ಇಸ್ಲಾಮಾಬಾದ್:ಜಮ್ಮು-ಕಾಶ್ಮೀರ ಭಾರತದ ಕಿರೀಟಪ್ರಾಯವಾಗಿದ್ದರೂ ವಿವಾದ ಮಾತ್ರ ಬರೆಹರಿದಿಲ್ಲ. ಭಾರತ-ಪಾಕಿಸ್ತಾನ ಮಧ್ಯೆ ಇರುವ ಬಹುಕಾಲದ ಸಮಸ್ಯೆಯನ್ನು ಜರ್ಮನಿ ಇದೀಗ ಕೆಣಕಿದೆ. 'ಕಾಶ್ಮೀರಿಗರ ಮಾನವ ಹಕ್ಕು ಕಾಪಾಡಲು ವಿಶ್ವಸಂಸ್ಥೆ ಮುಂದಾಗಬೇಕು' ಎಂದು ಹೇಳಿಕೆ ನೀಡಿ ಭಾರತದ ಆಂತರಿಕ ವಿಚಾರದಲ್ಲಿ ಅನಪೇಕ್ಷಿತ ಮಧ್ಯಪ್ರವೇಶ ಮಾಡಿದೆ.
ಎರಡು ದಿನಗಳ ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲಿನಾ, ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿಯೊಂದಿಗೆ ನಡೆದ ಮಾತುಕತೆಯಲ್ಲಿ ಕಾಶ್ಮೀರದ ಕುರಿತು ಈ ಪ್ರಸ್ತಾಪ ಮಾಡಿದ್ದಾರೆ.