ಕರ್ನಾಟಕ

karnataka

ETV Bharat / international

ರಷ್ಯಾದ ಬ್ಯುಸಿನೆಸ್​ ಸೆಂಟರ್​​ಗೆ ಬೆಂಕಿ: ಜನರ ರಕ್ಷಣಾ ಕಾರ್ಯಕ್ಕೆ 3 ಹೆಲಿಕಾಪ್ಟರ್‌ ಬಳಕೆ - ರಷ್ಯಾ ರಾಜಧಾನಿ ಮಾಸ್ಕೋ

ಮಾಸ್ಕೋದ ಬ್ಯುಸಿನೆಸ್​ ಸೆಂಟರ್​​ನಲ್ಲಿ ಭಾರಿ ಅಗ್ನಿ ದುರಂತ ನಡೆದಿದ್ದು, ಹಲವರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇದುವರೆಗೆ 125 ಜನರನ್ನು ರಕ್ಷಿಸಲಾಗಿದೆ.

ರಷ್ಯಾದ ಬ್ಯುಸಿನೆಸ್​ ಸೆಂಟರ್​​ಗೆ ಬೆಂಕಿ
Fire engulfs Moscow business center

By

Published : Jun 3, 2022, 4:03 PM IST

ಮಾಸ್ಕೋ (ರಷ್ಯಾ): ರಷ್ಯಾ ರಾಜಧಾನಿ ಮಾಸ್ಕೋದ ಬ್ಯುಸಿನೆಸ್​ ಸೆಂಟರ್​​ನಲ್ಲಿ ಇಂದು ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ಹಲವರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬೆಂಕಿ ನಂದಿಸಲು ಕಾರ್ಯದಲ್ಲಿ 180 ಅಗ್ನಿಶಾಮಕದ ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ. ಅಲ್ಲದೇ, ಜನರನ್ನು ರಕ್ಷಣೆ ಮಾಡಲು ಮೂರು ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡಲಾಗುತ್ತಿದೆ.

ಬೆಂಕಿ ಕಾಣಸಿಕೊಂಡ ಕಟ್ಟಡದಿಂದ ಇದುವರೆಗೆ 125 ಜನರನ್ನು ರಕ್ಷಿಸಲಾಗಿದೆ. ಇದರಲ್ಲಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಸಚಿವ ಅಲೆಕ್ಸಾಂಡರ್ ಕುರೆಂಕೋವ್ ಖುದ್ದು ರಕ್ಷಣಾ ಕಾರ್ಯದ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಈ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ, ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ.

ಇದನ್ನೂ ಓದಿ:ಶಸ್ತ್ರಾಸ್ತ್ರಗಳನ್ನು ಖರೀದಿಸಲು ಕನಿಷ್ಠ ವಯಸ್ಸನ್ನು 18 ರಿಂದ 21ಕ್ಕೆ ಹೆಚ್ಚಿಸಬೇಕು : ಜೋ ಬೈಡನ್​​

ABOUT THE AUTHOR

...view details