ಬೀಜಿಂಗ್:ಮಧ್ಯ ಚೀನಾದ ಹೆನಾನ್ ಪ್ರಾಂತ್ಯದಲ್ಲಿ ರಾಸಾಯನಿಕಗಳು ಮತ್ತು ಇತರ ಕೈಗಾರಿಕಾ ಸರಕು ಕೈಗಾರಿಕೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು, 36 ಜನರು ಸಾವನ್ನಪ್ಪಿದ್ದಾರೆ. ಇಬ್ಬರು ನಾಪತ್ತೆಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚೀನಾದ ಕೈಗಾರಿಕೆಯಲ್ಲಿ ಭಾರಿ ಅಗ್ನಿ ಅವಘಡ: 36 ಮಂದಿ ಸಾವು
ಸೋಮವಾರ ಸಂಜೆ ಮಧ್ಯ ಚೀನಾದ ಹೆನಾನ್ ಪ್ರಾಂತ್ಯದ ಅನ್ಯಾಂಗ್ ನಗರದ ಕೈಗಾರಿಕೆಯಲ್ಲಿ ದುರ್ಘಟನೆ ಸಂಭವಿಸಿದೆ.
ಸಾಂದರ್ಭಿಕ ಚಿತ್ರ
ಚೀನಾದಲ್ಲಿ ನಡೆದ ಪ್ರಮುಖ ದುರಂತಗಳು:
- ಕಳೆದ ವರ್ಷ ಚೀನಾದಲ್ಲಿ ನಡೆದ ಅನಿಲ ಸ್ಫೋಟದಲ್ಲಿ 25 ಜನರು ಮೃತಪಟ್ಟಿದ್ದರು.
- ಮಾರ್ಚ್ 2019ರಲ್ಲಿ ಶಾಂಘೈನಿಂದ 260 ಕಿ.ಮೀ. ದೂರದಲ್ಲಿರುವ ಯಾಂಚೆಂಗ್‌ನಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 78 ಜನರು ಮೃತಪಟ್ಟಿದ್ದರು. ಇದರಿಂದ ಹಲವಾರು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಮನೆಗಳು ಧ್ವಂಸವಾಗಿತ್ತು.
- ಉತ್ತರ ಬಂದರು ನಗರವಾದ ಟಿಯಾಂಜಿನ್‌ನಲ್ಲಿರುವ ರಾಸಾಯನಿಕ ಗೋದಾಮಿನಲ್ಲಿ 2015ರಲ್ಲಿ ಸಂಭವಿಸಿದ ಬೃಹತ್ ಸ್ಫೋಟದಲ್ಲಿ 173 ಜನರು ಸಾವನ್ನಪ್ಪಿದರು. ಅವರಲ್ಲಿ ಹೆಚ್ಚಿನವರು ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು ಸೇರಿದ್ದರು.
ಇದನ್ನೂ ಓದಿ:ಮಧ್ಯ ಕೊಲಂಬಿಯಾದಲ್ಲಿ ವಿಮಾನ ಪತನ: 8 ಮಂದಿ ದುರ್ಮರಣ