ಕರ್ನಾಟಕ

karnataka

ETV Bharat / international

Israel- Hamas conflict: ಹಮಾಸ್ ದಾಳಿಯಲ್ಲಿ ಎಪಿ ಮಾಜಿ ವಿಡಿಯೋ ಜರ್ನಲಿಸ್ಟ್, ಕುಟುಂಬದ ಸದಸ್ಯರು ಸಾವು - ಅಸೋಸಿಯೇಟೆಡ್ ಪ್ರೆಸ್ ವಿಡಿಯೋ ಜರ್ನಲಿಸ್ಟ್

ಅಕ್ಟೋಬರ್ 7ರಂದು ನಡೆದ ಹಮಾಸ್‌ನಿಂದ ಇಸ್ರೇಲ್​ನಲ್ಲಿ ನಡೆದ ದಾಳಿಯಲ್ಲಿ ಮಾಜಿ ಅಸೋಸಿಯೇಟೆಡ್ ಪ್ರೆಸ್ ವಿಡಿಯೋ ಜರ್ನಲಿಸ್ಟ್ ಯಾನಿವ್ ಜೋಹರ್ (54) ಹಾಗೂ ಅವರ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಮೃತಪಟ್ಟಿದ್ದಾರೆ.

Israel- Hamas conflict
ಹಮಾಸ್ ದಾಳಿಯಲ್ಲಿ ಎಪಿ ಮಾಜಿ ವಿಡಿಯೋ ಜರ್ನಲಿಸ್ಟ್, ಮೂವರು ಕುಟುಂಬದ ಸದಸ್ಯರು ಸಾವು...

By ETV Bharat Karnataka Team

Published : Oct 18, 2023, 2:22 PM IST

ಟೆಲ್ ಅವೀವ್ (ಇಸ್ರೇಲ್):ಮೂರು ದಶಕಗಳ ಕಾಲ ತನ್ನ ತಾಯ್ನಾಡಿನಲ್ಲಿ ಸಂಘರ್ಷಗಳು ಮತ್ತು ಪ್ರಮುಖ ಸುದ್ದಿಗಳ ವಿಡಿಯೋಗಳನ್ನು ಕವರ್​ ಮಾಡಿದ್ದ ಅಸೋಸಿಯೇಟೆಡ್ ಪ್ರೆಸ್(AP)ನ ಮಾಜಿ ವಿಡಿಯೋ ಜರ್ನಲಿಸ್ಟ್ ಯಾನಿವ್ ಜೊಹರ್ ಅವರು ಅಕ್ಟೋಬರ್ 7 ರಂದು ಹಮಾಸಸ್​ನಿಂದ ಇಸ್ರೇಲ್​ ಮೇಲೆ ನಡೆದ ದಾಳಿಯಲ್ಲಿ ಮೃತಪಟ್ಟಿದ್ದಾರೆ. ದಾಳಿ ನಡೆದ ಸಮಯದಲ್ಲಿ ಮನೆಯಲ್ಲಿ ಯಾನಿವ್ ಜೊಹರ್ ಅವರೊಂದಿಗೆ ಇದ್ದ ಪತ್ನಿ ಮತ್ತು ಇಬ್ಬರು ಪುತ್ರಿಯರು ಸಾವನ್ನಪ್ಪಿದ್ದಾರೆ.

ಜೋಹರ್ ಅವರು ಎಪಿಯ ಇಸ್ರೇಲ್ ಬ್ಯೂರೋದಲ್ಲಿ 2005ರಿಂದ 2020 ರ ವರೆಗೆ 15 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಈ ಹಿಂದೆ, ದೇಶದ ಎಲ್ಲಾ ಪ್ರಮುಖ ಸುದ್ದಿ ಘಟನೆಗಳ ವಿಡಿಯೋಗಳನ್ನು ಕವರೇಜ್​ ಅನ್ನು ಅವರು ಮಾಡಿದ್ದರು. ಆದರೆ, ಗಾಜಾ ಪಟ್ಟಿಯ ಗಡಿಯ ಸಮೀಪದಲ್ಲಿರುವ ನಹಾಲ್ ಓಜ್ ಕಿಬ್ಬುಟ್ಜ್‌ನಲ್ಲಿರುವ ಅವರ ಮನೆಯು ಇಸ್ರೇಲ್​ ಗಡಿಯ ಸಮೀಪದಲ್ಲಿದೆ. ಹಮಾಸ್​ ನಡೆಸಿದ ದಾಳಿಯಲ್ಲಿ ಯಾನಿವ್ ಜೊಹರ್ ಹಾಗೂ ಅವರ ಪತ್ನಿ ಯಾಸ್ಮಿನ್(49) ಮತ್ತು ಅವರ ಇಬ್ಬರು ಪುತ್ರಿಯರಾದ ಟೆಹೆಲೆಟ್(20), ಕೆಶೆಟ್ (18) ಸಾವನ್ನಪ್ಪಿದ್ದಾರೆ. ಜೋಹರ್ ಅವರ 13 ವರ್ಷದ ಮಗ ಏರಿಯಲ್ ಮನೆಯಿಂದ ಹೊರಗೆ ಹೋಗಿದ್ದ. ಆತ ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಅಂತ್ಯಕ್ರಿಯೆ ಕಾರ್ಯಕ್ಕೆ ನಾಲ್ಕು ಬಾರಿ ಅಡ್ಡಿ:ಮಧ್ಯ ಇಸ್ರೇಲ್‌ನಲ್ಲಿ ಮಂಗಳವಾರ ನಡೆದ ಜೊಹರ್ ಅವರ ಅಂತ್ಯಕ್ರಿಯೆಯಲ್ಲಿ ಅಂದಾಜು 1,000 ಜನರು ಭಾಗವಹಿಸಿದ್ದರು. ಅಲ್ಲಿ ವಾಯುದಾಳಿ ಸೈರನ್‌ಗಳು ಮತ್ತು ಗಾಜಾದಿಂದ ಒಳಬರುತ್ತಿದ್ದ ರಾಕೆಟ್​ ಬೆಂಕಿ ಉಗುಳಿತ್ತಿದ್ದರಿಂದ ಅಂತ್ಯಕ್ರಿಯೆ ಕಾರ್ಯದ ವೇಳೆಯಲ್ಲಿ ನಾಲ್ಕು ಬಾರಿ ಅಡ್ಡಿಪಡಿಸಲಾಯಿತು. ಇಸ್ರೇಲ್‌ನ ಐರನ್ ಡೋಮ್ ರಕ್ಷಣಾ ವ್ಯವಸ್ಥೆಯು ಗಾಜಾದಿಂದ ರಾಕೆಟ್‌ಗಳನ್ನು ನಿಷ್ಕ್ರಿಯಗೊಳಿಸುವ ಕಾರ್ಯದಲ್ಲಿ ತೊಡಗಿರುವುದು ಕಂಡುಬಂದಿದೆ.

''ಯಾನಿವ್ ಉತ್ತಮ ಸ್ನೇಹಿತ ಮತ್ತು ನಿಜವಾದ ಸಾಧಕ. ನಾವು ವಿದೇಶಗಳಲ್ಲಿ ಮತ್ತು ದೇಶಾದ್ಯಂತ ಒಟ್ಟಿಗೆ ಕೆಲಸ ಮಾಡಿದ್ದೇವೆ. ಹಿಂಸಾಚಾರ ಎಲ್ಲಿ ಸ್ಫೋಟಗೊಂಡರೂ ಅದನ್ನು ಕವರ್​ ಮಾಡುತ್ತಿದ್ದೆವು. ನಾನು ನ್ಯೂಸ್ ಕ್ಯಾಮರಾಮನ್ ಆಗಿ ದೀರ್ಘಾವಧಿಯಲ್ಲಿ ಅನೇಕ ದೌರ್ಜನ್ಯಗಳನ್ನು ಕಂಡಿದ್ದೇನೆ. ಅವುಗಳಲ್ಲಿ ಯಾವುದೂ ಯಾನಿವ್ ಮತ್ತು ಅವರ ಕುಟುಂಬಕ್ಕೆ ಸಂಭವಿಸಿದಷ್ಟು ಭಯಾನಕವಾಗಿರಲಿಲ್ಲ. ಇದು ಪದಗಳಿಂದ ವಿವರಿಸಲು ಆಗದಷ್ಟು ತುಂಬಾ ಭಯಾನಕ ಘಟನೆಯಾಗಿದೆ'' ಎಂದು ಮತ್ತೊಬ್ಬ ವಿಡಿಯೋ ಜರ್ನಲಿಸ್ಟ್​ ಬರ್ನ್‌ಸ್ಟೈನ್ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:Israel Hamas conflict: ಗಾಜಾದ ಅಲ್-ಅಹ್ಲಿ ಸಿಟಿ ಆಸ್ಪತ್ರೆ ಮೇಲೆ ವೈಮಾನಿಕ ದಾಳಿ.. 500 ಜನ ಬಲಿ

ABOUT THE AUTHOR

...view details