ಒರ್ಲ್ಯಾಂಡೊ(ಯುಎಸ್ಎ): ಅಮೆರಿಕದಲ್ಲಿ ಗುಂಡಿನ ದಾಳಿ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ಗುಂಡಿನ ದಾಳಿಗೆ ಮತ್ತೊಮ್ಮೆ ನಿನ್ನೆ ಸೆಂಟ್ರಲ್ ಫ್ಲೋರಿಡಾ ದೂರದರ್ಶನ ಪತ್ರಕರ್ತ ಹಾಗು 9 ವರ್ಷದ ಮಗು ಸಾವನ್ನಪ್ಪಿದ್ದಾರೆ. ಒರ್ಲ್ಯಾಂಡೊ-ಪ್ರದೇಶದಲ್ಲಿ ದುಷ್ಕರ್ಮಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ದಾಳಿಯ ಪರಿಣಾಮ ಬಾಲಕಿ ಮತ್ತು ಅಲ್ಲಿನ ಒಂದು ಮಾಧ್ಯಮದ ಪತ್ರಕರ್ತ ಸಾವನ್ನಪ್ಪಿದ್ದು ಆರೋಪಿ 19 ವರ್ಷದ ಕೀತ್ ಮೆಲ್ವಿನ್ ಮೋಸೆಸ್ ಬಂಧಿಸಲಾಗಿದೆ ಎಂದು ಆರೆಂಜ್ ಕೌಂಟಿ ಶೆರಿಫ್ ನ ಅಧಿಕಾರಿ ಜಾನ್ ಮಿನಾ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಆರೋಪಿಯ ಈ ದಾಳಿಗೆ ಕಾರಣ ತಿಳಿದು ಬಂದಿಲ್ಲ. ಆತ ಮೊದಲು ಮಾಧ್ಯಮದ ವಾಹನದ ಬಳಿ ಬಂದು ಇಬ್ಬರೂ ಪತ್ರಕರ್ತರ ಮೇಲೆ ಗುಂಡು ಹಾರಿಸಿ, ನಂತರ ಅಲ್ಲೇ ಇದ್ದ ಮನೆಯೊಂದಕ್ಕೆ ನುಗ್ಗಿ ತಾಯಿ ಹಾಗೂ ಅವರ 9 ವರ್ಷದ ಮಗುವಿನ ಮೇಲೆ ದಾಳಿ ನಡೆಸಿದ್ದಾನೆ. ಗುಂಡಿನ ದಾಳಿಗೆ ಮಗು ಮತ್ತು ಒಬ್ಬ ಪತ್ರಕರ್ತ ಸಾವನ್ನಪ್ಪಿದ್ದು, ತಾಯಿ ಹಾಗೂ ಮತ್ತೋರ್ವ ಪತ್ರಕರ್ತನ ಸ್ಥಿತಿ ಗಭೀರವಾಗಿದೆ. ಈತ ಈ ರೀತಿಯಾಗಿ ಕೃತ್ಯ ಎಸಗಲು ನಿರ್ದಿಷ್ಟ ಕಾರಣವು ಇಲ್ಲ. ಜೊತೆಗೆ ದಾಳಿ ನಡೆಸಿದ ವರದಿಗಾರರು ಅಥವಾ ಆ ತಾಯಿ ಹಾಗು ಮಗುವಿನ ಜೊತೆಗೂ ಯಾವುದೇ ರೀತಿಯ ಸಂಬಂಧ ಅಥವಾ ಸಂಪರ್ಕವಿಲ್ಲ. ಆದರೂ ಯಾಕೆ ಗುಂಡಿನ ದಾಳಿ ನಡೆಸಿದ್ದಾನೆಂದು ತನಿಖೆ ನಂತರ ತಿಳಿದು ಬರಬೇಕಷ್ಟೆ ಎಂದು ಅಧಿಕಾರಿ ಜಾನ್ ಮಿನಾ ಹೇಳಿದ್ದಾರೆ.
ಅಲ್ಲದೆ ಮಾಧ್ಯಮಗೋಷ್ಟಿ ಪ್ರಸ್ತುತ ಇಂತಹ ದಾಳಿಗಳಿಂದ ನಮ್ಮ ಸಮುದಾಯ ಮತ್ತು ನಮ್ಮ ಮಾಧ್ಯಮದವರಿಗೆ ಭಯಾನಕ ದಿನವಾಗಿದೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ನಮ್ಮ ಸಮುದಾಯದಲ್ಲಿ ಬಂದೂಕು ಹಿಂಸೆಗೆ ಯಾರು ಬಲಿಯಾಗಬಾರದು ಎಂದು ಬೇಸರ ವ್ಯಕ್ತಪಡಿಸಿದರು. ಇನ್ನು ಕೊಲ್ಲಲ್ಪಟ್ಟ ಪತ್ರಕರ್ತನಿಗೆ ಮತ್ತು ಫ್ಲೋರಿಡಾದ ಆರೆಂಜ್ ಕೌಂಟಿಯಲ್ಲಿ ಗಾಯಗೊಂಡ ಸಿಬ್ಬಂದಿ ಮತ್ತು ಇಡೀ ಮಾಧ್ಯಮ ತಂಡಕ್ಕೆ, ಸಾವನ್ನಪ್ಪಿದ ಪುಟ್ಟ ಮಗುವಿಗೆ ನಮ್ಮ ಹೃದಯಗಳು ಸಂದಿವೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಟ್ವೀಟ್‌ನಲ್ಲಿ ಘಟನೆ ಕುರಿತಾಗಿ ತಿಳಿಸಿದ್ದಾರೆ. ಇನ್ನು ಟ್ವಿಟರ್ ಬಳಕೆದಾರ ಎಲಿಸ್ ವಾಲರ್ ಆರೋಪಿ ಫ್ಲೋರಿಡಾ ಸುದ್ದಿ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದ್ದು ಆತ ಸಾವನ್ನಪ್ಪಿದ್ದಾನೆ. ಇನ್ನೊಬ್ಬ ವರದಿಗಾರ ಫೋಟೋಗ್ನ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.