ಕರ್ನಾಟಕ

karnataka

ETV Bharat / international

ಹಿರೋಷಿಮಾದಲ್ಲಿ ಜಿ 7 ಶೃಂಗಸಭೆ: ಯಾವೆಲ್ಲಾ ದೇಶಗಳು ಭಾಗವಹಿಸಲಿವೆ? - ಏನಿದು ಜಿ 7 ಶೃಂಗಸಭೆ

ಈ ವರ್ಷದ ಜಿ 7 ಶೃಂಗಸಭೆಯು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಹುಟ್ಟುರಾದ ಹಿರೋಷಿಮಾದಲ್ಲಿ ನಡೆಯಲಿದೆ.

G 7
ಜಿ 7 ಶೃಂಗಸಭೆ

By

Published : May 18, 2023, 11:23 AM IST

ಟೋಕಿಯೊ: ಎರಡನೇ ಮಹಾಯುದ್ಧದ ಕೊನೆಯಲ್ಲಿ ವಿಶ್ವದ ಮೊದಲ ಪರಮಾಣು ದಾಳಿ ನಡೆದ ಸ್ಥಳವಾದ ಹಿರೋಷಿಮಾದಲ್ಲಿ ಈ ಬಾರಿ ವಿಶ್ವದ ಏಳು ಪ್ರಬಲ ದೇಶಗಳ ನಾಯಕರು ವಾರಾಂತ್ಯದಲ್ಲಿ ಗ್ರೂಪ್ ಆಫ್ ಸೆವೆನ್ ಶೃಂಗಸಭೆ ನಡೆಸಲಿದ್ದಾರೆ. ಈ ವೇಳೆ ಚೀನಾ, ಉತ್ತರ ಕೊರಿಯಾ ಮತ್ತು ರಷ್ಯಾದಿಂದ ಹೆಚ್ಚುತ್ತಿರುವ ಆಕ್ರಮಣಶೀಲತೆ ಸೇರಿದಂತೆ ಪ್ರಮುಖ ಅಭಿವೃದ್ಧಿಶೀಲ ರಾಷ್ಟ್ರಗಳ ಭದ್ರತೆ ಕುರಿತು ಚರ್ಚಿಸಲಾಗುತ್ತದೆ.

ಏನಿದು ಜಿ 7 ಶೃಂಗಸಭೆ?: ಜಗತ್ತಿನ ಪ್ರಮುಖ ಆರ್ಥಿಕ ಬಲಾಡ್ಯ ದೇಶಗಳಾದ ಅಮೆರಿಕ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಇಂಗ್ಲೆಂಡ್‌ ದೇಶಗಳು ಸೇರಿ ಮಾಡಿಕೊಂಡಿರುವ ಅನಧಿಕೃತ ಒಕ್ಕೂಟ. ಅಂದ್ರೆ, ಕೈಗಾರಿಕೀಕರಣಗೊಂಡ ರಾಷ್ಟ್ರಗಳ ಅನೌಪಚಾರಿಕ ಗುಂಪು. ಇದರಲ್ಲಿ ಯುರೋಪಿಯನ್‌ ಒಕ್ಕೂಟದ ಸದಸ್ಯ ರಾಷ್ಟ್ರಗಳು, ಇತರೆ ಆಹ್ವಾನಿತ ದೇಶಗಳೊಂದಿಗೆ ಪ್ರತಿ ವರ್ಷ ವಾರ್ಷಿಕ ಜಿ 7 ಶೃಂಗಸಭೆ ನಡೆಸುತ್ತವೆ.

ಈ ವರ್ಷ ಜಪಾನ್‌ ಜಿ 7 ಶೃಂಗಸಭೆಯ ಆತಿಥ್ಯ ವಹಿಸಲಿದೆ. G-7 ಶೃಂಗಸಭೆಗಳ ಅಧ್ಯಕ್ಷತೆಯು ಈ ಏಳು ಸದಸ್ಯ ದೇಶಗಳ ನಡುವೆ ಸುತ್ತುತ್ತಿರುತ್ತದೆ. ಇದರಲ್ಲಿ ಯುರೋಪಿಯನ್ ಒಕ್ಕೂಟದ ಇಬ್ಬರು ಪ್ರತಿನಿಧಿಗಳು ಸಹ ಭಾಗಿಯಾಗಿರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ವಾಡಿಕೆಯಂತೆ, ಕೆಲವು G-7 ಅಲ್ಲದ ದೇಶಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ನಾಯಕರು ಸಹ ಕೆಲವು ಅಧಿವೇಶನಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ವೇಳೆ ಆರ್ಥಿಕ ನೀತಿ, ಭದ್ರತೆ, ಹವಾಮಾನ ಬದಲಾವಣೆ ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸುತ್ತಾರೆ.

ಮೊದಲ ಶೃಂಗಸಭೆಯು 1975 ರಲ್ಲಿ ನಡೆಯಿತು. ಅರಬ್ ತೈಲ ನಿರ್ಬಂಧದ ನಂತರದ ಆರ್ಥಿಕ ಹಿಂಜರಿತವನ್ನು ನಿಭಾಯಿಸುವ ಕುರಿತು ಚರ್ಚಿಸಲು ಆರು ದೇಶಗಳ ಗುಂಪಿನ ಸಭೆಯನ್ನು ಫ್ರಾನ್ಸ್ ಆಯೋಜಿಸಿತ್ತು. ಒಂದು ವರ್ಷದ ನಂತರ ಕೆನಡಾ ಏಳನೇ ಸದಸ್ಯ ರಾಷ್ಟ್ರವಾಯಿತು. 1998 ರಲ್ಲಿ ರಷ್ಯಾವು G-8 ಅನ್ನು ರಚಿಸಿ ಈ ಗುಂಪಿಗೆ ಸೇರಿಕೊಂಡಿತು. ಆಗ ಸದಸ್ಯ ದೇಶಗಳ ಸಂಖ್ಯೆ 8 ಕ್ಕೆ ಏರಿಕೆಯಾಯಿತು. ಆದರೆ, ಮಾಸ್ಕೋ 2014 ರಲ್ಲಿ ಕ್ರೈಮಿಯಾವನ್ನು ವಶಪಡಿಸಿಕೊಂಡ ನಂತರ ರಷ್ಯಾವನ್ನು ಈ ಗುಂಪಿನಿಂದ ಹೊರಹಾಕಲಾಯಿತು.

ಈ ಬಾರಿ ಜಿ 7 ಶೃಂಗಸಭೆಗೆ ಹಾಜರಾಗುವ ದೇಶಗಳು ಯಾವುವು? :ಈ ವರ್ಷ ಆಸ್ಟ್ರೇಲಿಯಾ, ಬ್ರೆಜಿಲ್, ಕೊಮೊರೊಸ್, ಕುಕ್ ದ್ವೀಪಗಳು, ಭಾರತ, ಇಂಡೋನೇಷ್ಯಾ, ದಕ್ಷಿಣ ಕೊರಿಯಾ ಮತ್ತು ವಿಯೆಟ್ನಾಂನ ನಾಯಕರನ್ನು ಆಹ್ವಾನಿಸಲಾಗಿದೆ. ಯಾಕೆಂದರೆ, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಮಿತ್ರ ಮತ್ತು ಪಾಲುದಾರಿಕೆ ಹೊಂದಿರುವ ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ. ಜೊತೆಗೆ, ವಿಶ್ವಸಂಸ್ಥೆ, ಅಂತರಾಷ್ಟ್ರೀಯ ಇಂಧನ ಸಂಸ್ಥೆ, ಅಂತಾರಾಷ್ಟ್ರೀಯ ಹಣಕಾಸು ನಿಧಿ, ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ, ವಿಶ್ವಬ್ಯಾಂಕ್, ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವ ವ್ಯಾಪಾರ ಸಂಸ್ಥೆಗಳ ನಾಯಕರನ್ನು ಸಹ ಆಹ್ವಾನಿಸಲಾಗಿದೆ.

ಇದನ್ನೂ ಓದಿ :ಬೈಡನ್​ ಪ್ರವಾಸ ಮುಂದೂಡಿಕೆ: ಸಿಡ್ನಿಯಲ್ಲಿ ನಡೆಯಬೇಕಿದ್ದ ಕ್ವಾಡ್ ಶೃಂಗಸಭೆ ರದ್ದು

ಜಾಗತಿಕ ಆರ್ಥಿಕ ಚಟುವಟಿಕೆಯಲ್ಲಿ G-7 ದೇಶಗಳ ಪಾಲು ನಾಲ್ಕು ದಶಕಗಳ ಹಿಂದೆ ಸರಿಸುಮಾರು 50 ಪ್ರತಿಶತದಿಂದ ಸುಮಾರು 30% ಕ್ಕೆ ಕುಗ್ಗಿದೆ. ಚೀನಾ, ಭಾರತ ಮತ್ತು ಬ್ರೆಜಿಲ್‌ನಂತಹ ಅಭಿವೃದ್ಧಿಶೀಲ ಆರ್ಥಿಕತೆಗಳು ಭಾರಿ ಲಾಭವನ್ನು ಗಳಿಸಿವೆ.

ಇನ್ನು ಜಿ 7 ಶೃಂಗಸಭೆಯಲ್ಲಿ ಹಲವಾರು ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಹಾಗೆಯೇ, ಸಂತ್ರಸ್ತ ದೇಶಗಳಿಗೆ ಹಣಕಾಸು ನೆರವು ಸಹ ನೀಡಲಾಗಿದೆ. 1997ರಲ್ಲಿ ಸಂಭವಿಸಿದ ಚರ್ನೋಬಿಲ್‌ ಪರಮಾಣು ದುರಂತದ ಬಳಿಕ ಅಭಿವೃದ್ಧಿ ಕೆಲಸಗಳಿಗಾಗಿ ಜಿ ಗುಂಪಿನಿಂದ 20 ಸಾವಿರಾರು ಕೋಟಿ ನೆರವು ನೀಡಲಾಗಿದೆ. ಈ ಬಾರಿಯ ಸಭೆಯಲ್ಲಿ ಉಕ್ರೇನ್‌ನಲ್ಲಿ ರಷ್ಯಾ ಹಾಕುತ್ತಿರುವ ಪರಮಾಣು ಶಸ್ತ್ರಾಸ್ತ್ರಗಳ ಬೆದರಿಕೆ ಮತ್ತು ಚೀನಾ ಮತ್ತು ಉತ್ತರ ಕೊರಿಯಾದಿಂದ ಪರಮಾಣು ಕ್ಷಿಪಣಿ ಅಭಿವೃದ್ಧಿ ಸೇರಿದಂತೆ ಇತರೆ ವಿಚಾರಗಳ ಮೇಲೆ ಬೆಳಕು ಚೆಲ್ಲುವ ನಿರೀಕ್ಷೆ ಇದೆ.

ABOUT THE AUTHOR

...view details