ದುಬೈ(ಯುಎಇ): ವಿಶ್ವದ ಅತಿ ಎತ್ತರದ ಕಟ್ಟಡ ದುಬೈನ ಬುರ್ಜ್ ಖಲೀಫಾ ಬಳಿಯಲ್ಲೇ ಇರುವ 35 ಅಂತಸ್ತಿನ ಬಹುಮಹಡಿ ಕಟ್ಟಡದಲ್ಲಿ ಸೋಮವಾರ ಮುಂಜಾನೆ ಬೆಂಕಿ ಅವಘಡ ಉಂಟಾಯಿತು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಹೀಗಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ದುಬೈ ಬುರ್ಜ್ ಖಲೀಫಾ ಪಕ್ಕದ 35 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ
ದುಬೈನಲ್ಲಿರುವ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಬಳಿಯಿರುವ 35 ಅಂತಸ್ತಿನ ಕಟ್ಟಡದಲ್ಲಿ ಸೋಮವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿತು.
ಬುರ್ಜ್ ಖಲೀಫಾ ಬಳಿಯಿರುವ ಕಟ್ಟಡದಲ್ಲಿ ಅಗ್ನಿ ಅವಘಡ
ಇತ್ತೀಚಿನ ವರ್ಷಗಳಲ್ಲಿ ಗಗನಚುಂಬಿ ಕಟ್ಟಡಗಳೇ ಹೆಚ್ಚಿರುವ ದುಬೈನ ಬಹುಮಹಡಿ ಕಟ್ಟಡಗಳಲ್ಲಿ ಬೆಂಕಿ ಅವಘಡಗಳು ಹೆಚ್ಚುತ್ತಿವೆ. 2015ದ ಹೊಸ ವರ್ಷದ ಮುನ್ನಾ ದಿನದಂದು ಬುರ್ಜ್ ಖಲೀಫಾ ಸನಿಹದಲ್ಲಿರುವ ದುಬೈನ ಅತ್ಯಂತ ದುಬಾರಿ ಹೋಟೆಲ್ಗಳಲ್ಲಿ ಒಂದಾದ ಅಡ್ರೆಸ್ ಡೌನ್‌ಟೌನ್‌ನಲ್ಲಿಯೂ ಅಗ್ನಿ ಆಕಸ್ಮಿಕ ಸಂಭವಿಸಿತ್ತು.
ಇದನ್ನೂ ಓದಿ:ವೃಂದಾವನ ಹೋಟೆಲ್ನಲ್ಲಿ ಅಗ್ನಿ ಅವಘಡ.. ಇಬ್ಬರು ಸಿಬ್ಬಂದಿ ಮಲಗಿದ್ದಲ್ಲೇ ಸಜೀವದಹನ