನಿ): ದಕ್ಷಿಣ ಜರ್ಮನಿಯ ವಸ್ತು ಸಂಗ್ರಾಲಯದಲ್ಲಿ ಕಳ್ಳರು ಒಂಬತ್ತು ನಿಮಿಷದಲ್ಲಿ ನೂರಾರು ಪುರಾತನ ಚಿನ್ನದ ನಾಣ್ಯಗಳನ್ನು ದೋಚಿ ಸಿನಿಮೀಯಾ ರೀತಿಯಲ್ಲಿ ಪರಾರಿಯಾಗಿದ್ದಾರೆ.

ಕಳ್ಳರು ಬರೊಬ್ಬರಿ 483 ಪುರಾತನ ಚಿನ್ನದ ನಾಣ್ಯಗಳನ್ನು ಬಹಳ ವ್ಯವಸ್ಥಿತವಾಗಿ ಲೂಟಿ ಮಾಡಿದ್ದಾರೆ. 1999ರಲ್ಲಿ ಮಂಚಿಂಗ್​ ಪಟ್ಟಣದ ಬಳಿ ಉತ್ಖನನ ಮಾಡುವ ಸಂದರ್ಭದಲ್ಲಿ ಈ ಪುರಾತನ ಕಾಲದ ಚಿನ್ನದ ನಾಣ್ಯಗಳು ದೊರೆತ್ತಿದ್ದವು. ನಾಣ್ಯಗಳನ್ನು ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿತ್ತು.

ಆದರೆ, ಚಿನ್ನದ ನಾಣ್ಯಗಳನ್ನು ಕಳ್ಳರು ಕೇವಲ 9ನಿಮಿಷಲ್ಲಿ ಕದ್ದು ಮಾಯವಾಗಿದ್ದಾರೆ. ಪೊಲೀಸರು ಕಳ್ಳರ ಬೇಟೆಗಾಗಿ ಹುಡುಕಾಟ ಆರಂಭಿಸಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳ್ಳರನ್ನು ಹುಡುಕಲು ಪ್ರಯತ್ನಿಸುತ್ತಿದ್ದಾರೆ.

ಪೊಲೀಸ್​ ತನಿಖೆಯ ಪ್ರಕಾರ ರಾತ್ರಿ 1:26ಕ್ಕೆ ಬಾಗಿಲು ತೆಗದಿರುವುದು ದಾಖಲಾಗಿದೆ. ಸರಿಯಾಗಿ ಒಂಬತ್ತು ನಿಮಿಷದ ನಂತರ 1:36ಕ್ಕೆ ಮತ್ತೆ ಸಂಗ್ರಾಲಯದ ಬಾಗಿಲು ಮುಚ್ಚಿದೆ ಎಂದು ಭದ್ರತಾ ಕೊಠಡಿಯಲ್ಲಿ ದಾಖಲಾಗಿದೆ. ಮ್ಯೂಜಿಯಂನಿಂದ ಸರಿಯಾಗಿ ಒಂದು ಕಿಲೋಮೀಟರ್​ ದೂರದಲ್ಲಿ ಕೇಬಲ್​ ತುಂಡಾಗಿ ಬಿದಿದ್ದು, ಕಳ್ಳರು ನಾಣ್ಯಗಳನ್ನು ಕದಿಯಲು ಸಾಕಷ್ಟು ಪೂರ್ವಭಾವಿ ಸಿದ್ದತೆ ನಡೆಸಿದ್ದಾರೆ ಎಂದು ಬರ್ಲಿನ್​ನ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ರೀತಿ ಬರ್ಲಿನ್​ ಇನ್ನೊಂದು ಭಾಗದಲ್ಲಿ ಆಭರಣ ಕಳ್ಳತನವಾಗಿದ್ದು, ಈ ಎರಡೂ ದರೋಡೆಗೂ ಲಿಂಕ್​ ಇರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಖದೀಮರಿಗಾಗಿ ಬಲೆ ಬೀಸಿದ್ದಾರೆ.

ಭದ್ರತಾ ಲೋಪ: ವಸ್ತುಸಂಗ್ರಾಲಯದಲ್ಲಿ ಕಾವಲುಗಾರರು ಇರಲಿಲ್ಲ ಮತ್ತು ಭದ್ರತಾ ಅಲಾರಂಗಳು ಸಹ ಕೆಲಸ ಮಾಡುತ್ತರಿಲಿಲ್ಲ ಎನ್ನಲಾಗಿದೆ. ಸಂಗ್ರಾಲಯದ ಬವೇರಿಯನ್ ರಾಜ್ಯ ಪುರಾತತ್ವ ಸಂಗ್ರಹಣೆಯ ಮುಖ್ಯಸ್ಥ ರೂಪರ್ಟ್ ಗೆಭಾರ್ಡ್ ಈ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಚಿನ್ನದ ನಾಣ್ಯಗಳು ಸುಮಾರು ಕ್ರಿಸ್ತ ಪೂರ್ವ 100ರಷ್ಟು ಹಿಂದಿನದಾಗಿದ್ದು, ಸರಿಸುಮಾರು 1.6ಮಿಲಿಯನ್​ ಯುರೋಗಳಷ್ಟು ಬೆಲೆ ಬಾಳುತ್ತದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಇದನ್ನೂ ಓದಿ:ಸಪ್ತ ಸಾಗರದಾಚೆ ಕನ್ನಡ ಡಿಂಡಿಮ: ಜರ್ಮನಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

For All Latest Updates

TAGGED:

ABOUT THE AUTHOR

...view details