ಕರ್ನಾಟಕ

karnataka

ETV Bharat / international

ಇಂಡೋನೇಷ್ಯಾದ ಮಸೀದಿಯಿಂದ ಜಗತ್ತಿಗೆ 'ಹಸಿರು ರಂಜಾನ್' ಸಂದೇಶ - ಇಂಡೋನೇಷ್ಯ ಸಂಸ್ಥಾಪಕರಾದ ಸೋಕರ್ನೊ

ಹವಾಮಾನ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಪರಿಸರ ಸಂರಕ್ಷಣೆಯ ಜೊತೆಗೆ ಹಸಿರಿನ ಮಹತ್ವ ಸಾರುತ್ತಿದೆ ಇಂಡೋನೇಷ್ಯಾದ ಮಸೀದಿ.

Globally Muslims for Green Ramadan; What is special?
Globally Muslims for Green Ramadan; What is special?

By

Published : Apr 17, 2023, 4:43 PM IST

ಜರ್ಕಾತ್​: ನಗರದ ಹೃದಯ ಭಾಗದಲ್ಲಿರುವ ಇಸ್ತಿಕ್​ಲಾಲ್​ ಎಂಬ ಮಸೀದಿಯನ್ನು ಸಾವಿರಾರು ವರ್ಷಗಳ ಹಿಂದೆಯೇ ನಿರ್ಮಿಸಲಾಗಿದೆ. ಇಂಡೋನೇಷ್ಯಾ ಸಂಸ್ಥಾಪಕ ಸೋಕರ್ನೊ ಅವರ ದೃಷ್ಟಿಕೋನದೊಂದಿಗೆ ಮಸೀದಿ ನಿರ್ಮಾಣವಾಗಿದೆ. ಏಳು ಗೇಟ್​ಗಳ ಮಸೀದಿ, ಇಸ್ಲಾಂನ ಏಳು ಸ್ವರ್ಗದ ಪ್ರತಿನಿಧಿಯಾಗಿದೆ. ಮಸೀದಿಯನ್ನು ಪರಿಸರ ಪೂರಕ ವ್ಯವಸ್ಥೆಗೆ ಅನುಗುಣವಾಗಿ ನಿರ್ಮಿಸಿರುವುದು ಮತ್ತೊಂದು ವಿಶೇಷ. ಕಟ್ಟಡದ ಬೆಳಕು ನಿರ್ವಹಣೆಗೆ 2019ರಲ್ಲಿ 500 ಸೋಲಾರ್​ ಪ್ಯಾನೆಲ್​ ಅನ್ನು ಅಳವಡಿಸಲಾಗಿದೆ. ಈ ಮೂಲಕ ನೈಸರ್ಗಿಕ ವಿದ್ಯುತ್​ ಶಕ್ತಿ ಬಳಕೆ ಮಾಡಲಾಗುತ್ತದೆ.

ನಿರ್ವಹಣೆಯ ಉಪ ಮುಖ್ಯಸ್ಥರಾಗಿರುವ ಪ್ರಮತಮ ಮಾತನಾಡಿ, ಇಸ್ತಿಕ್​ಲಾಲ್​ ಮಸೀದಿ ಇಲ್ಲಿನ ಮುಸ್ಲಿಮರ ಪವಿತ್ರ ಸ್ಥಳ. ದೇಣಿಗೆ ಮೂಲಕ ಸೋಲಾರ್​ ಯೋಜನೆ ಅಳವಡಿಸಲಾಗಿದೆ. ಪರಿಸರ ಬದಲಾವಣೆಯಿಂದಾಗಿ ಗ್ರೀನ್​ ರಂಜಾನ್​ ಆರಂಭಕ್ಕೆ ಮುಂದಾಗಿದ್ದೇವೆ. ಇಂಡೋನೇಷ್ಯಾ ಜೊತೆಗೆ ಜಗತ್ತಿನಾದ್ಯಂತ ಮುಸ್ಲಿಮರ ಪವಿತ್ರ ತಿಂಗಳಿನಲ್ಲಿ ಈ ಬದಲಾವಣೆಗೆ ಉತ್ತೇಜನ ನೀಡಲಾಗುತ್ತಿದೆ.

ಇಷ್ಟೇ ಅಲ್ಲ, ರಂಜಾನ್​ ಮಾಸದಲ್ಲಿ ಪ್ರಾರ್ಥನೆಗೂ ಮೊದಲು ನೀರು ಬಳಕೆಯಲ್ಲೂ ಮಿತವ್ಯಯ ಕಾಪಾಡಲಾಗಿದೆ. ಮಸೀದಿ ಸುತ್ತಮುತ್ತ ಒರುವ ಸ್ಥಳೀಯರಿಗೂ ಮರುಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ಇದಕ್ಕಾಗಿ ದೇಣಿಗೆ ಸಂಗ್ರಹಿಸಲಾಗುತ್ತಿದೆ.

ಹವಾಮಾನ ಬದಲಾವಣೆ ಈಗಾಗಲೇ ಮಿತಿ ಮೀರಿದೆ. ಇದರ ಪರಿಣಾಮವಾಗಿ ಪ್ರವಾಹ ಮತ್ತು ಬಿಸಿಗಾಳಿ ಕಾಣುತ್ತಿದ್ದೇವೆ. ಕಲುಷಿತ ಇಂಧನಗಳನ್ನು ಎಲೆಕ್ಟ್ರಿಸಿಟಿ ಸೇರಿದಂತೆ ಹಲವನ್ನು ಒಳಕೆ ಮಾಡಲಾಗುತ್ತಿದೆ. ಏರುತ್ತಿರುವ ಹವಾಮಾನ ಬದಲಾವಣೆ ನಿಯಂತ್ರಿಸಲು ಹೊಸ ಗುರಿಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಕುರಾನ್​ ತತ್ವಗಳ ಆಧಾರದ ಮೇಲೆ ಕೆಲವು ಇಸ್ಲಾಮಿಕ್​ ಗುಂಪುಗಳು ಪರಿಸರ ಜಾಗೃತಿಗೆ ಮುಂದಾಗಿವೆ. ಕಳೆದ ವರ್ಷ ದೇಶದ ಉಪ ಅಧ್ಯಕ್ಷ ಮರುಫ್​ ಅಮಿನ್​ ಅವರು, ಪರಿಸರ ಹಾನಿ ತಡೆಗೆ ಕೆಲವು ಚಟುವಟಿಕೆಗಳನ್ನು ಕೈಗೊಳ್ಳಲು ಮುಂದಾದರು. ಇದರ ಫಲವೇ ಮಸೀದಿಗೆ ಅಳವಡಿಸಿರುವ ಸೋಲಾರ್​ ಯೋಜನೆಯಾಗಿದೆ.

ಇದನ್ನೂ ಓದಿ: 62 ದಿನಗಳ ಅಮರನಾಥ ಯಾತ್ರೆಗೆ ಆನ್‌ಲೈನ್, ಆಫ್‌ಲೈನ್‌ ನೋಂದಣಿ ಆರಂಭ

ABOUT THE AUTHOR

...view details