ಕರ್ನಾಟಕ

karnataka

ETV Bharat / international

ಇಂಗ್ಲೆಂಡ್​ನ ಆಕ್ಸ್‌ಫರ್ಡ್ ನಗರದಲ್ಲಿ ಮೊದಲ ಹಿಂದೂ ದೇವಾಲಯಕ್ಕೆ ಅನುಮೋದನೆ - ಪಾಳುಬಿದ್ದ ಕ್ರೀಡಾ ಪೆವಿಲಿಯನ್‌

ಲಂಡನ್​ನ ಮಾರ್ಸ್ಟನ್‌ನ ಕೋರ್ಟ್ ಪ್ಲೇಸ್ ಫಾರ್ಮ್‌ನಲ್ಲಿರುವ ಕ್ರೀಡಾ ಕೊಠಡಿಗಳನ್ನು ಆಕ್ಸ್‌ಫರ್ಡ್ ಹಿಂದೂ ಟೆಂಪಲ್ ಪ್ರಾಜೆಕ್ಟ್​ಗಾಗಿ ಸಿಟಿ ಕೌನ್ಸಿಲ್​ ಅನುಮೋದನೆ ನೀಡಿದೆ.

Oxford Hindu Temple Project Team
ಆಕ್ಸ್‌ಫರ್ಡ್ ಹಿಂದೂ ಟೆಂಪಲ್ ಪ್ರಾಜೆಕ್ಟ್ ತಂಡ

By

Published : Jul 11, 2023, 11:57 AM IST

Updated : Jul 11, 2023, 12:10 PM IST

ಲಂಡನ್(ಇಂಗ್ಲೆಂಡ್​):ಪಾಳುಬಿದ್ದ ಕ್ರೀಡಾ ಪೆವಿಲಿಯನ್‌ನಲ್ಲಿ ಬಟ್ಟೆ ಬದಲಾಯಿಸುವ ಕೊಠಡಿಗಳನ್ನು ಹಿಂದೂ ದೇವಾಲಯ ಮತ್ತು ಸಮುದಾಯ ಭವನವಾಗಿ ಪರಿವರ್ತಿಸುವ ಯೋಜನೆಗೆ ಮಧ್ಯ ದಕ್ಷಿಣ ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ನಲ್ಲಿರುವ ಸಿಟಿ ಕೌನ್ಸಿಲ್​ ಅನುಮೋದನೆ ನೀಡಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ಮಾರ್ಸ್ಟನ್‌ನ ಕೋರ್ಟ್ ಪ್ಲೇಸ್ ಫಾರ್ಮ್‌ನಲ್ಲಿರುವ ಕ್ರೀಡಾ ಕೊಠಡಿಗಳನ್ನು ಆಕ್ಸ್‌ಫರ್ಡ್ ಹಿಂದೂ ಟೆಂಪಲ್ ಪ್ರಾಜೆಕ್ಟ್​ಗಾಗಿ ಬದಲಾಯಿಸಲಾಗುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ದೇವಾಲಯದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆಂತರಿಕ ವಿನ್ಯಾಸದ ಯೋಜನೆಗಳನ್ನು ಸಲ್ಲಿಸುವುದು ಬಾಕಿಯಿದೆ. ಈ ಹೊಸ ರಚನೆಯ ದೇವಾಲಯದ ಕಟ್ಟಡದಲ್ಲಿ ಪೂಜಾ ಸ್ಥಳಕ್ಕೆ ಮತ್ತು ಸಮುದಾಯ ಕೂಟಗಳಿಗಾಗಿ ಎರಡು ಸಭಾಂಗಣಗಳನ್ನು ನಿರ್ಮಿಸಲಾಗುತ್ತದೆ. ಆಕ್ಸ್‌ಫರ್ಡ್ ಹಿಂದೂ ಟೆಂಪಲ್ ಪ್ರಾಜೆಕ್ಟ್‌ನ ಸಂಸ್ಥಾಪಕ ಅಧ್ಯಕ್ಷ ಡಾ ಜಿಯಾನ್ ಗೋಪಾಲ್ ಈ ಕುರಿತು ಪ್ರತಿಕ್ರಿಯಿಸಿ, ಕೋರ್ಟ್ ಪ್ಲೇಸ್ ಫಾರ್ಮ್‌ನಲ್ಲಿ ದೇವಾಲಯ ಕೇಂದ್ರವನ್ನು ನಿರ್ಮಿಸಲು ತುಂಬಾ ಉತ್ಸುಕನಾಗಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಹೆಮ್ಮೆಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಆಕ್ಸ್‌ಫರ್ಡ್ ಹಿಂದೂ ಟೆಂಪಲ್ ಪ್ರಾಜೆಕ್ಟ್ ತಂಡದವರು 15 ವರ್ಷಗಳಿಂದ ಹಿಂದು ದೇವಾಲಯಕ್ಕಾಗಿ ಸೂಕ್ತ ಕಟ್ಟಡಕ್ಕಾಗಿ ಹುಡುಕುತ್ತಿದ್ದರು. ಜೊತೆಗೆ ಸಹಾಯ ಮಾಡುವಂತೆ ಮಂಡಳಿಗೆ ಮನವಿ ಮಾಡಿದ್ದರು. ಇನ್ನು, ವಸತಿ ಕ್ಯಾಬಿನೆಟ್ ಸದಸ್ಯರಾದ ಕೌನ್ಸಿಲರ್ ಲಿಂಡಾ ಸ್ಮಿತ್, 'ಹೊಸದಾಗಿ ಅನುಮೋದಿಸಲಾದ ಯೋಜನೆಗಳು ಸೈಟ್‌ನ ಅದ್ಭುತ ಬಳಕೆಯನ್ನು ಮಾಡಲು ಪ್ರಸ್ತಾಪಿಸುತ್ತವೆ', ನಿರ್ಮಾಣವಾಗಲಿರುವ ಆಕ್ಸ್‌ಫರ್ಡ್‌ಶೈರ್‌ನ ಏಕೈಕ ಹಿಂದೂ ದೇವಾಲಯ ವ್ಯಾಪಕವಾಗಿ ಸಾರ್ವಜನಿಕ ಚಟುವಟಿಕೆಗಳಿಗೆ ಸಹಾಯವಾಗಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಲಂಡನ್​ನಲ್ಲಿ ಯಕ್ಷಗಾನ ಶೈಲಿಯ ತಾಂಡವ ನೃತ್ಯ- ವಿಡಿಯೋ ನೋಡಿ

Last Updated : Jul 11, 2023, 12:10 PM IST

ABOUT THE AUTHOR

...view details