ಕರ್ನಾಟಕ

karnataka

ETV Bharat / international

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಅರೆಸ್ಟ್​.. - ತೋಶಾಖಾನಾ ಪ್ರಕರಣ

ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್ ಹೈಕೋರ್ಟ್‌ನ ಹೊರಗಿನಿಂದ ರೇಂಜರ್‌ಗಳು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇಮ್ರಾನ್ ಖಾನ್
ಇಮ್ರಾನ್ ಖಾನ್

By

Published : May 9, 2023, 4:31 PM IST

ನವದೆಹಲಿ:ನೆರೆಯ ಪಾಕಿಸ್ತಾನದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಿಟಿಐ (ತೆಹ್ರೀಕ್-ಇ-ಇನ್ಸಾಫ್ ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್ ಹೈಕೋರ್ಟ್ ಹೊರಗೆ ಅರೆಸೇನಾ ಪಡೆಯ ರೇಂಜರ್‌ಗಳು ಮಂಗಳವಾರ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ವೇಳೆ ನಡೆದ ಘರ್ಷಣೆಯಲ್ಲಿ ಇಮ್ರಾನ್ ಖಾನ್ ಅವರ ಪರ ವಕೀಲರಿಗೆ ತೀವ್ರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಅವರ ತಲೆಯಿಂದ ರಕ್ತ ಸುರಿಯುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆಲ್ ಖಾದಿರ್ ಟ್ರಸ್ಟ್ ಹಗರಣ ಪ್ರಕರಣದಲ್ಲಿ ಇಮ್ರಾನ್ ಖಾನ್ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿತ್ತು. ಈ ಬಂಧನದ ಬೆನ್ನಲ್ಲೇ ಇಸ್ಲಾಮಾಬಾದ್‌ನ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ಬಗ್ಗೆ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಉಪಾಧ್ಯಕ್ಷ ಫವಾದ್ ಚೌಧರಿ ಅವರು ಟ್ವೀಟ್ ಮಾಡಿದ್ದು, ನ್ಯಾಯಾಲಯವನ್ನು ರೇಂಜರ್‌ಗಳು ಆಕ್ರಮಿಸಿಕೊಂಡಿದ್ದಾರೆ ಮತ್ತು ವಕೀಲರು ಚಿತ್ರಹಿಂಸೆಗೆ ಒಳಗಾಗುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇಮ್ರಾನ್ ಖಾನ್ ಅವರ ಕಾರನ್ನು ಸುತ್ತುವರಿಯಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:'ದಿ ಕೇರಳ ಸ್ಟೋರಿ' ಚಿತ್ರ ತಂಡದ ಸದಸ್ಯನಿಗೆ ಬೆದರಿಕೆ: ಮುಂಬೈ ಪೊಲೀಸರಿಂದ ಭದ್ರತೆ

ಇಮ್ರಾನ್ ಖಾನ್ ಅವರನ್ನು ಸುತ್ತುವರಿದ ಐವತ್ತಕ್ಕೂ ಹೆಚ್ಚು ರೇಂಜರ್‌ಗಳು ಅವರನ್ನು ವಾಹನದಲ್ಲಿ ಕೂರಿಸಿಕೊಂಡು ಬೇರೆಡೆಗೆ ಕರೆದೊಯ್ಯವುದು ವಿಡಿಯೋಗಳಲ್ಲಿ ಸೆರೆಯಾಗಿದೆ. ತಮ್ಮ ವಿರುದ್ಧ ದಾಖಲಾದ ಹಲವು ಎಫ್‌ಐಆರ್‌ಗಳಲ್ಲಿ ಜಾಮೀನು ಪಡೆಯುವ ಸಲುವಾಗಿ ಇಮ್ರಾನ್ ಖಾನ್ ಅವರು ಇಂದು ಇಸ್ಲಾಮಾಬಾದ್ ಹೈಕೋರ್ಟ್‌ಗೆ ಬಂದಿದ್ದರು. ಈ ವೇಳೆ ಅವರನ್ನು ನ್ಯಾಷನಲ್ ಅಕೌಂಟಬಿಲಿಟಿ ಬ್ಯೂರೋ (ಎನ್‌ಎಬಿ) ಬಂಧಿಸಿದೆ. ಬಳಿಕ ಅವರನ್ನು ಕಪ್ಪು ಬಣ್ಣದ ವಿಗೋ ಕಾರಿನಲ್ಲಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರೇಂಜರ್‌ಗಳು ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಅವರನ್ನು ಅಪಹರಿಸಿದ್ದಾರೆ. ಅದರ ದೃಶ್ಯಗಳಿವು. ಪಾಕಿಸ್ತಾನದ ಧೈರ್ಯಶಾಲಿ ಜನರು ಹೊರಗೆ ಬಂದು ತಮ್ಮ ದೇಶದ ಪರ ಹೋರಾಡಬೇಕು ಎಂದು ಘಟನೆಯ ಬಗ್ಗೆ ಪಿಟಿಐ ಟ್ವೀಟ್ ಮಾಡಿದೆ.

ಇದನ್ನೂ ಓದಿ:ಕಾರ್‌ನ ಡಿಕ್ಕಿಯಲ್ಲಿತ್ತು 3 ಕೋಟಿ ರೂಪಾಯಿ, ಹಣ ಎಣಿಕೆ ಯಂತ್ರ: ಪುಣೆ ಪೊಲೀಸರಿಂದ ಜಪ್ತಿ

ಇಮ್ರಾನ್ ಖಾನ್ ಮೇ 10 ರಂದು ತೋಶಾಖಾನಾ ಪ್ರಕರಣದಲ್ಲಿ ದೋಷಾರೋಪಣೆಯನ್ನು ಎದುರಿಸಬೇಕಾಗುತ್ತದೆ ಎಂದು ಇಸ್ಲಾಮಾಬಾದ್ ನ್ಯಾಯಾಲಯವು ಶುಕ್ರವಾರ ಘೋಷಿಸಿದ್ದು, ವಿದೇಶಿ ಗಣ್ಯರು ನೀಡಿದ ಉಡುಗೊರೆಗಳನ್ನು ಮಾರಾಟ ಮಾಡಿದ ನಂತರ ಅವರು ಪಡೆದ ಹಣವನ್ನು ಘೋಷಿಸಲು ವಿಫಲರಾಗಿದ್ದಾರೆ ಎಂದು ಪಾಕಿಸ್ತಾನದ ಚುನಾವಣಾ ಆಯೋಗವು ಕಳೆದ ವರ್ಷ ತೀರ್ಪು ನೀಡಿದ ನಂತರ ಖಾನ್ ವಿರುದ್ಧ ತೋಷಖಾನಾ ಪ್ರಕರಣವನ್ನು ದಾಖಲಿಸಲಾಯಿತು. ತೋಷ್ಖಾನಾ ಒಂದು ನಿಧಿ ಮನೆಯಾಗಿದ್ದು, ವಿದೇಶಿ ಗಣ್ಯರಿಂದ ಗೌರವಾರ್ಥವಾಗಿ ಸ್ವೀಕರಿಸಿದ ಉಡುಗೊರೆಗಳನ್ನು ಸಂಗ್ರಹಿಸಲಾಗುತ್ತದೆ.

ಇದನ್ನೂ ಓದಿ:ಉದ್ಯಮಿ ಮನೆಗೆ ನುಗ್ಗಿ ಶಸ್ತ್ರಾಸ್ತ್ರಗಳಿಂದ ಬೆದರಿಸಿ ₹1.3 ಕೋಟಿ ಹಣ, 2 ಕೆಜಿ ಚಿನ್ನ ದರೋಡೆ!

ABOUT THE AUTHOR

...view details