ಬರ್ಲಿನ್(ಜರ್ಮನಿ) :ಇಲ್ಲಿ ವಾಸಿಸುತ್ತಿದ್ದ ಮಹಿಳೆಯೊಬ್ಬರಿಗೆ ತಮ್ಮ ಜಮೀನಿನಲ್ಲೇ ವಿಷಕಾರಿ ಹಾವೊಂದು ಕಚ್ಚಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಓಡಿ ಬಂದಿದ್ದಾರೆ. ಆ ವೇಳೆ, ಮಹಿಳೆ ತಮ್ಮ ಜಮೀನಿನಲ್ಲಿ ವಿಷಕಾರಿ ಹಾವುಗಳನ್ನು ಸಂಗ್ರಹಿಸಿಟ್ಟಿರುವ ವಿಷಯ ಬೆಳಕಿಗೆ ಬಂದಿದೆ. ಮಹಿಳೆಗೆ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಿದ ಬಳಿಕ ಆಕೆಯ ಫಾರ್ಮ್ಗೆ ಭೇಟಿ ನೀಡಿದ ಜರ್ಮನಿ ಪೊಲೀಸರು ಅಲ್ಲಿದ್ದ 110ಕ್ಕೂ ಹೆಚ್ಚಿನ ಅಪಾಯಕಾರಿ ಹಾವುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಮುಂಜಾನೆ 35 ವರ್ಷದ ಮಹಿಳೆಯೊಬ್ಬರು ಹ್ಯಾನೋವರ್ ಬಳಿಯ ಸಾಲ್ಜ್ಗಿಟ್ಟರ್ನಲ್ಲಿರುವ ಆಸ್ಪತ್ರೆಗೆ ಓಡಿ ಬಂದು, ತನ್ನ ರ್ಯಾಟಲ್ ಸ್ನೇಕ್ಗಳಲ್ಲಿ ಒಂದು ತನ್ನ ಬೆರಳಿಗೆ ಕಚ್ಚಿದೆ. ಚಿಕಿತ್ಸೆ ನೀಡಿ ಎಂದು ಅಲ್ಲಿನ ವೈದ್ಯರಿಗೆ ತಿಳಿಸಿದ್ದಾರೆ. ಮಹಿಳೆಯ ಸ್ಥಿತಿ ಹದಗೆಟ್ಟಾಗ ಅಲ್ಲಿನ ಅಧಿಕಾರಿಗಳು ತರಾತುರಿಯಲ್ಲಿ ಹ್ಯಾಂಬರ್ಗ್ನ ವಿಶೇಷ ಸಂಸ್ಥೆಯಿಂದ ಔಷಧ ತರಿಸಿ ಚಿಕಿತ್ಸೆ ನೀಡಿದ್ದಾರೆ.