ಕರ್ನಾಟಕ

karnataka

ETV Bharat / international

700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಂಚಿಸಿದ ಪ್ರಕರಣ: ಕೆನಡಾಕ್ಕೆ ಕಳುಹಿಸಿದ್ದ ಟ್ರಾವೆಲ್ ಏಜೆಂಟ್ ಬಂಧನ!! - ಭಾರತೀಯ ವಿದ್ಯಾರ್ಥಿಗಳಿಗೆ ನಕಲಿ ಸ್ವೀಕಾರ ಪತ್ರ

ನಕಲಿ ದಾಖಲೆಗಳ ಮೇಲೆ ಭಾರತೀಯ ವಿದ್ಯಾರ್ಥಿಗಳನ್ನು ಕೆನಡಾಕ್ಕೆ ಕಳುಹಿಸಿದ ಟ್ರಾವೆಲ್ ಏಜೆಂಟ್ ಬ್ರಜೇಶ್ ಮಿಶ್ರಾ ನನ್ನು ಕೆನಾಡದಲ್ಲಿ ಬಂಧಿಸಲಾಗಿದೆ.

Fake admission letter scandal case  travel agent arrest in Canada  Canada Punjab student case  700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಂಚಿಸಿದ ಪ್ರಕರಣ  ಕೆನಡಾಕ್ಕೆ ಕಳುಹಿಸಿದ್ದ ಟ್ರಾವೆಲ್ ಏಜೆಂಟ್ ಬಂಧನ  ಟ್ರಾವೆಲ್ ಏಜೆಂಟ್ ಬ್ರಜೇಶ್ ಮಿಶ್ರಾ  ವಿದೇಶಕ್ಕೆ ಕಳುಹಿಸಿ ವಂಚಿಸಿದ ಟ್ರಾವೆಲ್ ಏಜೆಂಟ್  ಭಾರತೀಯ ವಿದ್ಯಾರ್ಥಿಗಳಿಗೆ ನಕಲಿ ಸ್ವೀಕಾರ ಪತ್ರ  ಬ್ರಿಜೇಶ್ ಮಿಶ್ರಾ ಭಾಗಿಯಾಗಿದ್ದಾರೆ ಎಂಬ ಆರೋಪ
700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಂಚಿಸಿದ ಪ್ರಕರಣ

By

Published : Jun 24, 2023, 1:37 PM IST

ಚಂಡೀಗಢ, ಪಂಜಾಬ್​: 700ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವಿದೇಶಕ್ಕೆ ಕಳುಹಿಸಿ ವಂಚಿಸಿದ ಟ್ರಾವೆಲ್ ಏಜೆಂಟ್ ಬಗ್ಗೆ ಕೆನಡಾದಲ್ಲಿ ದೊಡ್ಡ ಸುದ್ದಿ ಹೊರಬೀಳುತ್ತಿದೆ. ನಕಲಿ ದಾಖಲೆಗಳ ಮೇಲೆ ಕೆನಡಾಕ್ಕೆ ಕಳುಹಿಸಿದ ಟ್ರಾವೆಲ್ ಏಜೆಂಟ್ ಬ್ರಜೇಶ್ ಮಿಶ್ರಾ ಅವರನ್ನು ಕೆನಡಾದಲ್ಲಿ ಬಂಧಿಸಲಾಗಿದೆ. ಗಮನಾರ್ಹ ವಿಷಯ ಎಂದರೆ ಟ್ರಾವೆಲ್ ಏಜೆಂಟ್ ಬ್ರಜೇಶ್ ಮಿಶ್ರಾ ಅವರ ಪಾಲುದಾರನನ್ನು ಈಗಾಗಲೇ ಜಲಂಧರ್​​ನಲ್ಲಿ ಬಂಧಿಸಲಾಗಿದೆ.

ಬ್ರಿಜೇಶ್ ಮಿಶ್ರಾ ಅವರು ಜಲಂಧರ್‌ನಲ್ಲಿ ವಲಸೆ ಏಜೆನ್ಸಿಯನ್ನು ನಡೆಸುತ್ತಿದ್ದಾರೆ. ಕೆನಡಾದಲ್ಲಿ ಪಂಜಾಬ್​ ವಿದ್ಯಾರ್ಥಿಗಳಿಗೆ ವಂಚಿಸಿದ ಪ್ರಕರಣ ಬೆಳಕಿಗೆ ಬರುವ ಮುನ್ನವೇ ಆತ ನಾಪತ್ತೆಯಾಗಿದ್ದ. ನಕಲಿ ಕಾಲೇಜು ಪ್ರವೇಶ ಕಾರ್ಡ್ ಹಗರಣದಿಂದಾಗಿ ಪಂಜಾಬ್ ಮತ್ತು ಭಾರತದ ಇತರ ರಾಜ್ಯಗಳ ವಿದ್ಯಾರ್ಥಿಗಳು ಗಡಿಪಾರು ಸಮಸ್ಯೆ ಎದುರಿಸುತ್ತಿರುವುದು ಗಮನಾರ್ಹ.

ಕೆನಡಾದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಭಾರತೀಯ ವಿದ್ಯಾರ್ಥಿಗಳಿಗೆ ನಕಲಿ ಸ್ವೀಕಾರ ಪತ್ರಗಳನ್ನು ನೀಡುವಲ್ಲಿ ಬ್ರಿಜೇಶ್ ಮಿಶ್ರಾ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ. ಇದರ ಸಹಚರ ರಾಹುಲ್ ಭಾರ್ಗವನನ್ನು ಈಗಾಗಲೇ ಮಾರ್ಚ್ 28 ರಂದು ಜಲಂಧರ್‌ನಲ್ಲಿ ಬಂಧಿಸಲಾಗಿದೆ. ಎಲ್ಲಾ ಭಾರತೀಯ ವಿದ್ಯಾರ್ಥಿಗಳು 3 ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದಲ್ಲಿ ಕೆನಡಾಕ್ಕೆ ಹೋಗಿದ್ದರು. ಶಾಶ್ವತ ನಿವಾಸಕ್ಕೆ ಅರ್ಜಿ ಸಲ್ಲಿಸಿದಾಗ ವಂಚನೆ ನಡೆದಿರುವುದು ಗೊತ್ತಾಗಿದೆ. ಸಂಸ್ಥೆಗಳು ನೀಡಿದ ಆರಂಭಿಕ ಆಫರ್ ಲೆಟರ್‌ಗಳು ನಕಲಿ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಓದಿ:700 ಭಾರತೀಯ ವಿದ್ಯಾರ್ಥಿಗಳ ಗಡಿಪಾರು ಆದೇಶ ರದ್ದು ಮಾಡುವಂತೆ ಕೆನಡಾ ಸಂಸದೀಯ ಸಮಿತಿ ಒತ್ತಾಯ

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ್ದ ಕೆನಡಾ ಸರ್ಕಾರ: ಉನ್ನತ ಶಿಕ್ಷಣ ಅಭ್ಯಾಸಕ್ಕೆ ಎಂದು ಕೆನಡಾಕ್ಕೆ ತೆರಳಿ ವಂಚನೆಗೊಳಗಾಗಿ ಗಡೀಪಾರು ಭೀತಿಯಲ್ಲಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ಅಲ್ಲಿನ ಸರ್ಕಾರ ಇತ್ತೀಚೆಗೆ ಸಿಹಿ ಸುದ್ದಿಯೊಂದು ನೀಡಿತ್ತು. ನಕಲಿ ಏಜೆಂಟರಿಂದ ವಂಚನೆಗೊಳಗಾದ ನಿಜವಾದ ವಿದ್ಯಾರ್ಥಿಗಳನ್ನು ಗಡೀಪಾರು ಮಾಡಲಾಗುವುದಿಲ್ಲ. ಅಧ್ಯಯನಕ್ಕೆ ಅಡ್ಡಿ ಉಂಟಾಗದಿರಲಿ ಎಂಬ ಕಾರಣಕ್ಕಾಗಿ ಕೆನಡಾದಲ್ಲಿ ತಾತ್ಕಾಲಿಕ ಉಳಿವಿಗೆ ಪರವಾನಗಿಗಳನ್ನು ನೀಡಲಾಗುವುದು ಎಂದು ಕೆನಡಾದ ವಲಸೆ ಸಚಿವ ಸೀನ್ ಫ್ರೇಸರ್ ಹೇಳಿದ್ದರು.

ವಂಚನೆಯಲ್ಲಿ ಭಾಗಿಯಾಗಿಲ್ಲದ ಭಾರತ ಸೇರಿದಂತೆ ಯಾವುದೇ ದೇಶದ ವಿದ್ಯಾರ್ಥಿಗಳು ಗಡೀಪಾರು ಆಗುವುದನ್ನು ಕೆನಡಾ ಸರ್ಕಾರ ತಡೆ ಹಿಡಿದಿದೆ. ವಿದ್ಯಾರ್ಥಿಗಳು ಅಧ್ಯಯನ ಮಾಡುವ ನಿಜವಾದ ಉದ್ದೇಶದಿಂದ ಇಲ್ಲಿಗೆ ಬಂದಿದ್ದಾರೆ. ನಕಲಿ ಏಜೆಂಟ್​ಗಳ ದಾಳಕೆ ಸಿಲುಕಿ ಮೋಸದ ದಾಖಲಾತಿಗಳ ಬಳಕೆಯ ಜ್ಞಾನವಿಲ್ಲದೇ ಈ ಹಗರಣದಲ್ಲಿ ಸಿಲುಕಿರುವುದು ಸ್ಪಷ್ಟವಾಗಿದೆ. ಹೀಗಾಗಿ ಅಂತಹ ವಿದ್ಯಾರ್ಥಿಗಳಿಗೆ ದೇಶದಲ್ಲಿ ತಾತ್ಕಾಲಿಕವಾಗಿ ಉಳಿದುಕೊಳ್ಳಲು ಪರವಾನಗಿ ಪತ್ರವನ್ನು ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದರು.

ಅವರ ಈ ಒಂದು ಆದೇಶದಿಂದಾಗಿ ವಂಚನೆಗೊಳದಾದ ವಿದ್ಯಾರ್ಥಿಗಳು ಇಲ್ಲಿಯೇ ಉಳಿದು ಶಿಕ್ಷಣವನ್ನು ಮುಂದುವರಿಸುವುದನ್ನು ಖಚಿತಪಡಿಸುತ್ತದೆ. ಅವರು ಕೆನಡಾವನ್ನು ಮರು ಪ್ರವೇಶಿಸುವ 5 ವರ್ಷಗಳ ಕಾಲ ನಿಷೇಧಕ್ಕೆ ಒಳಪಡುವುದಿಲ್ಲ ಎಂದು ಕೆನಡಾದ ವಲಸೆ ಸಚಿವರು ಭರವಸೆ ನೀಡಿದ್ದರು.

ಅಕ್ರಮದಲ್ಲಿ ಭಾಗಿಯಾಗಿದ್ದರೆ ಶಿಕ್ಷೆ:ಇದೇ ವೇಳೆ ಅಕ್ರಮವಾಗಿ ದೇಶ ಪ್ರವೇಶಿಸಿದ್ದರೆ, ಅಂಥವರು ಶಿಕ್ಷೆಗೆ ಒಳಗಾಗಲಿದ್ದಾರೆ. ಮೋಸದಲ್ಲಿ ಭಾಗಿಯಾಗಿದ್ದರೆ ಅವರ ವಿರುದ್ಧದ ಕ್ರಮಗಳಿಗೆ ಅವರೇ ಜವಾಗ್ದಾರರಾಗಿರುತ್ತಾರೆ. ಕೆನಡಾದ ಕಾನೂನಿನ ಸಂಪೂರ್ಣ ಪರಿಣಾಮಗಳನ್ನು ಅವರು ಎದುರಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದರು.

ABOUT THE AUTHOR

...view details