ಕರ್ನಾಟಕ

karnataka

ETV Bharat / international

ಕ್ಯಾಲಿಪೋರ್ನಿಯಾ ಅಸೆಂಬ್ಲಿಗೆ ಮೊದಲ ಸಿಖ್ ಮಹಿಳೆ ಜಸ್ಮೀತ್ ಕೌರ್ ಬೈನ್ಸ್ ಆಯ್ಕೆ - ಅಮೇರಿಕಾ ಕ್ಯಾಲಿಪೋರ್ನಿಯಾ ಅಸೆಂಬ್ಲಿ

ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ ಕೆರ್ನಕೌಂಟಿಯ ಕ್ಷೇತ್ರದಿಂದ ಭಾರತೀಯ ಮೂಲದ ಸಿಖ್ ಮಹಿಳೆ, ವೈದ್ಯೆ ಜಸ್ಮೀತ್ ಕೌರ್ ಬೈನ್ಸ್ ಮೊದಲ ಬಾರಿಗೆ ಆಯ್ಕೆಗೊಂಡು ಇತಿಹಾಸ ಬರೆದಿದ್ದಾರೆ.

Indian origin Sikh woman jasmeet kaur bains
ಭಾರತೀಯ ಮೂಲದ ಸಿಖ್ ಮಹಿಳೆ ಜಸ್ಮೀತ್ ಕೌರ್ ಬೈನ್ಸ್

By

Published : Nov 11, 2022, 1:25 PM IST

ನ್ಯೂಯಾರ್ಕ್:ಕ್ಯಾಲಿಫೋರ್ನಿಯಾ ಅಸೆಂಬ್ಲಿಗೆ ಮೊದಲ ಬಾರಿಗೆ ಭಾರತೀಯ ಮೂಲದ ಸಿಖ್ ಮಹಿಳೆ, ವೈದ್ಯೆ ಜಸ್ಮೀತ್ ಕೌರ್ ಬೈನ್ಸ್ ಆಯ್ಕೆಯಾಗಿ, ಇತಿಹಾಸ ಬರೆದಿದ್ದಾರೆ. ಮಧ್ಯಂತರ ಚುನಾವಣೆಯ ಪ್ರಯುಕ್ತ ಕೆರ್ನಕೌಂಟಿಯ ಕ್ಷೇತ್ರದಲ್ಲಿ ಡೆಮಾಕ್ರಟ್ ಮತ್ತು ಡೆಮಾಕ್ರಟ್ ರೇಸ್‌ನಲ್ಲಿ ಇವರು ತಮ್ಮ ಪ್ರತಿಸ್ಪರ್ಧಿ ಲೆಟಿಸಿಯಾ ಪೆರೆಜ್‌ಗಿಂತ ಹೆಚ್ಚು ಮತಗಳನ್ನು ಪಡೆಯುವುದರೊಂದಿಗೆ ಗೆಲುವು ಸಾಧಿಸಿದರು.

ಉತ್ತರ ಕೆರ್ನ್ ಕೌಂಟಿ ನಗರದ ನಿವಾಸಿಯಾಗಿರುವ ಜಸ್ಮೀತ್ ಕೌರ್ ಬೈನ್ಸ್ ಪ್ರತಿಕ್ರಿಯಿಸಿ, "ನಾನು ಫಲಿತಾಂಶದಿಂದ ಉತ್ತೇಜನಗೊಂಡಿದ್ದೇನೆ. ಕೆರ್ನ್ ಕೌಂಟಿಯಾ ಜನರ ಬೆಂಬಲ ನನ್ನ ಹೆಚ್ಚು ಜವಾಬ್ದಾರಿಯುತ ವ್ಯಕ್ತಿಯನ್ನಾಗಿ ಮಾಡಿದೆ. ಉತ್ತಮ ಆಡಳಿತ ಒದಗಿಸುವುದು ನನ್ನ ಕನಸು" ಎಂದು ಬೇಕರ್ಸ್‌ಫೀಲ್ಡ್ ತಿಳಿಸಿದ್ದಾರೆ. ಜಸ್ಮೀತ್ ಕೌರ್ ಬೈನ್ಸ್ ಅವರ ತಂದೆ ಭಾರತೀಯ ಮೂಲದವರು.

ಇದನ್ನೂಓದಿ:ಅಮೆರಿಕ ಮಧ್ಯಂತರ ಚುನಾವಣೆ: ಇತಿಹಾಸ ಸೃಷ್ಟಿಸಿದ ಭಾರತೀಯ ಮೂಲದ ನಬೀಲಾ ಸೈಯದ್!

ABOUT THE AUTHOR

...view details