ವಾಷಿಂಗ್ಟನ್(ಅಮೆರಿಕ):ಭದ್ರತಾ ಕಾರಣಗಳಿಗಾಗಿ ಭಾರತದಲ್ಲಿ ನಿಷೇಧಕ್ಕೊಳಗಾಗಿರುವ ಚೀನಾ ಮೂಲದ ಟಿಕ್‌ಟಾಕ್ ಆ್ಯಪ್ ಅಮೆರಿಕದಲ್ಲೂ ಗೌಪ್ಯ ಮಾಹಿತಿಗಳನ್ನು ಸೋರಿಕೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದು, ಆ್ಯಪ್ ಚೀನಾ ಸರ್ಕಾರದ ಕೈಯಲ್ಲಿದೆ ಎಂದು ಹೇಳಿದ್ದಾರೆ.
ರೀಲ್ಸ್ಗಳನ್ನು ಮಾಡಲು ಅವಕಾಶವಿರುವ ಟಿಕ್‌ಟಾಕ್ ಬೈಟ್‌ಡ್ಯಾನ್ಸ್ ಎಂಬ ಖಾಸಗಿ ಸಂಸ್ಥೆಯ ಒಡೆತನದಲ್ಲಿದ್ದರೂ, ಅದನ್ನು ಚೀನಾ ಸರ್ಕಾರ ನಿರ್ವಹಿಸುತ್ತಿದೆ. ದೇಶದ ರಹಸ್ಯ ಮಾಹಿತಿ ಮತ್ತು ಜನರ ದಾಖಲೆಗಳನ್ನು ಕಲೆ ಹಾಕುತ್ತಿದೆ. ಇದು ಭದ್ರತೆಗೆ ಧಕ್ಕೆ ತರಲಿದೆ ಎಂದು ಎಫ್‌ಬಿಐ ನಿರ್ದೇಶಕ ಕ್ರಿಸ್ ವ್ರೇ ಹೇಳಿದ್ದಾರೆ.
ಅಮೆರಿಕದ ಡೇಟಾವನ್ನು ಸಂಗ್ರಹಿಸಿ ಚೀನಾ ಸರ್ಕಾರ ಬಳಸಿಕೊಳ್ಳುತ್ತಿದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಅಗತ್ಯ ಬಿದ್ದಲ್ಲಿ ಆ್ಯಪ್ ಅನ್ನು ದೇಶದಲ್ಲಿ ನಿಷೇಧಕ್ಕೆ ಒಳಪಡಿಸಬೇಕು ಎಂದು ಅಧಿಕಾರಿ ಸಲಹೆ ನೀಡಿದ್ದಾರೆ.