ಪ್ಯಾರಿಸ್ (ಫ್ರಾನ್ಸ್):ಮಹತ್ವದ ಬೆಳವಣಿಗೆಯಲ್ಲಿ ಫ್ರಾನ್ಸ್ ಪ್ರಧಾನಿಯನ್ನಾಗಿ ಗೇಬ್ರಿಯಲ್ ಅಟ್ಟಲ್ ಅವರನ್ನು ನೇಮಕ ಮಾಡಲಾಗಿದೆ. ಇವರು ದೇಶದ ಮೊದಲ ಸಲಿಂಗಿ ಪಿಎಂ ಆಗಿದ್ದು, ಈ ಉನ್ನತ ಹುದ್ದೇರಿದ ಅತ್ಯಂತ ಕಿರಿಯ ರಾಜಕಾರಣಿಯೂ ಹೌದು.
ಫ್ರಾನ್ಸ್ನಲ್ಲಿ ವಿದೇಶಿಯರ ಗಡೀಪಾರು ಕುರಿತ ಇತ್ತೀಚಿನ ವಲಸೆ ಕಾನೂನು ರಾಜಕೀಯ ಪ್ರಕ್ಷುಬ್ಧತೆಗೆ ಕಾರಣವಾಗಿದೆ. ಬಲಪಂಥೀಯರಿಂದ ರಾಜಕೀಯ ಒತ್ತಡದ ಹೆಚ್ಚಾಗಿದೆ. ಇದರ ನಡುವೆ ರಾಜೀನಾಮೆ ಪ್ರಧಾನಿ ಎಲಿಜಬೆತ್ ಬೋರ್ನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ತಮ್ಮ ಉಳಿದ ಅವಧಿಗೆ ಹೊಸ ಆರಂಭ ನಿರೀಕ್ಷಿಸುತ್ತಿರುವ ಕಾರಣ ಗೇಬ್ರಿಯಲ್ ಅಟ್ಟಲ್ ಅವರನ್ನು ಪ್ರಧಾನಿಯಾಗಿ ಮಂಗಳವಾರ ಘೋಷಿಸಲಾಗಿದೆ.
ಹೊಸ ಪ್ರಧಾನಿ ಆಯ್ಕೆ ಬಗ್ಗೆ ಅಧ್ಯಕ್ಷ ಮ್ಯಾಕ್ರನ್ ಕಚೇರಿ ಪ್ರಕಟಣೆ ಹೊರಡಿಸಿದೆ. 34 ವರ್ಷದ ಅಟ್ಟಲ್ ಸರ್ಕಾರದ ವಕ್ತಾರರಾಗಿ ಮತ್ತು ಶಿಕ್ಷಣ ಸಚಿವರಾಗಿ ಮುನ್ನೆಲೆಗೆ ಬಂದಿದ್ದರು. ಸೋಷಿಯಲಿಸ್ಟ್ ಪಕ್ಷದ ಮಾಜಿ ಸದಸ್ಯ ಅಟ್ಟಲ್, 2016ರಲ್ಲಿ ಮ್ಯಾಕ್ರನ್ ಹೊಸದಾಗಿ ಶುರು ಮಾಡಿದ್ದ ರಾಜಕೀಯ ಚಳವಳಿಗೆ ಸೇರಿದ್ದರು. 2020ರಿಂದ 2022ರವರೆಗೆ ಸರ್ಕಾರದ ವಕ್ತಾರರಾಗಿ ಸೇವೆ ಸಲ್ಲಿಸಿದ್ದರು. ಇದು ಅವರನ್ನು ಫ್ರೆಂಚ್ ಜನರಿಗೆ ಚಿರಪರಿಚಿತರನ್ನಾಗಿಸಿತು. ಅಲ್ಲದೇ, ಫ್ರಾನ್ಸ್ ಸರ್ಕಾರದ ಅತ್ಯಂತ ಪ್ರತಿಷ್ಠಿತ ಹುದ್ದೆಗಳಲ್ಲಿ ಒಂದಾದ ಶಿಕ್ಷಣ ಸಚಿವರಾಗಿ ಜುಲೈನಲ್ಲಿ ಅವರು ನೇಮಕಗೊಂಡಿದ್ದರು. ಈ ಮೂಲಕ ಮೊದಲ ಬಾರಿಗೆ ಬಜೆಟ್ ಸಚಿವರನ್ನಾಗಿ ಅವರನ್ನು ಹೆಸರಿಸಲಾಗಿತ್ತು.