ಕರ್ನಾಟಕ

karnataka

ಅದಾನಿ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದ ಯುಕೆ ಕಂಪನಿಗೆ ಬ್ರಿಟನ್​ ಮಾಜಿ ಪ್ರಧಾನಿ ಸಹೋದರ ರಾಜೀನಾಮೆ

ಎಲರಾ ಕ್ಯಾಪಿಟಲ್​ಗೆ ರಾಜೀನಾಮೆ ಸಲ್ಲಿಸಿದ ಜೋ ಜಾನ್ಸನ್​ - ಅದಾನಿ ಸಂಸ್ಥೆಯೊಂದಿಗೆ ನಂಟಿದ್ದ ಎಲರಾ ಸಂಸ್ಥೆ - ಕಳೆದ ಜೂನ್​ನಲ್ಲಿ ಹುದ್ದೆಗೆ ನೇಮಕಗೊಂಡಿದ್ದ ಜಾನ್ಸನ್​

By

Published : Feb 3, 2023, 11:28 AM IST

Published : Feb 3, 2023, 11:28 AM IST

ಅದಾನಿ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದ ಯುಕೆ ಕಂಪನಿಗೆ ಬ್ರಿಟನ್​ ಮಾಜಿ ಪ್ರಧಾನಿ ಸಹೋದರ ರಾಜೀನಾಮೆ
former-british-prime-ministers-brother-has-resigned-elara-company-which-was-associated-with-adani

ಲಂಡನ್​: ಬ್ರಿಟಿಷ್​ ಮಾಜಿ ಪ್ರಧಾನಿ ಬೋರಿಸ್​ ಜಾನ್ಸನ್​ ಅವರ ತಮ್ಮ ಲಾರ್ಡ್​ ಜೊ ಜಾನ್ಸನ್​ ಅದಾನಿ, ಎಂಟರ್‌ಪ್ರೈಸಸ್ ಷೇರು ವಿಕ್ರಯ(ಎಫ್‌ಪಿಒ)ದೊಂದಿಗೆ ಸಂಬಂಧ ಹೊಂದಿರುವ ಯುಕೆ ಮೂಲದ ಹೂಡಿಕೆ ಸಂಸ್ಥೆಯ ಕಾರ್ಯ ನಿರ್ವಾಹಕೇತರ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ಜೂನ್​ನಲ್ಲಿ ಎಲರಾ ಕ್ಯಾಪಿಟಲ್​ ಪಿಎಲ್​ಸಿ ನಿರ್ದೇಶಕ ಸ್ಥಾನಕ್ಕೆ 51 ವರ್ಷದ ಲಾರ್ಡ್​ ಜಾನ್ಸನ್​ ನೇಮಕ ಗೊಂಡಿದ್ದರು. ಬುಧವಾರ ಅದಾನಿ ಸಮೂಹ ಸಂಸ್ಥೆ ಷೇರು ವಿಕ್ರಯ ಹಿಂಪಡೆಯುವ ಘೋಷಣೆ ನಡೆಸಿದ ದಿನದಂದು ಅವರು ರಾಜೀನಾಮೆ ನೀಡಿದ್ದಾರೆ ಎಂದು ದಿ ಫೈನಾನ್ಸ್​ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಎಲರಾ ಸಂಸ್ಥೆ, ಭಾರತೀಯ ಕಾರ್ಪೊರೇಟ್​ ಸಂಸ್ಥೆಗಳಿಂದ ಬಂಡವಾಳ ಮಾರುಕಟ್ಟೆಯ ಉದ್ಯಮಕ್ಕೆ ಹಣ ಸಂಗ್ರಹಿಸುವ​ ತರುವ ಸಂಸ್ಥೆಯಾಗಿದ್ದು, ಎಫ್​ಪಿಒ ಬುಕ್​ ರನ್ನರ್​​ಗಳಲ್ಲಿ ಒಬ್ಬರಾಗಿದೆ.ಇನ್ನು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕುರಿತು ಮಾತನಾಡಿರುವ ಜಾನ್ಸನ್​ ಕಂಪನಿಯು ಉತ್ತಮ ಸ್ಥಾನಮಾನ ಹೊಂದಿದ್ದು, ತಮ್ಮ ವೈಯಕ್ತಿಕ ಡೊಮೇನ್​ ಪರಿಣಿತಿಯ ಕೊರತೆಯಿಂದಾಗಿ ಈ ಹುದ್ದೆ ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ.

ಲಂಡನ್ ಮೂಲದ ಭಾರತ ಕೇಂದ್ರಿತ ಹೂಡಿಕೆ ಸಂಸ್ಥೆ ಎಲರಾ ಕ್ಯಾಪಿಟಲ್​ಗೆ ನಾನು ಸ್ವತಂತ್ರ ಕಾರ್ಯ ನಿರ್ವಾಹಕೇತರ ನಿರ್ದೇಶಕರಾಗಿ ಕಳೆದ ಜೂನ್​ನಲ್ಲಿ ಸೇರಿದೆ. ಈ ಮೂಲಕ ಬ್ರಿಟನ್​- ಭಾರತ ಉದ್ಯಮ ಮತ್ತು ಹೂಡಿಕೆ ಸಂಬಂಧಗಳಿಗೆ ಕೊಡುಗೆ ನೀಡುವ ಭರವಸೆ ಹೊಂದಿದೆ. ಇದಕ್ಕಾಗಿ ಸುದೀರ್ಘ ಸಂಬಂಧವನ್ನು ಹೊಂದಿದ್ದು, ಬುಕ್​ ಕೂಡ ಬರೆದಿದ್ದೇನೆ ಎಂದು ಜಾನ್ಸನ್​ ರಾಜೀನಾಮೆ ಬಳಿಕ ತಿಳಿಸಿದ್ದಾರೆ.

ನಾನು ಎಲಾರಾ ಕ್ಯಾಪಿಟಲ್‌ನಿಂದ ತನ್ನ ಕಾನೂನು ಬಾಧ್ಯತೆಗಳಿಗೆ ಅನುಸಾರವಾಗಿದೆ. ನಿಯಂತ್ರಕ ಸಂಸ್ಥೆಗಳೊಂದಿಗೆ ಉತ್ತಮ ಸ್ಥಿತಿಯಲ್ಲಿದೆ ಎಂಬ ಭರವಸೆಯನ್ನು ನಾನು ಪಡೆದಿದ್ದೇನೆ. ಇದೇ ವೇಳೆ, ಹಣಕಾಸು ನಿಯಂತ್ರಣದಲ್ಲಿ ಅತ್ಯತ್ತಮ ಮಟ್ಟದ ಡೊಮೈನ್​ ಪರಿಣಿತಿಯನ್ನು ಈ ಸ್ಥಾನ ಬೇಡುತ್ತದೆ ಎಂಬ ಅರಿವು ನನಗೆ ಆಗಿದೆ. ಅದರ ನಿರೀಕ್ಷೆಯಂತೆ ನಾನು ಮಂಡಳಿಗೆ ರಾಜೀನಾಮೆ ಪಡೆದಿದ್ದೇನೆ ಎಂದಿದ್ದಾರೆ.

ಅದಾನಿ ಗ್ರೂಪ್ ಕಂಪನಿಗಳೊಂದಿಗೆ ಲಂಡನ್ ಸಂಸ್ಥೆ ನಡೆಸುತ್ತಿರುವ ಮಾರಿಷಸ್ ಮೂಲದ ನಿಧಿಗಳನ್ನು ಆಸ್ತಿ ನಿರ್ವಹಣೆ ವ್ಯವಹಾರವಾಗಿ ಎಲರಾ ಕಾರ್ಯ ನಿರ್ವಹಿಸುತ್ತಿದೆ ಎಂದು ಹಿಡಂನ್​ ಬರ್ಗ್​​ ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಅದಾನಿ ಗ್ರೂಪ್​ ಹಿಡಂನ್​ ಬರ್ಗ್​ ಆರೋಪವನ್ನು ತಳ್ಳಿ ಹಾಕಿದೆ. ಅಲ್ಲದೇ ಇದು ಆಧಾರ ರಹಿತ ಮತ್ತು ಅಪಖ್ಯಾತಿಗೊಳಿಸುವ ಆರೋಪವಾಗಿದೆ ಎಂದು ದೂರಿದೆ.

ಇನ್ನು ಈ ಆರೋಪಗಳ ಕುರಿತು ಎಲರಾ ಕ್ಯಾಪಿಟನ್​ ಮುಖ್ಯ ಕಾರ್ಯ ನಿರ್ವಹಾಕ ಮತ್ತು ಸಂಸ್ಥಾಪಕ ರಾಜ್​​ ಭಟ್​ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಏತನ್ಮಥ್ಯೆ, ಕಂಪನಿಯ ವೈಬ್​ಸೈಟ್​ನಲ್ಲಿ ಭಟ್​ ಎಲರಾ ಕ್ಯಾಪಿಟಲ್​ ಪಿಎಲ್​ಸಿ ಯನ್ನು 2002ರಲ್ಲಿ ಸ್ಥಾಪಿಸಿದ್ದು, ಇದು ಹೂಡಿಕೆ ಮಾರುಕಟ್ಟೆ ವ್ಯವಹಾರವಾಗಿದ್ದು, ಜಿಡಿಆರ್​​, ಎಫ್​ಸಿಸಿಬು ಮತ್ತು ಲಂಡನ್​ ಎಐಎಂ ಮಾರುಕಟ್ಟೆ ಮೂಲಜ ಭಾರತ ಕಾರ್ಪೊರೇಟ್​​ಗೆ ಹಣ ಸಂಗ್ರಹಿಸುವ ಸಂಸ್ಥೆಯಾಗಿದೆ ಎನ್ನಲಾಗಿದೆ.

2003ರಲ್ಲಿ ಮೊದಲ ಜಿಡಿಆರ್​ ಅನ್ನು ಅನೇಕ ಭಾರತೀಯ ಕಾರ್ಪೊರೇಟ್ಸ್​ಗಳಿಗೆ ಎಲರಾ ಮೊದಲ ನಿಧಿ ಸಂಗ್ರಹ ಮಾಡಿತು. ಇದಾದ ಬಳಿಕ ಗುಂಪು ಕಾರ್ಪೊರೇಟ್ ಸಲಹಾ, ಆಸ್ತಿ ನಿರ್ವಹಣೆ, ಬ್ರೋಕಿಂಗ್, ವಿಲೀನಗಳು ಮತ್ತು ಸ್ವಾಧೀನಗಳು ಮತ್ತು ಖಾಸಗಿ ಇಕ್ವಿಟಿಯಲ್ಲಿ ಮತ್ತಷ್ಟು ವೈವಿಧ್ಯಗೊಳಿಸಿದೆ

ಇದನ್ನೂ ಓದಿ: ವಾಲ್​​​ಸ್ಟ್ರೀಟ್​​ನಲ್ಲಿ ಮುಂದುವರಿದ ಏರಿಳಿತ.. ಟೆಕ್​​ ಷೇರುಗಳ ಅಬ್ಬರ..ನಾಸ್ಡಾಕ್​​​​​​​​​ನಲ್ಲಿ ಉತ್ಸಾಹ

ABOUT THE AUTHOR

...view details