ಕರ್ನಾಟಕ

karnataka

ETV Bharat / international

ಜಪಾನ್‌ ಮಾಜಿ ಪ್ರಧಾನಿ ಶಿಂಜೋ ಅಬೆ ಮೇಲೆ ಗುಂಡಿನ ದಾಳಿ, ಶಂಕಿತನ ಬಂಧನ - ಶಿಂಜೋ ಅಬೆ ಎದಗೆ ಗುಂಡಿಕ್ಕಿ ಹತ್ಯೆ

ನಾರಾ ಎಂಬ ನಗರದಲ್ಲಿ ಭಾಷಣ ಮಾಡುತ್ತಿದ್ದಾಗ ಶಿಂಜೋ ಅಬೆ ಮೇಲೆ ಗುಂಡು ಹಾರಿಸಲಾಗಿದೆ. ತಕ್ಷಣ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿಂಜೋ ಅಬೆ
ಶಿಂಜೋ ಅಬೆ

By

Published : Jul 8, 2022, 8:48 AM IST

Updated : Jul 8, 2022, 9:30 AM IST

ಜಪಾನ್: ಜಪಾನಿನ ಪಶ್ಚಿಮ ಭಾಗದ ನಗರ ನಾರಾ ಎಂಬಲ್ಲಿ ಮಾಜಿ ಪ್ರಧಾನಿ ಶಿಂಜೋ ಅಬೆ ಮೈಮೇಲೆ ಗುಂಡಿನ ದಾಳಿ ನಡೆದಿದೆ. ಭಾಷಣ ಮಾಡುತ್ತಿದ್ದಾಗ ದಿಢೀರ್ ಕುಸಿದು ಬಿದ್ದ ಅವರ ದೇಹದಿಂದ ತೀವ್ರ ರಕ್ತಸ್ರಾವವಾಗಿದೆ. ಇದೀಗ ಅಬೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ವ್ಯಕ್ತಿಯೊಬ್ಬನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಘಟನಾ ಸಂದರ್ಭದ ವಿಡಿಯೋ ಇಲ್ಲಿದೆ.

1982ರಲ್ಲಿ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಸೇರಿದ ಅಬೆ, ಮೊದಲಿಗೆ ವಿದೇಶಾಂಗ ಇಲಾಖೆ ನಂತರ ಪಕ್ಷದ ಅಧ್ಯಕ್ಷರ ಆಪ್ತ ಕಾರ್ಯದರ್ಶಿಯಾಗಿ 9 ಸೇವೆ ಸಲ್ಲಿಸಿದ್ದಾರೆ. ಜುಲೈ 2006ರಲ್ಲಿ ತಮ್ಮ 52 ನೇ ವರ್ಷದಲ್ಲಿ ಪ್ರಧಾನಿ ಹುದ್ದೆ ಅಲಂಕರಿಸುವ ಮೂಲಕ ಅತಿ ಕಿರಿಯ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆೆ ಹೊಂದಿದ್ದಾರೆ.

Last Updated : Jul 8, 2022, 9:30 AM IST

ABOUT THE AUTHOR

...view details