ಕರ್ನಾಟಕ

karnataka

ETV Bharat / international

ನೋಡಿ: 15 ಸೆಕೆಂಡ್‌ ವಿಡಿಯೋಗಾಗಿ ಬೆಟ್ಟಕ್ಕೆ ಬೆಂಕಿ ಹಚ್ಚಿ ಪ್ರತಿಭೆ ಪ್ರದರ್ಶಿಸಿದ ಟಿಕ್‌ಟಾಕ್‌ ತಾರೆ! - ಹೊಸ ಸಮಸ್ಯೆಗಳನ್ನು ಎದುರಿಸುತ್ತಿರುವ ಪಾಕ್ ಟಿಕ್​ಟಾಕ್​ ಸ್ಟಾರ್​

ಸೋಶಿಯಲ್​ ಮೀಡಿಯಾ ತಾರೆಯೊಬ್ಬಳು ಟಿಕ್​​ಟಾಕ್​ ವಿಡಿಯೋಗಾಗಿ ಬೆಟ್ಟದಲ್ಲಿ ಉರಿಯುತ್ತಿರುವ ಬೆಂಕಿ ಮುಂದೆ ಪೋಸ್​ ಕೊಟ್ಟಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

Pak TikTok Star Faces Backlash Over Forest Fire Clip  Pak TikTok Star news  Pak TikTok Star Faces new problems  Humaira Asghar post issue  ಕಾಡ್ಗಿಚ್ಚಿನ ಮುಂದೆ ಫೋಸ್​ ಕೊಟ್ಟ ಟಿಕ್​ಟಾಕ್​ ಸ್ಟಾರ್​ ಅಸ್ಗರ್​ ಹೊಸ ಸಮಸ್ಯೆಗಳನ್ನು ಎದುರಿಸುತ್ತಿರುವ ಪಾಕ್ ಟಿಕ್​ಟಾಕ್​ ಸ್ಟಾರ್​ ಪಾಕ್​ ಟಿಕ್​ಟಾಕ್​ ಸುದ್ದಿ
ನೆಟ್ಟಿಗರಿಂದ ಟೀಕಾ ಪ್ರಹಾರ

By

Published : May 18, 2022, 12:33 PM IST

ಇಸ್ಲಾಮಾಬಾದ್: ಲಕ್ಷಾಂತರ ಹಿಂಬಾಲಕರನ್ನು​ ಹೊಂದಿರುವ ಪಾಕಿಸ್ತಾನದ ಸಾಮಾಜಿಕ ಜಾಲತಾಣ ತಾರೆಯೊಬ್ಬಳು ಬೆಟ್ಟಕ್ಕೆ ಬೆಂಕಿ ಹಚ್ಚಿ, ಆ ಬೆಂಕಿಯ ಮುಂದೆ ಟಿಕ್‌ಟಾಕ್ ವಿಡಿಯೋಗಾಗಿ ಪೋಸ್ ನೀಡಿದ್ದಾಳೆ. ಬಳಿಕ ವಿಡಿಯೋ ಪೋಸ್ಟ್​ ಮಾಡಿದ್ದಾಳೆ. ಪರಿಸರ ಕಾಳಜಿ ಮರೆತು ಬೇಜವಾಬ್ದಾರಿ ಪ್ರದರ್ಶಿಸಿದ ಯುವತಿಯ ನಡೆಗೆ ನೆಟ್ಟಿಗರು ಟೀಕೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.

ಹುಮೈರಾ ಅಸ್ಗರ್ ಎಂಬಾಕೆ ಸಿಲ್ವರ್​ ಬಾಲ್ ಗೌನ್‌ ದಿರಿಸಿನಲ್ಲಿ ಬೆಂಕಿಯಿಂದ ಉರಿಯುತ್ತಿರುವ ಬೆಟ್ಟದ ಮುಂದೆ ನಡೆದುಕೊಂಡು ಬರುತ್ತಿರುವ ವಿಡಿಯೋ ಕ್ಲಿಪ್ ಅನ್ನು ನೀವು ನೋಡಬಹುದು. ಇದರ ಜೊತೆಗೆ, ‘ನಾನು ಎಲ್ಲಿರುತ್ತೇನೋ ಅಲ್ಲಿ ಬೆಂಕಿ ಸ್ಫೋಟಗೊಳ್ಳುತ್ತದೆ’ ಎಂದು ಕ್ಯಾಪ್ಷನ್​ ಬರೆದಿದ್ದಾಳೆ.

ಇದನ್ನೂ ಓದಿ:ದಕ್ಷಿಣ ಕೊರಿಯಾದಲ್ಲಿ ಭಾರಿ ಕಾಳ್ಗಿಚ್ಚಿಗೆ 90 ಮನೆಗಳಿಗೆ ಹಾನಿ, 6 ಸಾವಿರ ಮಂದಿ ರಕ್ಷಣೆ

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ಕೆಲವು ಭಾಗಗಳಲ್ಲಿ ತಾಪಮಾನವು 51 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಜನಸಾಮಾನ್ಯರು ತಾಪ ತಾಳಲಾರದೆ ತತ್ತರಿಸುತ್ತಿದ್ದಾರೆ.

ABOUT THE AUTHOR

...view details