ಮಾಸ್ಕೋ(ರಷ್ಯಾ): ಅಜೆರ್ಬೈಜಾನ್ ಮತ್ತು ಅರ್ಮೇನಿಯಾ ರಸ್ತೆ ವಿವಾದ ಸಂಬಂಧ ಸುಮಾರು 6,800 ಸೈನಿಕರ ಸಾವು ಮತ್ತು ಸುಮಾರು 90,000 ನಾಗರಿಕರನ್ನು ಸ್ಥಳಾಂತರಿಸಿ ಯುದ್ಧವನ್ನು ಕೊನೆಗೊಳಿಸಿದ ಎರಡು ವರ್ಷಗಳ ನಂತರ, ಲಾಚಿನ್ ಕಾರಿಡಾರ್ ಎಂದು ಕರೆಯಲ್ಪಡುವ ಆರು ಕಿಲೋಮೀಟರ್ (ಸುಮಾರು ನಾಲ್ಕು ಮೈಲಿ) ರಸ್ತೆಯ ವಿವಾದದಲ್ಲಿ ದೇಶಗಳ ನಡುವೆ ಮತ್ತೆ ಉದ್ವಿಗ್ನತೆ ಹೆಚ್ಚಾಗಿದೆ. ಅರ್ಮೇನಿಯಾ ಮತ್ತು ಅಜೆರ್ಬೈಜಾನ್ನ ಜನಾಂಗೀಯ ಅರ್ಮೇನಿಯನ್ ನಾಗೋರ್ನೊ-ಕರಬಾಖ್ ಪ್ರದೇಶದ ನಡುವಿನ ಏಕೈಕ ಭೂ ಸಂಪರ್ಕವಾಗಿರುವ ವೈಂಡಿಂಗ್ ರಸ್ತೆಯನ್ನು ಡಿಸೆಂಬರ್ ಮಧ್ಯಭಾಗದಿಂದ ಪರಿಸರ ಕಾರ್ಯಕರ್ತರು ಎಂದು ಹೇಳಿಕೊಳ್ಳುವ ಪ್ರತಿಭಟನಾಕಾರರು ನಿರ್ಬಂಧಿಸಿದ್ದಾರೆ. ಈ ಮೂಲಕ ನಾಗೋರ್ನೊ-ಕರಾಬಖ್‌ನ 120,000 ಜನರಿಗೆ ಆಹಾರ ಪೂರೈಕೆಗೆ ಬೆದರಿಕೆ ಹಾಕಿದ್ದಾರೆ.
ಈ ವಿವಾದವು ಹೊಸ ಕದನ ಭುಗಿಲೇಳಬಹುದು ಎಂಬ ಆತಂಕವನ್ನು ಹುಟ್ಟುಹಾಕುತ್ತಿದೆ. ಇದು ಅರ್ಮೇನಿಯಾದ ದೀರ್ಘಕಾಲದ ಉತ್ಸಾಹಭರಿತ ರಾಜಕೀಯವನ್ನು ಅಸ್ಥಿರಗೊಳಿಸಬಹುದಾಗಿದೆ. ಅಲ್ಲದೆ, ಇದು ರಷ್ಯಾದ ಸಾಮರ್ಥ್ಯ ಮತ್ತು ಉದ್ದೇಶಗಳ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತಿದೆ, ಅದರ ಶಾಂತಿಪಾಲನಾ ಪಡೆಗಳು ರಸ್ತೆಯನ್ನು ಸುರಕ್ಷಿತವಾಗಿಡುವ ಜವಾಬ್ದಾರಿಯನ್ನು ಹೊಂದಿವೆ.
ವಿವಾದದ ಮೂಲಗಳು:ಯುಎಸ್ ರಾಜ್ಯವಾದ ಡೆಲಾವೇರ್ ಗಿಂತ ಚಿಕ್ಕದಾದ ಪರ್ವತ ನಾಗೋರ್ನೊ-ಕರಬಾಖ್, ಇದು ಅರ್ಮೇನಿಯನ್ನರು ಮತ್ತು ಅಜೆರಿಸ್ ಇಬ್ಬರಿಗೂ ಗಮನಾರ್ಹ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಇದು ಸೋವಿಯತ್ ಒಕ್ಕೂಟದ ಭಾಗವಾಗಿದ್ದಾಗ ಅಜೆರ್ಬೈಜಾನ್ ಗಣನೀಯ ಪ್ರಮಾಣದ ಸ್ವಾಯತ್ತತೆಯನ್ನು ಹೊಂದಿತ್ತು. ಸೋವಿಯತ್ ಒಕ್ಕೂಟವು ಹದಗೆಡುತ್ತಿದ್ದಂತೆ, ಅರ್ಮೇನಿಯನ್ ಪ್ರತ್ಯೇಕತಾವಾದಿ ಅಶಾಂತಿ ಭುಗಿಲೆದ್ದಿತು, ನಂತರ ಸೋವಿಯತ್ ಒಕ್ಕೂಟ ಕುಸಿತದಿಂದ ಪೂರ್ಣ ಪ್ರಮಾಣದ ಯುದ್ಧವಾಗಿ ಮಾರ್ಪಟ್ಟಿತ್ತು.
1994ರ ಹೋರಾಟದ ಅಂತ್ಯದ ವೇಳೆಗೆ ಅಜೆರಿ ಜನಸಂಖ್ಯೆಯ ಹೆಚ್ಚಿನ ಭಾಗವನ್ನು ಹೊರಹಾಕಲಾಯಿತು. ಈ ವೇಳೆ ಅರ್ಮೇನಿಯಾ ಬೆಂಬಲಿತ ಜನಾಂಗೀಯ ಅರ್ಮೇನಿಯನ್ ಪಡೆಗಳು ನಾಗೋರ್ನೊ-ಕರಬಾಖ್ ಮಾತ್ರವಲ್ಲದೆ ಸುತ್ತಮುತ್ತಲಿನ ಅಜೆರ್ಬೈಜಾನಿ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಿದವು. ನಂತರದ ಕಾಲು ಶತಮಾನದವರೆಗೆ, ನಾಗೋರ್ನೊ-ಕರಬಾಖ್ ಒಂದು ಹೆಪ್ಪುಗಟ್ಟಿದ ಸಂಘರ್ಷವಾಗಿ ಪರಿವರ್ತನೆಗೊಂಡಿತ್ತು, ಅರ್ಮೇನಿಯನ್ ಮತ್ತು ಅಜೆರ್ಬೈಜಾನಿ ಪಡೆಗಳು ಜನರು ವಾಸವಿಲ್ಲದ ಪ್ರದೇಶದಲ್ಲಿ ಮುಖಾಮುಖಿಯಾದವು ಮತ್ತು ಆಗಾಗ ಘರ್ಷಣೆಗಳು ನಡೆದವು. ಸೆಪ್ಟೆಂಬರ್ 2020 ರಲ್ಲಿ, ಅಜೆರ್ಬೈಜಾನ್ ಈ ಪ್ರದೇಶವನ್ನು ವಶಪಡಿಸಿಕೊಳ್ಳಲು ಪೂರ್ಣ ಪ್ರಮಾಣದ ದಾಳಿಯನ್ನು ಪ್ರಾರಂಭಿಸಿತು. ಈ ಭೀಕರ ದಾಳಿಯು ಆರು ವಾರಗಳ ಕಾಲ ನಡೆದಿತ್ತು.
ರಷ್ಯಾ ಮಧ್ಯಸ್ಥಿಕೆಯೊಂದಿಗೆ ಯುದ್ಧವು ಕೊನೆಗೊಂಡಿತ್ತು. ಈ ಮೂಲಕ ಅಜರ್ಬೈಜಾನ್ ನಾಗೋರ್ನೊ-ಕರಬಾಖ್ ಕೆಲವು ಭಾಗಗಳು ಮತ್ತು ಈ ಹಿಂದೆ ಅರ್ಮೇನಿಯನ್ನರು ಆಕ್ರಮಿಸಿಕೊಂಡಿದ್ದ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳ ಮೇಲೆ ನಿಯಂತ್ರಣವನ್ನು ಮರಳಿ ಪಡೆಯಿತು. ಈ ವೇಳೆ ಲಾಚಿನ್ ಕಾರಿಡಾರ್ ತೆರೆದಿರುವುದನ್ನು ಖಚಿತಪಡಿಸಿಕೊಳ್ಳುವುದು ಸೇರಿದಂತೆ ಶಾಂತಿಯನ್ನು ಕಾಪಾಡಿಕೊಳ್ಳಲು ರಷ್ಯಾ 2,000 ಸೈನಿಕರ ಶಾಂತಿಪಾಲನಾ ಪಡೆಯನ್ನು ಅಲ್ಲಿಗೆ ಕಳುಹಿಸಿತು.
ಪ್ರಸ್ತುತ ವಿವಾದ:ಕಳೆದ ವರ್ಷಡಿಸೆಂಬರ್ ಮಧ್ಯದಲ್ಲಿ, ಪರಿಸರ ಕಾರ್ಯಕರ್ತರು ಎಂದು ಹೇಳಿಕೊಳ್ಳುವ ಅಜೆರಿಗಳು ಆರ್ಮೇನಿಯನ್ನರ ಕಾನೂನುಬಾಹಿರ ಗಣಿಗಾರಿಕೆಯನ್ನು ವಿರೋಧಿಸುತ್ತಿರುವುದಾಗಿ ಹೇಳಿ ರಸ್ತೆಯನ್ನು ನಿರ್ಬಂಧಿಸಲು ಮುಂದಾಗಿದ್ದರು. ಈ ಪ್ರತಿಭಟನೆಗಳನ್ನು ಅಜೆರ್ಬೈಜಾನ್ ಆಯೋಜಿಸಿದೆ ಎಂದು ಅರ್ಮೇನಿಯಾ ವಾದಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಅಜೆರ್ಬೈಜಾನ್, ಅರ್ಮೇನಿಯನ್ನರು ಕದನವಿರಾಮದ ನಿಯಮಗಳನ್ನು ಉಲ್ಲಂಘಿಸಿ ನಾಗೋರ್ನೊ-ಕರಬಾಖ್ಗೆ ಲ್ಯಾಂಡ್ ಮೈನ್‌ಗಳನ್ನು ಸಾಗಿಸಲು ಕಾರಿಡಾರ್ ಅನ್ನು ಬಳಸಿದ್ದಾರೆ ಎಂದು ಆರೋಪಿಸಿದೆ.